ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬೆಂಗಳೂರಿನಲ್ಲಿ ಪೊಲೀಸರು ಮತ್ತೆ ಇಬ್ಬರನ್ನು ಬಂದಿಸಿದ್ದಾರೆ ಎಂದು ತಿಳಿದುಬಂದಿದೆ ಆರೋಪಿಗಳಾದ ಪುನೀತ್ ಮತ್ತು ಹೇಮಂತ್ ನನ್ನು ಇದೀಗ ಪೊಲೀಸರು ಬಂಧಿಸಿದ್ದು,ಇಂದು ಕೋರ್ಟಿಗೆ ಹಾಜರುಪಡಿಸಲಿದ್ದಾರೆ.
ಹೌದು ಪ್ರಕರಣಕ್ಕೆ ಸಂಬಂಧಿಸಿದಂತೆ, ಪುನೀತ್ ಮತ್ತು ಹೇಮಂತ್ ವಿರುದ್ಧ ಶವ ಸಾಗಿಸಲು ಸ್ಕಾರ್ಪಿಯೋ ಕಾರು ನೀಡಿದ್ದ ಆರೋಪ ಕೇಳಿಬಂದಿದ್ದು, ಕಾರಿನ ಮೇಲೆ ರಕ್ತದ ಕಲೆಯನ್ನು ಹೇಮಂತ್ ವಾಶ್ ಮಾಡಿದ್ದ. ಇದೀಗ ಇಬ್ಬರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದು, ಕೋರ್ಟಿಗೆ ಹಾಜರುಪಡಿಸಲಿದ್ದಾರೆ.
ಅಲ್ಲದೆ ಅತ್ತ ಚಿತ್ರದುರ್ಗದಲ್ಲಿ ಕೂಡ ಇಂದು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಎ6 ಆರೋಪಿ ಜಗದೀಶ್ ಹಾಗೂ ಎ7 ಆರೋಪಿ ಅನು ಅಲಿಯಾಸ್ ಅನು ಕುಮಾರ್ ಬಂಧನವಾಗಿದ್ದು ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಒಟ್ಟು ಇಂದು ನಾಲ್ವರು ಅರೆಸ್ಟ್ ಆದಂತಾಗಿದೆ. ಚಿತ್ರದುರ್ಗದಲ್ಲಿ ಇಬ್ಬರು ಹಾಗೂ ಬೆಂಗಳೂರಿನಲ್ಲಿ ಪುನೀತ್ ಮತ್ತು ಹೇಮಂತ್ ಅನ್ನು ಬಂಧಿಸಲಾಗಿದೆ.