ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ನಿವೃತ್ತ ವೇತನದ ಕುರಿತಂತೆ ರಾಜ್ಯ ಸರ್ಕಾರವು ನಿವೃತ್ತಿ ವೇತನ ನಿಯಮಗಳನ್ನು ಸರಳೀಕರಿಸಿದ್ದು, ನಿವೃತ್ತಿ ವೇತನ ಕಡತಗಳನ್ನು ವಿಳಂಬ ಮಾಡದೆ ಸಿದ್ದಪಡಿಸಬೇಕು. ವಿಳಂಬವಾದಲ್ಲಿ ನೌಕರನಿಗೆ ಆರ್ಥಿಕ ತೊಂದರೆಗಳಾಗುತ್ತವೆ ಎಂದು ಸೂಚನೆ ನೀಡಲಾಗಿದೆ.
ಕಚೇರಿ ಮುಖ್ಯಸ್ತರು ನಿವೃತ್ತರಾಗುವ ನಾನ್ ಗೆಜೆಟೆಡ್ ನೌಕರನಿಂದ ನಮೂನೆ-1ಬಿ ನಲ್ಲಿ ಒಂದು ವರ್ಷ ಮೊದಲೇ ವಿವರಗಳನ್ನು ಪಡೆದಿರಬೇಕು. ಕಚೇರಿ ಮುಖ್ಯಸ್ತರು ನಿವೃತ್ತರಾಗುವ ಗೆಜೆಟೆಡ್ ನೌಕರನಿಂದ ನಮೂನೆ-1ಬಿ ನಲ್ಲಿ ಒಂದು ವರ್ಷ ಮೊದಲೇ ವಿವರಗಳನ್ನು ಪಡೆದು ಮಹಾಲೇಖಪಾಲರಿಗೆ ಸಲ್ಲಿಸಬೇಕು. ನಿವೃತ್ತನಾಗುವ ಸರ್ಕಾರಿ ನೌಕರನಿಂದ ಪಡೆದ ನಮೂನೆ-1ಬಿ ವಿವರಗಳನ್ನು ಮತ್ತು ಇತರೆ ದಾಖಲೆಗಳನ್ನು ನಿವೃತ್ತಿ ದಿನಾಂಕಕ್ಕಿಂತ ಮೂರು ತಿಂಗಳು ಮುಂಚಿತವಾಗಿ ಮಹಾಲೇಖಪಾಲರಿಗೆ ಕಳುಹಿಸಬೇಕು.
285 ಮೇರೆಗೆ ನಿವೃತ್ತರಾಗುವ ನೌಕರರ ವಿವರಗಳನ್ನು 1 ಬಿ ನಮೂನೆಯಲ್ಲಿ ಸ್ವಯಂ ನಿವೃತ್ತಿ ಅಂಗೀಕಾರ ಆದೇಶ ಬಂದ ನಂತರ ಪಡೆದು ನಿವೃತ್ತಿ ವೇತನ ಕಡತ ತಯಾರಿಸಬೇಕು. ಮಹಾಲೇಖಪಾಲರು ಪ್ರತಿ ವರ್ಷದ ಜನವರಿ31 ಮತ್ತು ಜುಲೈ-31 ನಲ್ಲಿ ಮುಂದಿನ 12 ಮತ್ತು 18 ತಿಂಗಳಲ್ಲಿ ನಿವೃತ್ತರಾಗುವ ಸೇವಾ ಪುಸ್ತಕವಿಲ್ಲದ ಗೆಜೆಟೆಡ್ ಅಧಿಕಾರಿಗಳ ಪಟ್ಟಿಯನ್ನು ತಯಾರಿಸಿ ಇಲಾಖಾ ಮುಖ್ಯಸ್ಥರಿಗೆ ಕಳುಹಿಸುತ್ತಾರೆ. ಇಲಾಖಾ ಮುಖ್ಯಸ್ಥರು ಮಹಾಲೇಖಪಾಲರು ಕೇಳಿರುವ ಗೆಜೆಟೆಡ್ ಅಧಿಕಾರಿಗಳ ಸೇವಾವಹಿಗಳನ್ನು ಕಳುಹಿಸುತ್ತಾರೆ. ಈ ಪ್ರಕ್ರಿಯೆ ಒಂದು ತಿಂಗಳಲ್ಲಿ ಪೂರ್ಣವಾಗಬೇಕು. ಇಲಾಖಾ ಮುಖ್ಯಸ್ಥರೇ ಇವರುಗಳ ಬೇಬಾಕಿ ಪ್ರಮಾಣ ಪತ್ರವನ್ನು ಕೂಡ ಕಳುಹಿಸಿಕೊಡ ಬೇಕಾಗಿರುತ್ತದೆ. 15 ದಿನ ಮುಂಚಿತವಾಗಿಯೇ ಮಹಾಲೇಖಪಾಲರು ಪಿಂಚಣಿ ಪ್ರಾಧಿಕಾರಣವನ್ನು ಕಳುಹಿಸಿಕೊಡುವ ವ್ಯವಸ್ಥೆ ಮಾಡುತ್ತಾರೆ.
