ಕಾರವಾರ : ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ಹೊರ ಬರುವಂತೆ ನಟ ದರ್ಶನ ಭಾವ ಮಂಜುನಾಥ್ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕೈಗಾ ಪ್ರದೇಶದಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನ ಹಾಗೂ ಶನೈಶ್ವರ, ಆಂಜನೇಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ.
ದರ್ಶನ್ ಗೆ ಗ್ರಹಗತಿ ಸರಿಯಲ್ಲಿ, ಮನುಷ್ಯನಿಗೆ ಜೀವಿತಾವಧಿಯಲ್ಲಿ ದೋಷ ನಿವಾರಣೆಗೆ ವಿಶೇಷ ಪೂಜೆ ನಡೆಸಲಾಗುತ್ತದೆ. ಅದರಂತೆ ರೇಣುಕಾಸ್ವಾಮಿ ಪ್ರಕರಣದಿಂದ ಆದಷ್ಟು ಬೇಗ ದರ್ಶನ್ ಹೊರಬರಬೇಕೆಂದು ದರ್ಶನ್ ಸಹೋದರಿ ಪತಿ ಮಂಜುನಾಥ್ ಪೂಜೆ ಸಲ್ಲಿಸಿದ್ದಾರೆ.