ಬೆಂಗಳೂರು : ಜ್ಯುವೆಲರಿ ಶಾಪ್ ಗೆ ನುಗ್ಗಿದ ಕಳ್ಳರು ಮಾಲೀಕರಿಗೆ ಗನ್ ತೋರಿಸಿ ಕೇವಲ 30 ಸೆಕೆಂಡುಗಳಲ್ಲಿ ಸುಮಾರು 60 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿರುವ ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿಯ ಲಕ್ಷ್ಮಿಪುರದಲ್ಲಿ ನಡೆದಿದೆ.
ಹೌದು ಕೇವಲ 30 ಸೆಕೆಂಡಿನಲ್ಲಿ 60 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ ಮಾಡಲಾಗಿದೆ. ಸಿನಿಮಾ ಸ್ಟೈಲ್ ನಲ್ಲಿ ಜುವೆಲ್ಲರಿ ಶಾಪ್ ನಲ್ಲಿ ದರೋಡೆ ಮಾಡಲಾಗಿದೆ. ಮಾದನಾಯಕನಹಳ್ಳಿಯ ಲಕ್ಷ್ಮಿಪುರದಲ್ಲಿ ಈ ಒಂದು ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಗನ್ ತೋರಿಸಿ ಚಿನ್ನಾಭರಣ ದೋಚಿದ್ದಾರೆ.
ಒಬ್ಬ ಕಳ್ಳ ಗನ್ ಹಿಡಿದು ಮಾಲೀಕರಿಗೆ ಬೆದರಿಕೆ ಹಾಕುತ್ತಿದ್ದ, ಮತ್ತೊಬ್ಬ ಚಿನ್ನಭಾರಣವನ್ನು ಚೀಲಕ್ಕೆ ತುಂಬಿಕೊಳ್ಳುತ್ತಿದ್ದ. ಇನ್ನೊಬ್ಬ ಕಳ್ಳ ಹೊರಗೆ ಬೈಕ್ ನಲ್ಲಿ ಕಾಯುತ್ತಿದ್ದ. ಹಾಗಾಗಿ ಇದು ಮೊದಲೇ ಪ್ಲಾನ್ ಮಾಡಿ ದರೋಡೆ ಮಾಡಿದಂತಿದೆ. ಕೆಲವೇ ಸೆಕೆಂಡಿನಲ್ಲಿ ಚಿನ್ನಾಭರಣಗಳನ್ನು ದೋಚಿ ಅಲ್ಲಿಂದ ಪರಾರಿಯಾಗಿದ್ದಾರೆ. 750 ಗ್ರಾಂ ಗಿಂತ ಹೆಚ್ಚು ಚಿನ್ನ ಕದ್ದು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಒಂದು ಕಳ್ಳರ ಕೃತ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.