ಮೈಸೂರು : ಆಕೆಯ ಗಂಡ ತೀರಿ ಹೋಗಿ ಇನ್ನೂ ಒಂದು ತಿಂಗಳು ಕೂಡ ಕಳೆದಿರಲಿಲ್ಲ. ಆಗಲೇ ವಿವಾಹಿತ ಮಹಿಳೆಯೊಂದಿಗೆ ಆ ವ್ಯಕ್ತಿಯ ಪರಿಚಯವಾಗಿ, ಪರಿಚಯ ಸಲುಗೆಗೆ ಮುಂದುವರೆದಿದೆ. ಈ ವೇಳೆ ವಿವಾಹಿತ ಮಹಿಳೆಗೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ವ್ಯಕ್ತಿಯನ್ನು ಅಕ್ಕ ತಮ್ಮ ಇಬ್ಬರು ಸೇರಿ ಸಿಮೆಂಟ್ ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ಪಟ್ಟಣದಲ್ಲಿ ನಡೆದಿದೆ.
ಹೌದು ಹೆಚ್.ಡಿ.ಕೋಟೆ ತಾಲೂಕಿನ ಸಿದ್ದಯ್ಯನಹುಂಡಿ ನಿವಾಸಿ ರಾಜೇಶ್(32) ಕೊಲೆ ಆದ ವ್ಯಕ್ತಿ ಎಂದು ಹೇಳಲಾಗುತ್ತಿದೆ. ಕೊಳೆ ಮಾಡಿದವರನ್ನು ಪ್ರೇಮಾ ಹಾಗೂ ಆಕೆ ಸಹೋದರ ಶಿವು ಎಂದು ಹೇಳಲಾಗುತ್ತಿದೆ.15 ವರ್ಷದ ಹಿಂದೆ ಪ್ರೇಮಾಗೆ ಮದುವೆ ಆಗಿತ್ತು. ಮೈಸೂರಿನ ಕ್ಯಾತಮಾರನಹಳ್ಳಿಯ ನಿವಾಸಿಯಾಗಿರುವ ಪ್ರೇಮಾ ನಂಜನಗೂಡಿನ ಶ್ರೀರಾಂಪುರ ನಿವಾಸಿ ಜೊತೆ ಮದುವೆ ಮಾಡಿಕೊಂಡಿದ್ದರು. ಒಂದು ತಿಂಗಳ ಹಿಂದೆ ಪ್ರೇಮಾ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ವೇಳೆ ಪ್ರೇಮಾ ಪತಿಯ ಸ್ನೇಹಿತ ರಾಜೇಶ್ ಪರಿಚಯ ಆಗಿತ್ತು.
ಪರಿಚಯ ಮುಂದೆ ಸಲುಗೆಯಾಗಿ ಇಬ್ಬರು ಬಹಳ ಆತ್ಮೀಯವಾಗಿದ್ದರು. ಅದಾದ ಬಳಿಕ ಕೆಲ ದಿನಗಳ ಬಳಿಕ ಇಬ್ಬರ ನಡುವೆ ಭಿನ್ನಾಭಿಪ್ರಾಯ ಆಗಿತ್ತು. ರಾಜೇಶ್, ಪ್ರೇಮಾಗೆ ಬ್ಲ್ಯಾಕ್ಮೇಲ್ ಮಾಡಿ ಬೆದರಿಸುತ್ತಿದ್ದ. ಇದರಿಂದ ಬೇಸತ್ತು ಸಿಮೆಂಟ್ ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ. ಪ್ರೇಮಾ, ಆಕೆಯ ಸೋದರ ಶಿವು ಸೇರಿಕೊಂಡು ರಾಜೇಶ್ ಕೊಲೆ ಮಾಡಿದ್ದಾಗಿ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.