ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿದಂತೆ ಹದಿಮೂರು ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ ಯಾವಾಗ ನಟ ದರ್ಶನ್ ಅವರ ಬಂಧನವಾಯಿತು ಆಗ ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ಟ್ರೊಲರ್ ಗಳು ಕೆಟ್ಟದಾಗಿ ಪೋಸ್ಟ್ ಮಾಡಲು ಆರಂಭಿಸಿದ್ದಾರೆ. ಇದೀಗ ಟ್ರೋಲರ್ಸ್ ಗಳಿಗೆ ಪೊಲೀಸರು ಎಚ್ಚರಿಕೆ ನೀಡಬೇಕು ಎಂದು ಮೋಹಕ ತಾರೆ ನಟಿ ರಮ್ಯಾ ಟೋಲರ್ಸ್ ಗಳಿಗೆ ಚಳಿ ಬಿಡಿಸಿದ್ದಾರೆ.
ಈ ಕುರಿತಂತೆ ಪೋಸ್ಟ್ ಮಾಡಿರುವ ಅವರು, ಸಾಮಾಜಿಕ ಜಾಲತಾಣದಲ್ಲಿ ಬ್ಲಾಕ್ ಅನ್ನೋ ಆಪ್ಷನ್ ಇದೆ.ನಮಗೆ ಇಷ್ಟ ಇಲ್ಲದವರು,ಟ್ರೋಲ್ ಮಾಡುವವರು, ಕೆಟ್ಟ ಕಮೆಂಟ್ ಮೂಲಕ ಕಿರುಕುಳ ಕೊಡುವವರು ಇರುತ್ತಾರೆ. ನನ್ನನ್ನು ಸೇರಿಸಿ ನಟ ನಟಿಯರನ್ನು ಟ್ರೋಲ್ ಮಾಡುವ ಜನರಿದ್ದಾರೆ. ಕೆಟ್ಟ ಮೆಸೇಜ್ ಕಳುಹಿಸಿದರೆ ಕೊಲ್ಲುವ ಶೋಷಣೆಯ ಸಮಾಜದಲ್ಲಿ ಇದ್ದೇವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕೆಲವೊಮ್ಮೆ ಟ್ರೊಲ್ ಮಾಡುವವರಿಗೆ ಪೊಲೀಸರು ಎಚ್ಚರಿಕೆ ನೀಡಬೇಕು. ಟ್ರೋಲ್ ಮಾಡುವ ಮೂಲಕ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಯಾರು ಕಾನೂನಿಗಿಂತ ಮೇಲಲ್ಲ. ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಯಾರನ್ನು ಯಾರು ಹೊಡೆಯಲು ಮತ್ತು ಕೊಲ್ಲಲು ಹಕ್ಕು ಇಲ್ಲ. ನ್ಯಾಯ ಸಿಗುತ್ತದೆ ಅಥವಾ ಇಲ್ಲವೋ ಎಂದು ದೂರು ಕೊಡಿ ಸಾಕು. ಪೊಲೀಸರು ತಮ್ಮ ಕೈಲಾದಷ್ಟು ಕೆಲಸ ಮಾಡುತ್ತಿದ್ದಾರೆ. ಪೊಲೀಸರು ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿಯುವುದಿಲ್ಲ. ರೇಣುಕಾ ಸ್ವಾಮಿಗೆ ನ್ಯಾಯ ಕೊಡಿ, ದರ್ಶನ್ ಎಂದು ರಮ್ಯಾ ಪೋಸ್ಟ್ ಮಾಡಿದ್ದಾರೆ.