ಬೆಂಗಳೂರು: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನಟಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಆರೋಪದ ಮೇಲೆ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟನನ್ನು ಬಂಧಿಸಲಾಗಿದೆ. ಈವರೆಗೆ 10 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.
ಇದೀಗ ರೇಣುಕಾ ಸ್ವಾಮಿಯ ಕೊಲೆಯ ನಂತರ ಆತನ ಮೃತ ದೇಹವನ್ನು ಶಿಫ್ಟ್ ಮಾಡಿದ್ದೆ ರೋಚಕವಾಗಿದೆ. ವಿನಯ್ ಶೆಡ್ ನಲ್ಲಿ ರೇಣುಕಾ ಸ್ವಾಮಿಯ ಮರ್ಡರ್ ಮಾಡಲಾಗಿತ್ತು. ನಂತರ ಶೆಡ್ ನಿಂದ ಆಟೋದಲ್ಲಿ ರೇಣುಕಾ ಸ್ವಾಮಿ ಮೃತ ದೇಹವನ್ನು ಗ್ಯಾಂಗ್ ಸಾಗಿಸಿತ್ತು. ಬಡ್ಡಿ ಕಟ್ಟದೇ ಇದ್ದಿದ್ದಕ್ಕೆ ವಿನಯ್ ಆಟೋ ಒಂದನ್ನು ವಶಕ್ಕೆ ಪಡೆದಿದ್ದ ಎನ್ನಲಾಗಿದೆ.
ಅದೇ ಆಟೋದಲ್ಲಿ ರೇಣುಕಾ ಸ್ವಾಮಿಯ ಮೃತದೇಹವನ್ನು ಈ ಗ್ಯಾಂಗ್ ಸಾಗಿಸಿತ್ತು. ಬಳಿಕ ರೇಣುಕಾ ಸ್ವಾಮಿ ಶವವನ್ನು ಸ್ಕಾರ್ಪಿಯೋ ಕಾರಿಗೆ ಶಿಫ್ಟ್ ಮಾಡಲಾಗಿತ್ತು. ಬಳಿಕ ಅಲ್ಲಿಂದ ರೇಣುಕಾ ಸ್ವಾಮಿ ಶವವನ್ನು ನಂತರ ಕಾಮಾಕ್ಷಿ ಪಾಳ್ಯದ ಮೋರಿಯಲ್ಲಿ ಮೃತದೇಹ ಎಸೆಯಲಾಗಿದೆ.
ಮೃತದೇಹವನ್ನು ಮೊದಲಿಗೆ ನೋಡಿದ್ದು ಒಬ್ಬ ಡೆಲಿವರಿ ಬಾಯ್ ಎಂದು ಹೇಳಲಾಗಿದೆ. ಆತನ ಹೇಳಿಕೆಯ ಪ್ರಕಾರ ಬೆಳಿಗ್ಗೆ 6:30ಕ್ಕೆ ಡೆಲಿವರಿ ಮಾಡಲು ಹೋಗುತ್ತಿದ್ದೆ. ಆಗ ನಾನು ಮೃತದೇಹವನ್ನು ನೋಡಿದ್ದೆ. ಯಾರೋ ಕುಡಿದು ಬಿದ್ದೀರಬೇಕು ಅಂದುಕೊಂಡಿದ್ದೆ. ನಾಯಿಗಳು ದೇಹವನ್ನು ತಿನ್ನುತ್ತಿದ್ದವು. ಕಿವಿ ಕಚ್ಚಿ ತಿನ್ನುತ್ತಿದ್ದವು ಆಗ ನಾನು ನಾಯಿಗಳನ್ನು ಅಲ್ಲಿಂದ ಓಡಿಸಿದೆ. ಆಮೇಲೆ ಇದು ಮೃತದೇಹ ಎಂದು ಗೊತ್ತಾಯಿತು ಎಂದು ಡೆಲಿವರಿ ಬಾಯ್ ಪೊಲೀಸರ ಎದುರಲ್ಲಿ ತಿಳಿಸಿದ್ದಾನೆ.