ಬೆಂಗಳೂರು : ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಪಾಲಕರು ವಾಹನ ಚಲಾಯಿಸಲು ಅವಕಾಶ ಮಾಡಿಕೊಡುವ ಮುನ್ನ ಈ ಸುದ್ದಿಯನ್ನು ಒಮ್ಮೆ ಓದಿ. ವಾಹನ ಚಲಾಯಿಸಿ ಅಪಘಾತ ಉಂಟು ಮಾಡಿದರೆ, ವಾಹನದ ಮಾಲೀಕರು ಸಂಬಂಧಪಟ್ಟವರಿಗೆ ಪರಿಹಾರ ನೀಡಬೇಕೇ ಹೊರತು ವಿಮಾ ಕಂಪನಿಯಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಹೌದು ವಿಮಾ ಕಂಪನಿಯ ಮೇಲೆ ಹೊಣೆಗಾರಿಕೆ ವಹಿಸಿದ ಮೋಟಾರು ವಾಹನ ಅಪಘಾತ ನ್ಯಾಯಮಂಡಳಿಯ ತೀರ್ಪು ರದ್ದುಗೊಳಿಸಿ ನ್ಯಾಯಮೂರ್ತಿ ಹಂಚಾಟೆ ಸಂಜೀವ್‌ಕುಮಾರ್ ಈ ತೀರ್ಪು ನೀಡಿದ್ದಾರೆ. ಆ ಮೂಲಕ, ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್‌ನ ಮೇಲ್ಮನವಿಯನ್ನು ಪುರಸ್ಕರಿಸಿದ್ದಾರೆ.
2014ರ ಆಗಸ್ಟ್ 11ರಂದು ತೀರ್ಪು ನೀಡಿದ್ದ ಟ್ರಿಬ್ಯೂನಲ್, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ನೆಲೆಸಿರುವ ಮೃತರ ಕುಟುಂಬದ ಸದಸ್ಯರಾದ ಬೀಬಿ ನೈಸಾ ಮತ್ತು ಹಕ್ಕುದಾರರಿಗೆ ವಾರ್ಷಿಕ ಶೇ 8ರ ಬಡ್ಡಿಯೊಂದಿಗೆ 2.56 ಲಕ್ಷ ರೂ.ಗಳ ಪರಿಹಾರ ನೀಡುವಂತೆ ವಿಮಾ ಕಂಪನಿಗೆ ಆದೇಶ ನೀಡಿತ್ತು.
ಮೃತರ ಕುಟುಂಬ ಸದಸ್ಯರಿಗೆ 2.56 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ವಿಮಾ ಕಂಪನಿಗೆ ಟ್ರಿಬ್ಯೂನಲ್ ತೀರ್ಪು ನೀಡಿತ್ತು. ಅಪಘಾತವು ಆಗ 16 ವರ್ಷ ವಯಸ್ಸಿನ ಹುಡುಗನಿಂದ ಸಂಭವಿಸಿದೆ ಎಂಬ ಆಧಾರದ ಮೇಲೆ ವಿಮಾ ಕಂಪನಿಯು ಇದನ್ನು ಪ್ರಶ್ನಿಸಿತ್ತು. ಸವಾರನು ಅಪ್ರಾಪ್ತನಾಗಿದ್ದರಿಂದ, ಅವನು ಮಾನ್ಯ ಚಾಲನಾ ಪರವಾನಗಿಯನ್ನು ಹೊಂದಿರಲಿಲ್ಲ. ಆದ್ದರಿಂದ ಪರಿಹಾರವನ್ನು ಪಾವತಿಸಲಾಗದು ಎಂದು ವಿಮಾ ಕಂಪನಿ ವಾದಿಸಿತ್ತು.
ಆದರೆ ಇದೀಗ ಅಪಘಾತದಿಂದ ತೊಂದರೆಗೆ ಒಳಗಾದವರಿಗೆ ಪರಿಹಾರವನ್ನು ಪಾವತಿಸುವ ಹೊಣೆಗಾರಿಕೆಯಿಂದ ವಿಮಾ ಕಂಪನಿಯನ್ನು ನ್ಯಾಯಾಲಯ ಮುಕ್ತಗೊಳಿಸಿದೆ. ಟ್ರಿಬ್ಯೂನಲ್ ಆದೇಶದ ಪ್ರಕಾರ ನೀಡಬೇಕಿದ್ದ ಪರಿಹಾರದ ಮೊತ್ತವಾದ 2.56 ಲಕ್ಷ ರೂ.ಗೆ ಶೇ 6ರ ವಾರ್ಷಿಕ ಬಡ್ಡಿಯೊಂದಿಗೆ 4.44 ರೂ. ಪಾವತಿಸುವಂತೆಯೂ ಹೈಕೋರ್ಟ್ ಆದೇಶಿಸಿದೆ.