ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವಗಳನ್ನು ಪಡೆಯುತ್ತಿದೆ. ಇದೀಗ ಈ ಒಂದು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿದ ಆರೋಪಿಗಳಿಗೆ ನಟ ದರ್ಶನ್ ನೀಡಿದ 30 ಲಕ್ಷ ರೂಪಾಯಿಗಳನ್ನು ಪ್ರಕರಣದ ಎ 14 ಆರೋಪಿ ಪ್ರದೋಶ್ ಹಣ ಹಂಚಿದ್ದಾನೆ ಎಂದು ತಿಳಿದುಬಂದಿದೆ.
ಹೌದು ರೇಣುಕಾ ಸ್ವಾಮಿ ಕೊಲೆಯ ನಂತರ ಆತನ ಶವವನ್ನು ಸಾಗಿಸಲು ನಟ ದರ್ಶನ್ ಅವರು 30 ಲಕ್ಷ ನೀಡಿದ್ದರು ಎಂದು ಈಗಾಗಲೇ ಪ್ರದೋಷ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಇದೀಗ ಒಂದು ಹೇಳಿಕೆಗೆ ಸಂಬಂಧಪಟ್ಟಂತೆ ಪ್ರದೋಷ ಕೊಲೆ ಮಾಡಿದ ನಂತರ ಆರೋಪಿಗಳನ್ನು ತನ್ನ ನಿವಾಸಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲದೆ ಈತ ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಕೂಡ ಆಗಿದ್ದ ಎನ್ನಲಾಗಿದೆ.
ಪ್ರದೋಷ್ ಮನೆಯಲ್ಲಿರೋ ಸಿಸಿಟಿವಿಯನ್ನು ಇದೀಗ ಪೊಲೀಸರು ಡಿವಿಆರ್ ವಶಕ್ಕೆ ಪಡೆದುಕೊಂಡಿದ್ದಾರೆ. ಕೃತ್ಯಕ್ಕೂ ಮೊದಲು ಆರೋಪಿಗಳು ಎಲ್ಲೆಲ್ಲಿ ಹೋಗಿದ್ದರು? ಹಾಗೂ ಮರ್ಡರ್ ಮಾಡಿದ ಬಳಿಕ ಯಾವ ಕಡೆ ಹೋಗಿದ್ದಾರೆ? ಹೀಗೆ ಎಲ್ಲವನ್ನು ಪೊಲೀಸ್ ತಂಡ ಇದೀಗ ಮ್ಯಾಪಿಂಗ್ ಮಾಡುತ್ತಿದ್ದಾರೆ. ಮೊಬೈಲ್, ಟ್ರಾವೆಲ್ ಹಿಸ್ಟರಿ, ಸಿಸಿಟಿವಿ ಹುಡುಕಿ ಮ್ಯಾಪಿಂಗ್ ಮಾಡುತ್ತಿದ್ದಾರೆ.