ಕರ್ನೂಲ್ : ಬಿಸ್ಕತ್ತು ಇಷ್ಟಪಡದವರು ಬಹುತೇಕ ಕಮ್ಮಿ.. ಮಕ್ಕಳಿಂದ ವಯಸ್ಸಾದವರ ತನಕ ಇಷ್ಟಪಟ್ಟು ಬಿಸ್ಕತ್ತು ತಿನ್ನುತ್ತಾರೆ. ಇನ್ನು ಹಟ ಮಾಡಿದ್ರೆ ಸಾಕು ಬಿಸ್ಕತ್ತು ಕೊಡಿಸುವ ಪೋಷಕರಿದ್ದಾರೆ. ಆದರೆ, ಅಂತಹ ಬಿಸ್ಕತ್ ಪ್ಯಾಕೆಟ್ ತೆರೆದಾಗ ಅದರಲ್ಲಿ ಹುಳುಗಳು ಕಾಣಿಸಿಕೊಂಡ ಆಘಾತಕಾರಿ ಘಟನೆ ಕರ್ನೂಲ್ ಜಿಲ್ಲೆಯ ಆದೋನಿಯಲ್ಲಿ ನಡೆದಿದೆ. ಮಕ್ಕಳಿಗೆ ಬಿಸ್ಕೆಟ್ ಕೊಡಿಸಿದ ತಂದೆ ಇದನ್ನು ನೋಡಿ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾನೆ. ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸ್ಥಳೀಯರ ಪ್ರಕಾರ, ಆದೋನಿ ಪಟ್ಟಣದ ಎಂಎಂ ಕಾಲೋನಿಯ ಮನೋಜ್ ಕುಮಾರ್ ಎಂಬುವರು ತಮ್ಮ ಮಗುವಿಗೆ ಬಿಸ್ಕತ್ ಖರೀದಿಸಲು ಅಂಗಡಿಗೆ ತೆರಳಿ ಪ್ರಸಿದ್ಧ ಕಂಪನಿಯೊಂದರಿಂದ ಬಿಸ್ಕೆಟ್ ಪ್ಯಾಕೆಟ್ ಖರೀದಿಸಿದ್ದರು.
ಬಿಸ್ಕತ್ ಪ್ಯಾಕೆಟ್’ನಲ್ಲಿ ಹುಳುಗಳು ಪತ್ತೆ
ಮಗುವಿಗೆ ತಿನ್ನಿಸಲು ಪ್ಯಾಕೆಟ್ ತೆರೆದಾಗ ಅದರಲ್ಲಿ ಹುಳುಗಳು ಕಂಡು ಬೆಚ್ಚಿಬಿದ್ದಿದ್ದಾನೆ. ಹೈಡ್ ಅಂಡ್ ಸಿಕ್ ದೊಡ್ಡ ಹೆಸರಿನ ಕಂಪನಿಯ ಬಿಸ್ಕತ್’ನಲ್ಲಿ ಹೀಗೆ ಆಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಇಂತಹ ಬಿಸ್ಕೆಟ್ ತಿಂದರೆ ಮಕ್ಕಳ ಆರೋಗ್ಯ ಏನಾಗುತ್ತೆ ಎಂದರು. ಗುಣಮಟ್ಟವಿಲ್ಲದ ಬಿಸ್ಕತ್ ತಯಾರಿಸಿ ಬ್ರಾಂಡೆಡ್ ಕಂಪನಿಗಳ ಕವರ್’ಗಳನ್ನ ಪ್ಯಾಕ್ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ. ಇದಕ್ಕೂ ಮುನ್ನ ಐಸ್ ಕ್ರೀಂನಲ್ಲಿ ಮಾನವನ ಬೆರಳು ಹಾಗೂ ಚಿಪ್ಸ್ ಪ್ಯಾಕೆಟ್’ನಲ್ಲಿ ಸತ್ತ ಕಪ್ಪೆ ಕಾಣಿಸಿಕೊಂಡ ವರದಿಗಳು ಸಂಚಲನ ಮೂಡಿಸಿದ್ದವು.
వామ్మో.. హైడ్ అండ్ సీక్ బిస్కెట్ ప్యాకెట్లలో పురుగులు
కర్నూలు – ఆదోనిలో హైడ్ అండ్ సీక్ బిస్కెట్ ప్యాకెట్ ఓపెన్ చేయగా దాంట్లో పురుగులు ఉండటంతో కంగుతిన్న ఓ చిన్నారి తల్లిదండ్రులు. pic.twitter.com/9GcqwWa0YV
— Telugu Scribe (@TeluguScribe) June 25, 2024
ಯಾತ್ರಾರ್ಥಿಗಳೇ ಗಮನಿಸಿ: ರಾಮೇಶ್ವರ-ಕನ್ಯಾಕುಮಾರಿ-ಮಧುರೆ-ತಿರುವನಂತಪುರಕ್ಕೆ ವಿಶೇಷ ಪ್ರವಾಸ ಆಯೋಜನೆ
ರೈಲ್ವೆ ಪ್ರಯಾಣಿಕರಿಗೆ ಮಹತ್ವದ ಮಾಹಿತಿ: ಈ ರೈಲುಗಳ ಸೇವೆಯಲ್ಲಿ ಬದಲಾವಣೆ, ಸಂಚಾರ ರದ್ದು | Indian Railway
BREAKING : ಡಕ್ವರ್ತ್ ಲೂಯಿಸ್ ನಿಯಮದ ಸಹ ಸೃಷ್ಟಿಕರ್ತ ‘ಫ್ರಾಂಕ್ ಡಕ್ವರ್ತ್’ ಇನ್ನಿಲ್ಲ |Frank Duckworth No More