ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ತನಿಖೆ ವೇಳೆ ಸ್ಪೋಟಕ ಮಾಹಿತಿ ಲಭ್ಯವಾಗಿದ್ದು, ಪ್ರಕರಣದ ಆರೋಪಿ ಪವನ್ ಪ್ರಕರಣದ ಮಾಸ್ಟರ್ ಮೈಂಡ್ ಆಗಿ ಕೆಲಸ ಮಾಡಿದ್ದಾನೆ.
ಇನ್ ಸ್ಟಾಗ್ರಾಂನಲ್ಲಿ ಪವಿತ್ರಾಗೌಡಗೆ ಮೆಸೇಜ್ ಮಾಡುತ್ತಿದ್ದ ರೇಣುಕಾಸ್ವಾಮಿ ಬಗ್ಗೆ ಮೊದಲು ಪವಿತ್ರಾಗೌಡ ಪವನ್ ಗೆ ಹೇಳಿದ್ದಾಳೆ. ಬಳಿಕ ಆರೋಪಿ ಪವನ್ ಪವಿತ್ರಾಗೌಡ ಹೆಸರಿನಲ್ಲಿ ನಕಲಿ ಇನ್ ಸ್ಟಾಗ್ರಾಂ ಖಾತೆ ಓಪನ್ ಮಾಡಿ ರೇಣುಕಾಸ್ವಾಮಿ ಜೊತೆಗೆ ಚಾಟಿಂಗ್ ಮಾಡಿದ್ದಾನೆ. ಚಾಟಿಂಗ್ ಮೂಲಕವೇ ರೇಣುಕಾಸ್ವಾಮಿಯ ವಿಳಾಸ ತಿಳಿದುಕೊಂಡ ಪವನ್ ಬಳಿಕ ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ರಾಘವೇಂದ್ರಗೆ ಅವನ್ನು ಹಿಡಿದುಕೊಡುವಂತೆ ಕೇಳಿದ್ದಾರೆ.
ಪವನ್ ಸೂಚನೆ ಮೇರೆಗೆ ರಾಘವೇಂದ್ರ ಹಾಗೂ ನಂದೀಶ್ ಎಂಬುವರು ಇಬ್ಬರು ಸೇರಿಕೊಂಡು ರೇಣುಕಾಸ್ವಾಮಿಯನ್ನು ಕರೆಸಿಕೊಂಡು ಕಾರಿನಲಿ ಅಪಹರಣ ಮಾಡಿ ಪಟ್ಟದಕೆರೆಯ ಶೆಟ್ ಗೆ ಕರೆದುಕೊಂಡು ಬಂದು ಹಗಲು ರಾತ್ರಿ ಹೊಡೆದಿದ್ದಾರೆ. ರಾತ್ರಿ ಶೆಟ್ ಗೆ ಬಂದ ದರ್ಶನ್ ಬೆಲ್ಟ್ ನಲ್ಲಿ ಹೊಡೆದ್ರೆ, ಪವಿತ್ರಾಗೌಡ ಚಪ್ಪಲಿಯಲ್ಲಿ ಹೊಡೆದಿರುವುದಾಗಿ ಆರೋಪಿಗಳು ಪೊಲೀಸರ ತನಿಖೆ ವೇಳೆ ಸತ್ಯ ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ.