ನವದೆಹಲಿ : ನೀಟ್ ಮತ್ತು ಯುಜಿಸಿ-ನೆಟ್ ವಿವಾದದ ನಡುವೆ ಪರೀಕ್ಷೆಗಳನ್ನ ಪಾರದರ್ಶಕ, ಸುಗಮ ಮತ್ತು ನ್ಯಾಯಸಮ್ಮತವಾಗಿ ನಡೆಸುವುದನ್ನ ಖಚಿತಪಡಿಸಿಕೊಳ್ಳಲು ಶಿಕ್ಷಣ ಸಚಿವಾಲಯ ಶನಿವಾರ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ಘೋಷಿಸಿದೆ.
ಸಮಿತಿಯಲ್ಲಿರುವ ತಜ್ಞರು ಯಾರಿದ್ದಾರೆ.?
ಇಸ್ರೋದ ಮಾಜಿ ಅಧ್ಯಕ್ಷ ಮತ್ತು ಐಐಟಿ ಕಾನ್ಪುರದ ಬಿಒಜಿ ಅಧ್ಯಕ್ಷ ಡಾ.ಕೆ.ರಾಧಾಕೃಷ್ಣನ್ ಅವರು 7 ತಜ್ಞರ ಸಮಿತಿಯ ನೇತೃತ್ವ ವಹಿಸಲಿದ್ದಾರೆ. ಏಮ್ಸ್ ದೆಹಲಿಯ ಮಾಜಿ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ, ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಬಿ.ಜೆ.ರಾವ್, ಐಐಟಿ ಮದ್ರಾಸ್ನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಮಮೂರ್ತಿ ಕೆ., ಪೀಪಲ್ ಸ್ಟ್ರಾಂಗ್ ಮತ್ತು ಕರ್ಮಯೋಗಿ ಭಾರತ್ ಸಹ ಸಂಸ್ಥಾಪಕ ಪಂಕಜ್ ಬನ್ಸಾಲ್, ಐಐಟಿ ದೆಹಲಿಯ ವಿದ್ಯಾರ್ಥಿ ವ್ಯವಹಾರಗಳ ಡೀನ್ ಪ್ರೊ.ಆದಿತ್ಯ ಮಿತ್ತಲ್, ಜಂಟಿ ಕಾರ್ಯದರ್ಶಿ ಗೋವಿಂದ್ ಜೈಸ್ವಾಲ್ ಸಮಿತಿಯ ಇತರ ಸದಸ್ಯರು. ಶಿಕ್ಷಣ ಸಚಿವಾಲಯ.
NEET UG 2024 : ನಾಳೆ 7 ಕೇಂದ್ರಗಳಲ್ಲಿ 1563 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ : ಈ ‘ನಿಯಮ’ ಪಾಲನೆ ಕಡ್ಡಾಯ!
BREAKING : ಪರೀಕ್ಷೆಗಳನ್ನ ಪಾರದರ್ಶಕ, ಸುಗಮವಾಗಿ ನಡೆಸಲು ಕೇಂದ್ರದಿಂದ ‘ಉನ್ನತ ಮಟ್ಟದ ಸಮಿತಿ’ ರಚನೆ
ಮಾವು ಪ್ರಿಯರಿಗೆ ಶಾಕಿಂಗ್ ನ್ಯೂಸ್ ; ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿವೆ ‘ನಕಲಿ ಮಾವಿನಹಣ್ಣು’