ಬೆಂಗಳೂರು : ಪೋಕ್ಸೋ ಪ್ರಕರಣದಲ್ಲಿ ಬಂಧನದ ಭೀತ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಪ್ರಕರಣ ರದ್ದು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾ.ಕೃಷ್ಣ ಎಸ್.ದೀಕ್ಷಿತ್ ರಿದ್ದ ಪೀಠವು ಬಿಎಸ್ ಯಡಿಯೂರಪ್ಪ ಅವರನ್ನು ಬಂಧಿಸಿದಂತೆ ಆದೇಶ ಹೊರಡಿಸಿದೆ.ಈಗಾಗಲೇ ವಿಚಾರಣೆಗೆ ಹಾಜರಾಗಿ ಎಂದು ಎಂದು ನೋಟಿಸ್ ನೀಡಿದ ಬೆನ್ನಲ್ಲೆ ಜೂನ್ 17ರಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಪತ್ರದ ಮೂಲಕ ತಿಳಿಸಿದ್ದರು. ಹಾಗಾಗಿ ಹೈ ಕೋರ್ಟ್ ಜೂನ್ 17ಕ್ಕೆ ಹಾಜರಾಗಿ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಹೌದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ರವರ ಏಕ ಸದಸ್ಯ ಪೀಠ ಈ ಒಂದು ಆದೇಶ ಹೊರಡಿಸಿದ್ದು,ಇದಕ್ಕೂ ಮೊದಲು ಮಾಜಿ ಸಿಎಂ ಯಡಿಯೂರಪ್ಪ ಪರ ವಕೀಲ ಸಿ ವಿ ನಾಗೇಶ್ ರವರು ವಾದ ಮಂಡಿಸಿದ್ದು, ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಕ್ಸೋ ಸೆಕ್ಷನ್ 8ರ ಅಡಿಯಲ್ಲಿ ಕೇಸ್ ದಾಖಲಾಗಿದೆ. ಫೆಬ್ರುವರಿ ಎರಡರ ಘಟನೆ ಬಗ್ಗೆ ಮಾರ್ಚ್ 14ರಂದು ಎಫ್ಐಆರ್ ದಾಖಲಾಗಿದೆ ಎಂದು ಯಡಿಯೂರಪ್ಪ ಪರ ವಕೀಲ ಸಿವಿ ನಾಗೇಶ್ ತಿಳಿಸಿದರು.
ಈ ವೇಳೆ ನ್ಯಾಯಾಧೀಶರು ಯಡಿಯೂರಪ್ಪ ಪರ ವಕೀಲ ಸಿ.ವಿ ನಾಗೇಶ್ ಅವರಿಗೆ ಪೋಕ್ಸೋ ಪ್ರಕರಣದ ದೂರುದಾರರ ಹಿನ್ನೆಲೆ ಕುರಿತು ಪ್ರಶ್ನೆ ಕೇಳಿದರು.ಈ ವೇಳೆ ನಾಗೇಶ್ ಅವರು ದೂರುದಾರ ಮಹಿಳೆ ಕೇಸ್ ಮೇಲೆ ಕೇಸ್ ಹಾಕುತ್ತಾರೆ. ವಿಐಪಿ, ಹಿರಿಯ ಪೋಲಿಸ್ ಅಧಿಕಾರಿಗಳ ಮೇಲೂ ದೂರು ದಾಖಲಾಗಿದೆ. ಬ್ಲಾಕ್ಮೇಲ್ ಮಾಡುವುದೇ ಅವರ ಕೆಲಸ. ಅಲೋಕ್ ಕುಮಾರ, ಭಾಸ್ಕರ್ ರಾವ್ ವಿರುದ್ಧವು ದೂರು ದಾಖಲಿಸಿದ್ದು, ಆಕೆಯ ಮೇಲೆ ಕೂಡ 3 ಪ್ರಕರಣ ದಾಖಲಾಗಿವೆ.
ಈ ವೇಳೆ ಆಕೆ ವೃತ್ತಿ ಏನೆಂದು ಕೇಳುತ್ತಿದ್ದೇನೆ ಎಂದು ಜಡ್ಜ್ ಕೇಳಿದಾಗ ಆಕೆ ಬಿಸಿನೆಸ್ ವುಮೆನ್ ಎಂದು ಹೇಳಿಕೊಂಡಿದ್ದಾರೆ ಎಂದು ನಾಗೇಶ ಅವರು ಜಡ್ಜ್ ಗೆ ತಿಳಿಸಿದರು.ಮಹಿಳೆ ಈಗ ಮೃತಪಟ್ಟಿದ್ದಾರೆ ಎಂದು ಎಜಿ ಶಶಿಕಿರಣಶೆಟ್ಟಿ ಹೇಳಿದರು. ಪುತ್ರಿಯಲ್ಲದೆ ಇಂಜಿನಿಯರ್ ಓದಿದ ಪುತ್ರ ಇದ್ದಾರೆ. ಪತಿ ಪುತ್ರನ ವಿರುದ್ಧವು ಕೇಸ್ ಹಾಕಿದ್ದಾರೆಂದು ಸಿವಿ ನಾಗೇಶ್ ವಾದಿಸಿದ್ದಾರೆ. ಎಲ್ಲಾ ವಕೀಲರು ತಮ್ಮ ಮೋಹನ್ ಬದಿಗೆಟ್ಟು ವಾದಿಸಲು ಈ ವೇಳೆ ಮನವಿ ಮಾಡಿದರು ಈವರೆಗೆ 53 ದೂರುಗಳನ್ನು ನೀಡಿದ್ದಾರೆ ಎಂದು ಎಜಿ ಶಶಿಕಿರಣ್ ಶೆಟ್ಟಿ ತಿಳಿಸಿದರು.
