ಹಾಸನ: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸೂರಜ್ ರೇವಣ್ಣ ಜೈಲುಪಾಲಾಗಿದ್ದಾರೆ. ಅವರ ಪರವಾಗಿ, ಸಂತ್ರಸ್ತ ವ್ಯಕ್ತಿಯ ವಿರುದ್ಧವೇ ದೂರು ನೀಡಿದ್ದಂತ ಸೂರಜ್ ಆಪ್ತ ಶಿವಕುಮಾರ್ ಈಗ ತಿರುಗಿ ಬಿದ್ದಿದ್ದಾನೆ. ನಾಪತ್ತೆಯ ಬಳಿಕ ದಿಢೀರ್ ಪ್ರತ್ಯಕ್ಷವಾಗಿರುವಂತ ಶಿವಕುಮಾರ್, ಸೂರಜ್ ರೇವಣ್ಣ ವಿರುದ್ಧವೇ ದೂರು ನೀಡಿದ್ದಾರೆ.
ಹಾಸನದ ಹೊಳೆನರಸೀಪುರ ನಗರ ಪೊಲೀಸ್ ಠಾಣೆಗೆ ನಾಪತ್ತೆಯಾಗಿದ್ದಂತ ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ದಿಢೀರ್ ಪ್ರತ್ಯಕ್ಷವಾಗಿ ಭೇಟಿ ನೀಡಿ, ಸೂರಜ್ ರೇವಣ್ಣ ವಿರುದ್ಧ ದೂರು ನೀಡಿದ್ದಾರೆ.
ಅಂದಹಾಗೇ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ವಿರುದ್ಧವೂ ಸಂತ್ರಸ್ತ ನನಗೆ ಆಗಿರುವ ಅನ್ಯಾಯದ ಬಗ್ಗೆ ಶಿವಕುಮಾರ್ ಬಳಿ ಹೇಳಿದ್ದೆ. ಆ ಬಳಿಕ ಶಿವಕುಮಾರ್ ಹಾಗೂ ಸೂರಜ್ ಸೇರಿ ಇಬ್ಬರೂ ನನ್ನ ಬ್ಲ್ಯಾಕ್ ಮೇಲೆ ಮಾಡಿದ್ದಾರೆ ಎಂಬುದಾಗಿ ದೂರು ನೀಡಿದ್ದರು.
BREAKING: ದೆಹಲಿ CM ಅರವಿಂದ್ ಕೇಜ್ರಿವಾಲ್ಗೆ ಜೈಲೇಗತಿ, ಜಾಮೀನು ಆದೇಶಕ್ಕೆ ದೆಹಲಿ ಹೈಕೋರ್ಟ್ ತಡೆ