ಬಳ್ಳಾರಿ : ಬಳ್ಳಾರಿಯಲಿ 19.10 ಲಕ್ಷ ಮೌಲ್ಯದ 19 ಕೆಜಿ ಗಾಂಜಾ ಜಪ್ತಿ ಮಾಡಿ ಕೊಳ್ಳಲಾಗಿದೆ. ಬಳ್ಳಾರಿ ನಗರ ಪೊಲೀಸರಿಂದ ಇಬ್ಬರು ಆರೋಪಿಗಳನ್ನು ಕೂಡ ಬಂಧಿಸಲಾಗಿದೆ.
ಆರೋಪಿಗಳಾದ ವಾಹಿದ್ (38) ಪಿ ಚಾಂದ್ ಪಾಷಾ (40) ಆರೋಪಿಗಳಾಗಿದ್ದು ಉಳಿದ ನಾಲ್ವರು ಆರೋಪಿಗಳಾಗಿ ಪೊಲೀಸರು ಇದೀಗ ಹುಡುಕಾಟ ನಡೆಸುತ್ತಿದ್ದಾರೆ. ಆರು ತಿಂಗಳಲ್ಲಿ 75 ಕೆಜಿ ಗಾಂಜಾವನ್ನು ಸೀಜ್ ಮಾಡಿದ ಬಳ್ಳಾರಿ ಪೊಲೀಸರು, ಇಲ್ಲಿಯವರೆಗೆ ಒಟ್ಟು 13 ಗಾಂಜಾ ಪ್ರಕರಣಗಳಲ್ಲಿ 18 ಆರೋಪಿಗಳು ವಶಕ್ಕೆ ಪಡೆಯಲಾಗಿದೆ. ಬಳ್ಳಾರಿ ಸಾಹೇಬರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.