ಮಂಡ್ಯ: ಇಂದು ಜಿಲ್ಲಾಧಿಕಾರಿ ಡಾ: ಕುಮಾರ ಅವರು ಮದ್ದೂರು ತಾಲ್ಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲ್ಲೂಕು ಕಚೇರಿಯಲ್ಲಿದ್ದ ಸಾರ್ವಜನಿಕರಿಂದ ದೂರು, ಕುಂದು ಕೊರತೆ ಅರ್ಜಿಗಳನ್ನು ಸ್ವೀಕರಿಸಿ ಸಾರ್ವಜನಿಕರೊಂದಿಗೆ ಚರ್ಚಿಸಿದರು.
ನಿಗದಿತ ಕಲಾಮಿತಿಯಲ್ಲಿ ಅರ್ಜಿಗಳು ವಿಲೇವಾರಿಯಾಗಬೇಕು. ಸಾರ್ವಜನಿಕರ ಕೆಲಸ ಮಾಡಿಕೊಡಲು ಅನಗತ್ಯ ವಿಳಂಭ ಅಥವಾ ಅವರನ್ನು ಅಲೆದಾಡಿಸುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಲ್ಲಿ ಕ್ರಮ ವಹಿಸುವುದಾಗಿ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದರು.
ತಾಲ್ಲೂಕು ಕಚೇರಿಯ ವಿವಿಧ ಶಾಖೆಗಳಿಗೆ ಭೇಟಿ ನೀಡಿ ಕಾರ್ಯನಿರ್ವಹಣೆಯ ಬಗ್ಗೆ, ಕಡತ ವಿಲೇವಾರಿಯ ಬಗ್ಗೆ ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡರು.
ತಾಲ್ಲೂಕು ಕಚೇರಿ ದುರಸ್ತಿ ಕೆಲಸ ಪ್ರಾರಂಭಕ್ಕೆ ಸೂಚನೆ ಮದ್ದೂರು ತಾಲ್ಲೂಕು ಕಚೇರಿಯಲ್ಲಿ ಮಳೆಯಿಂದ ನೀರು ಸೋರಿಕೆಯಾಗುತ್ತಿರುವ ಕಟ್ಟಡದ ಭಾಗಗಳ ಸರಿಪಡಿಸುವಿಕೆ, ಸಾರ್ವಜನಿಕರ ಶೌಚಾಲಯ, ಕಚೇರಿ ಸಿಬ್ಬಂದಿಗಳ ಶೌಚಾಲಯಯ ನಿರ್ಮಾಣ ಕಾಮಗಾರಿ, ಕಚೇರಿಯ ಕಾಂಪೌಂಡ್ ಸೇರಿದಂತೆ ಬಣ್ಣದ ಕೆಲಸಗಳನ್ನು ಶೀಘ್ರವಾಗಿ ಪ್ರಾರಂಭಿಸುವಂತೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಜಯಪ್ರಕಾಶ್ ಬಿ ಅವರಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಮದ್ದೂರು ತಾಲ್ಲೂಕು ತಹಶೀಲ್ದಾರ್ ಸೋಮಶೇಖರ್ ಉಪಸ್ಥಿತರಿದ್ದರು.
ವರದಿ: ಗಿರೀಶ್ ರಾಜ್, ಮಂಡ್ಯ
BREAKING: ಅಶ್ಲೀಲ ವೀಡಿಯೋ ಕೇಸ್: ಜೂ.18ರವರೆಗೆ ಪ್ರಜ್ವಲ್ ರೇವಣ್ಣ ‘SIT ಕಸ್ಟಡಿ’ಗೆ ನೀಡಿ ಕೋರ್ಟ್ ಆದೇಶ
ನಟ ದರ್ಶನ್ ಪ್ರಕರಣದಲ್ಲಿ ಕಾನೂನು ವ್ಯಾಪ್ತಿಯಲ್ಲಿ ಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್