ಬೆಂಗಳೂರು : ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ತುರ್ತು ನಿರ್ವಹಣಾ ಕೆಲಸಗಳನ್ನು ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ರಾಮನಗರ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಈ ಕುರಿತು ಬೆಸ್ಕಾಂ ಮಾಧ್ಯಮ ಪ್ರಕಟನೆಯಲ್ಲಿ ಬೆಂಗಳೂರು ನಗರದ ಆಲೋ ಪ್ರದೇಶಗಳಲ್ಲಿ ಬೆಳಿಗ್ಗೆ 10:30 ರಿಂದ ಸಾಯಂಕಾಲ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಆಗಲಿದ್ದು, ಅದೇ ರೀತಿ ರಾಮನಗರದಲ್ಲಿ 10.30 ರಿಂದ 3 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಬೆಂಗಳೂರಿನಲ್ಲಿ ಯಾವ್ಯಾವ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ?
ಬೆಂಗಳೂರಿನ, ಆರ್ಟಿ ನಗರ, ಗಂಗಾ ನಗರ, ಚೋಳನಗರ, ಹೊರ ವರ್ತುವಲ್ ರಸ್ತೆ, ಕರಿಯಪ್ಪ ಲೇಔಟ್, ಆಶ್ರಮ ರಸ್ತೆ, ಆನಂದನಗರ ಮೊದಲನೇ ಬ್ಲಾಕ್, ಗುಡ್ಡಪ್ಪರೆಡ್ಡಿ ಲೇಔಟ್, ಹೆಬ್ಬಾಳ, ಜಯಮಹಲ್ ಮೊದಲನೇ ಬ್ಲಾಕ್, ನಂದಿದುರ್ಗ ರಸ್ತೆ, ಮರಪ್ಪ ಗಾರ್ಡನ್, ಜೆಸಿನಗರ, ಮಿಲ್ಲರ್ಸ್ ರಸ್ತೆ, ಗಂಗಾನಗರ, ಚಾಮುಂಡಿನಗರ, ದಿನ್ನುರ, ಪಿ&ಟಿ ಕಾಲೋನಿ, ಇಎಕ್ಸ್ ಸರ್ವಿಸ್ ಮೆನ್ ಕಾಲೋನಿ, ಎಮ್ಎಲ್ಎ ಲೇಔಟ್, ಗಂಗಾನಗರ, ಆರ್ಬಿವೈ ಕಾಲೋನಿ, ಹೆಚ್ಎಮ್ಟಿ ಲೇಔಟ್, ವಸಂತಪ್ಪ ಬ್ಲಾಕ್ ಇತ್ಯಾದಿ.
ರಾಮನಗರದಲ್ಲಿ ಯಾವ್ಯಾವ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ?
ಹುನ್ನಾಸಹನಹಳ್ಳಿ, ಕೊನಗಲ, ಯರಬನಗರದಲ್ಲಿ ವಿದ್ಯುತ್ ಕಟ್ ಆಗಲಿದೆ. ಅಲ್ಲದೆ ಮಾಗಡಿ ಉಪವಿಭಾಗ ಪ್ರದೇಶದ ಮತ್ತೀಕೆರೆ, ಹೆಲಿಗೆಹಳ್ಳಿ ಉಪವಿಭಾಗ, ಬಸಪಾನ ದೊಡ್ಡಿ, ಎಲಿಗೆಹಳ್ಳಿ, ಗೆಜ್ಜೆಗರಗುಪ್ಪೆ. ಕೊಳ್ಳಿಗನಹಳ್ಳಿ ಪಂಚಾಯಿತಿ, ಟಿ-ಹೊಸಹಳ್ಳಿ ಪಂಚಾಯತಿ ಮತ್ತು ಚೇಳೂರು ಪಂಚಾಯಿತಿ ವ್ಯಾಪ್ತಿಯ ಹಾರೋಹಳ್ಳಿ ಟೌನ್, ಹಾರೋಹಳ್ಳಿ ಕೈಗಾರಿಗಾ ಪ್ರದೇಶ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.