ನಿವೃತ್ತಿ ವೇತನ ಅರ್ಜಿಯ ಜೊತೆಯಲ್ಲಿ ಇರಬೇಕಾದ ದಾಖಲೆಗಳು
* ಯಥಾವಿಧಿ ಪೂರ್ತಿಯಾಗಿರುವ ಸೇವಾ ಪುಸ್ತಕ
* ನಮೂನೆ-1
* ಅಶಕ್ತತಾ ಪ್ರಮಾಣಪತ್ರ
* ಸೇವಾ ವಿವರಣೆಗಳ ತಃಖ್ಯೆ ನಮೂನೆ-7
* ಪಿಂಚಣಿ ಲೆಕ್ಕಾಚಾರ ತಃಖ್ಯೆ
* ಸರಾಸರಿ ಉಪಲಬ್ದಗಳ ವಿವರ
* ಕೊನೆಯ ವೇತನ ಪ್ರಮಾಣ ಪತ್ರ
ನಿವೃತ್ತಿ ವೇತನ ಅರ್ಜಿಯ ಜೊತೆಯಲ್ಲಿ ಇರಬೇಕಾದ ದಾಖಲಾತಿಗಳು[333
* ಕುಟುಂಬದ ಸದಸ್ಯರ ವಿವರ ತಃಖ್ಯೆ:ಹೆಸರು /ಸಂಬಂಧ/ವಯಸ್ಸು/ಜನ್ಮದಿನಾಂಕ/ವಿವಾಹಿತ/ಅವಿವಾಹಿತ
* ಖಾಯಂ ವಿಳಾಸ
* ಖಜಾನೆ ವಿಳಾಸ
* ಯಾವುದೇ ಉಪದಾನ ಸ್ವೀಕರಿಸಿಲ್ಲದಿರುವ ಬಗ್ಗೆ ಘೋಷಣೆ
* ವಸೂಲಾತಿಗಾಗಿ ಒಪ್ಪಿಗೆ ಪತ್ರ
* ಬೇಬಾಕಿ ಪ್ರಮಾಣ ಪತ್ರ
* ಇಲಾಖಾ ವಿಚಾರಣೆಗಳು ಬಾಕಿ ಇಲ್ಲದಿರುವ ಬಗ್ಗೆ ಪ್ರಮಾಣ ಪತ್ರ
* ಮುಂಗಡಗಳು ಬಾಕಿ ಇಲ್ಲದಿರುವ ಬಗ್ಗೆ ಪ್ರಮಾಣ ಪತ್ರ
* ಎತ್ತರ ಗುರುತು ಚೀಟಿ [3 ಪ್ರತಿ]
* ಜಂಟಿ ಭಾವ ಚಿತ್ರಗಳು [3 ಪ್ರತಿ]
* ಮಾದರಿ ಸಹಿಗಳು[3 ಪ್ರತಿ]
* ನಿವೃತ್ತಿ ವೇತನ, ಉಪದಾನ, ಪರಿವರ್ತಿತ ಪಿಂಚಣಿ ಮತ್ತು ಕುಟುಂಬ ಪಿಂಚಣಿ ಲೆಕ್ಕಾಚಾರ ಸಂಖ್ಯೆ.