ಚಿತ್ರದುರ್ಗ : ನಟಿ ಪವಿತ್ರ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕೆ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿಯನ್ನು ನಟ ದರ್ಶನ್ ಹಾಗೂ ಸಹಚರರು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೃತ ರೇಣುಕಾ ಸ್ವಾಮಿ ಹೆಂಡತಿ ನಾಳೆ ನನಗೆ ಹುಟ್ಟೋ ಮಗ ಅಪ್ಪ ಎಲ್ಲಿ ಅಂತ ಕೇಳಿದರೆ ಏನು ಹೇಳಬೇಕು ಎಂದು ಕಣ್ಣೀರು ಹಾಕಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರೇಣುಕಾ ಸ್ವಾಮಿ ಪತ್ನಿ ನಮಗೆ ಮದುವೆಯಾಗಿ ಒಂದು ವರ್ಷವಾಗಿದೆ. ಈಗ ನಾನು ತಾಯಿ ಆಗ್ತಿದ್ದೀನಿ. ನಂಗೆ ಮುಂದೆ ಹುಟ್ಟೋ ಮಗು ಅಪ್ಪ ಎಲ್ಲಿ ಎಂದು ಕೇಳಿದರೆ ಏನು ಹೇಳಬೇಕು? ಮೊನ್ನೆ ನನಗೆ ಕರೆ ಮಾಡಿ ಮಾತನಾಡಿದ್ದೇ ಕೊನೆ ಆಗೋಯ್ತು. ನನ್ನ ಮತ್ತು ನನ್ನ ಮುಂದಿನ ಜೀವನ ಹೇಗೆ ಮಾಡೋದು? ನೀವೇ ನ್ಯಾಯಾಲಯ ಕೊಡಿಸಿ ಎಂದು ರೇಣುಕಾಸ್ವಾಮಿ ಪತ್ನಿ ಸುಶೀಲ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
ನಾನು ಗೃಹಿಣಿ ಇದಿನಿ ಹೀಗೆ ಆಗಬಾರದಿತ್ತು. ಮದುವೆಯಾಗಿ ಒಂದು ವರ್ಷ ಆಗಿದೆ. ತಾಯಿ ಬೇರೆ ಆಗ್ತಿದ್ದೀನಿ ಇವಾಗ ಹಿಂಗ್ ಆದ್ರೆ ಏನ್ ಮಾಡ್ಲಿ.? ನಮ್ಮನೆಯವರು ದರ್ಶನ್ ಅವರ ಅಭಿಮಾನಿ ಆಗಿರಲಿಲ್ಲ. ದರ್ಶನ ಮೇಲೆ ಆರೋಪ ಬಂದಿರೋದಕ್ಕೆ ನ್ಯಾಯ ಕೊಡಿಸಲು ಜನ ಇದಾರೆ. ನಾನು ಮುಂದೆ ಜೀವನ ಮಾಡೋದು ಹೇಗೆ? ಮುಂದೆ ಈ ಮಗುವಿಗೆ ಯಾರು ಬರ್ತಾರೆ? ನಮಗೆ ನ್ಯಾಯ ಬೇಕು ಎಂದು ಕಣ್ಣೀರು ಹಾಕಿದ್ದಾರೆ.