ರಾಮನಗರ: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಗೆದ್ದು, ಕೇಂದ್ರ ಸಚಿವರಾಗಿದ್ದಾರೆ. ಈ ಬೆನ್ನಲ್ಲೇ ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಗರಿಗೆದರಿದೆ. ಆ ಬಗ್ಗೆ ಹೆಚ್.ಡಿ ಕುಮಾರಸ್ವಾಮಿ ಏನು ಹೇಳಿದ್ರು ಅಂತ ಮುಂದೆ ಓದಿ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ಒಡಕಿಲ್ಲ. ಗೊಂದಲವಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಗೆ ಸಿ.ಪಿ ಯೋಗೇಶ್ವರ್ ನಿಲ್ಲ ಬಹುದು, ಇಲ್ಲವೇ ಜೆಡಿಎಸ್ ಕಾರ್ಯಕರ್ತರೇ ನಿಲ್ಲಬಹುದು. ಈ ವಿಚಾರದಲ್ಲಿ ಯಾವುದೇ ಗೊಂದಲ, ಒಡಕಿಲ್ಲ ಅಂತ ತಿಳಿಸಿದ್ದಾರೆ.
ನನಗೆ ಚನ್ನಪಟ್ಟಣ ಕ್ಷೇತ್ರವನ್ನು ಬಿಟ್ಟು ಕೊಡೋದಕ್ಕೆ ಮನಸ್ಸಿಲ್ಲ. ನನಗೆ ಮೂರು ಬಾರಿ ಶಸ್ತ್ರ ಚಿಕಿತ್ಸೆ ಆಗಿದೆ. ಈ ನಡುವೆಯೂ ಅಭಿವೃದ್ಧಿ ಕಾರ್ಯ, ಸಾಮಾಜಿಕ ಸೇವೆಯಲ್ಲಿ ತೊಡಗಿದ್ದೇನೆ ಎಂದರು.
ನಾನು ಬದುಕಿರೋವರೆಗೂ ಚನ್ನಪಟ್ಟಣ ಕ್ಷೇತ್ರವನ್ನು ಮರೆಯುವುದಿಲ್ಲ. ನಾನು ಕೇಂದ್ರ ಮಂತ್ರಿಯಾದ ಬಳಿಕ ಕ್ಷೇತ್ರದ ಜನತೆಯನ್ನು ಮರೆಯುವುದಿಲ್ಲ. ಕ್ಷೇತ್ರದ ಜನತೆಯ ಕೆಲಸಗಳನ್ನು ಸದಾ ಮಾಡುತ್ತೇನೆ ಎಂದರು.
ನಾಳೆಯಿಂದ ‘ದ್ವಿತೀಯ ಪಿಯುಸಿ ಪರೀಕ್ಷೆ-3’ ಆರಂಭ: ಹೀಗಿದೆ ‘ವೇಳಾಪಟ್ಟಿ’ | Karnataka 2nd PUC Exam
BIG NEWS : ಕೇಂದ್ರ ಸಚಿವ ʻHDKʼಗೆ ಬಿಗ್ ಶಾಕ್ : ʻದೇವದಾರಿ ಮೈನಿಂಗ್ʼ ಗೆ ತಡೆ ನೀಡಿ ರಾಜ್ಯ ಸರ್ಕಾರ ಆದೇಶ