ಒಂದು ತಿಂಗಳಿಗಿಂತ ಹೆಚ್ಚು ಕಾಲ ದೂರು ವಿಳಂಬವಾಗಿದೆ. ಈ ದೂರಿಗೆ ಕನಿಷ್ಠ ಮೂರರಿಂದ ಗರಿಷ್ಠ ಐದು ವರ್ಷಗಳ ಶಿಕ್ಷೆ ಮಾತ್ರವಿದೆ. ಅರೆಸ್ಟ್ ಮಾಡುವ ಅಗತ್ಯವಿಲ್ಲವೆಂದು 41ರ ಅಡಿ ಕೇಸ್ ದಾಖಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ನೀಡಿದ ನೋಟಿಸ್ನಂತೆ ಬಿಎಸ್ ಯಡಿಯೂರಪ್ಪ ಅವರು ಹಾಜರಾಗಿದ್ದರು ಹಾಜರಾದಾಗ ಪೊಲೀಸರು ಅವರ ಧ್ವನಿ ಪರೀಕ್ಷೆಗೆ ಒಳಪಡಿಸಿದರು. ಎಂದು ಅವರು ತಿಳಿಸಿದರು.
ಇದಾದ ಮೇಲು ಕೋರ್ಟಿಗೆ ಮನವಿ ಸಲ್ಲಿಸಿ ಬಂಧನ ವಾರಂಟ್ ಪಡೆದಿದ್ದಾರೆ. ಎಫ್ಐಆರ್ ನಂತರ ತನಿಖೆ ಯಾವಾಗ ಆರಂಭವಾಯಿತು ಎಂದು ನ್ಯಾಯಾಧೀಶರು ಕೇಳಿದಾಗ, ಮಾರ್ಚ್ 14ರ FIR ನಂತರ ಏಪ್ರಿಲ್ 12 ರಂದು ನೋಟಿಸ್ ನೀಡಿದ್ದಾರೆ ಅಲ್ಲಿಯವರೆಗೆ ಪೊಲೀಸರು ಏನು ಮಾಡಿದ್ದಾರೆ ಎಂಬುದು ತಿಳಿದಿಲ್ಲ ಎಂದು ನಾಗೇಶ ತಿಳಿಸಿದಾಗ,ಈಗ ಬಿ ಎಸ್ ಯಡಿಯೂರಪ್ಪ ಅವರ ಬಂಧನ ಏಕೆ ಬೇಕಾಗಿದೆ ಎಂದು ನ್ಯಾಯಾಧೀಶರು ಕೇಳಿದಾಗ ಜೂನ್ 12ರಂದು ವಿತರಣೆಗೆ ಹಾಜರಾಗಬೇಕೆಂದು ಬಿಎಸ್ ವೈ ಗೆ ನೋಟಿಸ್ ನೀಡಲಾಗಿತ್ತು. ಮೊಬೈಲ್ ನಲ್ಲಿದ್ದ ವಿಡಿಯೋ ಧ್ವನಿ ಪರೀಕ್ಷೆ ಮಾಡಲು ನೋಡಿ ನೀಡಲಾಗಿತ್ತು ಹಾಜರಾಗದಕ್ಕೆ ಬಂಧನದ ವಾರೆಂಟ್ ಪಡೆಯಲಾಗಿದೆ.
ಜೂನ್ 12ರಂದು ತನಿಖೆಗೆ ಹಾಜರಾಗದಿದ್ದರಿಂದ ವಾರೆಂಟ್ ಪಡೆಯಲಾಗಿದೆ. ಆರೋಪಿ ಟಾಮ್ ಡಕ್ ಅಂಡ್ ಹ್ಯಾರಿಯಲ್ಲ. ಮಾಜಿ ಸಿ ಎಮ್ ತನಿಖೆಗೆ ಬರಲ್ಲವೆಂದು ಹೇಗೆ ಭಾವಿಸಿದಿರಿ? ದೂರುದಾರರಿಗೆ ಹಣ ನೀಡಿ ಪ್ರಕರಣ ಮೆಚ್ಚಿ ಹಾಕಲು ಯತ್ನ ಹೀಗಾಗಿ ಬಂಧನದ ಅಗತ್ಯವಿದೆ ಎಂದು ವಾರಂಟ್ ಪಡೆಯಲಾಗಿದೆ. ನೀವೇ ಬಂದಿಸಲು ಅವಕಾಶವಿರುವಾಗ ವಾರಂಟ್ ಅಗತ್ಯವೇನಿತ್ತು ಎಂದು ಜಡ್ಜ್ ಕೇಳಿದಾಗ, ಹೊರ ರಾಜ್ಯದಲ್ಲಿ ಬಂಧನವಾಗಬೇಕೆಂದರೆ ವಾರಂಟ್ ಪಡೆಯಲಾಗಿದೆ ಎಂದು ಸಂತ್ರಸ್ತೆ ಸಹೋದರನ ಪರ ವಕೀಲ ಬಾಲನ್ ವಾದ ಮಂಡಿಸಿದರು. ಬಿಎಸ್ ವೈ ಬಂಧನಕ್ಕೆ ನಿರ್ದೇಶನ ಕೋರಿ ಸಂತ್ರಸ್ತೆಯ ಸಹೋದರ ಅರ್ಜಿ ಸಲ್ಲಿಸಿದ್ದಾನೆ.