ಬೆಂಗಳೂರು : ಬೆಂಗಳೂರು ಭೂಸೇನಾ ಭರ್ತಿ ಕಾರ್ಯಾಲಯ ಇವರ ವತಿಯಿಂದ ‘ಅಗ್ನಿವೀರ್’ ಸೇನಾ ನೇಮಕಾತಿ ರ್ಯಾಲಿಯು ಜೂನ್ 27 ರಿಂದ ಜುಲೈ2 ರವರೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಸಾಮಾನ್ಯ ಕರ್ತವ್ಯ, ತಾಂತ್ರಿಕ, ಲಿಪಿಕ, ಗುಮಾಸ್ತ, ಸ್ಟೋರ್ ಕೀಪರ್, ಟೆಕ್ನಿಕಲ್ ಹಾಗೂ ಟ್ರೇಡ್ಸ್‍ಮೆನ್ ಗಳಿಗಾಗಿ ನೇಮಕಾತಿ ಮಾಡಲಿದ್ದಾರೆ.
2024ರ ಏಪ್ರಿಲ್ 22 ರಿಂದ ಮೇ 7ರವರೆಗೆ ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್ ಆಫೀಸರ್, ಅಸಿಸ್ಟೆಂಟ್, ಸ್ಟೋರ್ ಕೀಪರ್, ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್ ಮೆನ್ ಹುದ್ದೆಗಳ ಭರ್ತಿಗೆ ಸೇನಾ ನೇಮಕಾತಿ ಸಾಮಾನ್ಯ ಪರೀಕ್ಷೆ ನಡೆಸಲಾಗಿತ್ತು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಯ್ಕೆಯಾದ ಪುರುಷ ಅಭ್ಯರ್ಥಿಗಳು ಮಾತ್ರ ರ್ಯಾಲಿಯಲ್ಲಿ ಭಾಗವಹಿಸಬೇಕು. ಅಭ್ಯರ್ಥಿಗಳಿಗೆ ವಸತಿ ವ್ಯವಸ್ಥೆ ಮಾಡಲಾಗಿದ್ದು, ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಇ-ಮೇಲ್ ಮೂಲಕ ಪ್ರವೇಶ ಪತ್ರ ಒದಗಿಸಲಾಗಿದೆ. joinindianarmy ವೆಬ್ಸೈಟ್ ನಲ್ಲಿಯೂ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕಕರು ತಿಳಿಸಿದ್ದಾರೆ.