ಬೆಂಗಳೂರು: ನಟ ದರ್ಶನ್ ಇಂದು ರೇಣುಕಾಸ್ವಾಮಿ ಎಂಬಾತನ ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದಾರೆ. ನಟ ದರ್ಶನ್ ವಿರುದ್ಧ ಒಂದಲ್ಲ, ಎರಡಲ್ಲ ಬರೋಬ್ಬರಿ ಮೂರು ಕೇಸ್ ಗಳಿದ್ದಾವೆ. ಅವು ಯಾವುವು? ಆರೋಪ ಸಾಬೀತಾದ್ರೆ ಶಿಕ್ಷೆ ಏನು ಅಂತ ಮುಂದೆ ಓದಿ.
ಚಾಲೆಂಜಿಗ್ ಸ್ಟಾರ್ ನಟ ದರ್ಶನ್ ನಟನೆಯ ಜೊತೆಗೆ ವಿವಾದಗಳಿಂದಲೂ ಸುದ್ದಿಯಾಗಿದ್ದಾರೆ. ಸ್ಯಾಂಡಲ್ ವುಡ್ ನಟ ದರ್ಶನ್, ಇಂದು ಮಾತ್ರ ಗಂಭೀರ ಪ್ರಕರಣದಲ್ಲಿ ಸಿಲುಕಿ, ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾರೆ.
ತನ್ನ ಗೆಳತಿ ಪವಿತ್ರಾ ಗೌಡಗೆ ಅಶ್ಲೀವಾಗಿ ಸಂದೇಶ ಕಳುಹಿಸಿದ್ದಂತ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನನ್ನು ಮರ್ಡರ್ ಮಾಡಿದ ಆರೋಪ ನಟ ದರ್ಶನ್ ಮೇಲಿದೆ. ನಟ ದರ್ಶನ್ ಸೇರಿದಂತೆ 10 ಮಂದಿಯನ್ನು ಈ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣದ ಮೂಲಕ ನಟ ದರ್ಶನ್ ಒಂದಲ್ಲ ಎರಡಲ್ಲ ಮೂರು ಪ್ರಕರಣದಲ್ಲಿ ಸಿಲುಕಿಕೊಂಡಂತೆ ಆಗಿದೆ. ರೇಣುಕಾಸ್ವಾಮಿ ಮರ್ಡರ್ ಕೇಸಲ್ಲಿ ಪೊಲೀಸರು ಐಪಿಸಿ ಸೆಕ್ಷನ್ 364ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
ಅಂದಹಾಗೇ ನಟ ದರ್ಶನ್ ವಿರುದ್ಧ ಕೊಲೆ, ಅಪಹರಣ ಹಾಗೂ ಸಾಕ್ಷ್ಯನಾಶ ಪ್ರಕಕಣದಲ್ಲಿ ಸಂಕಷ್ಟ ಎದುರಾಗಿದೆ. ಒಂದು ವೇಳೆ ಈ ಆರೋಪ ಸಾಭೀತಾದ್ರೆ ಕಠಿಣ ಶಿಕ್ಷೆ ಕೂಡ ಫಿಕ್ಸ್ ಎಂಬುದಾಗಿ ಹೇಳಲಾಗುತ್ತಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 364 ಅಡಿ ಕಿಡ್ನ್ಯಾಪ್ ಕೇಸ್, 302 ರಡಿ ಮಾರಣಾಂತಿಕ ಹಲ್ಲೆ ಕೇಸ್ ಕೂಡ ಸಾಕಲಾಗಿದೆ. ಇದಲ್ಲದೇ ಸಾಕ್ಷ್ಯ ನಾಶ ಪ್ರಕರಣ ಕೂಡ ಬುಕ್ ಆಗಿದೆ. ಹೀಗಾಗಿ ಈ ಮೂರು ಪ್ರಕರಣದಲ್ಲಿ ಆರೋಪ ಸಾಭೀತಾದ್ರೇ, ನಟ ದರ್ಶನ್ ಗೆ ಜೀವಾವಧಿ ಶಿಕ್ಷೆಯಾದರೂ ಆಗಬಹುದು ಎಂಬುದಾಗಿ ಹೇಳಲಾಗುತ್ತಿದೆ.
‘ಮಾತು ಬರುತ್ತಿಲ್ಲ, ದರ್ಶನ್ಗಾಗಿ ಪ್ರಾರ್ಥಿಸುತ್ತೇನೆ’:ಆಘಾತ ಹೊರಹಾಕಿದ ನಟಿ ಸಂಜನಾ ಗಲ್ರಾನಿ | Darshan Arrest
ವಿಮಾನ ಅಪಘಾತದಲ್ಲಿ ಮಲವಿ ಉಪಾಧ್ಯಕ್ಷ ಸೌಲೋಸ್ ಚಿಲಿಮಾ ಸೇರಿ 9 ಮಂದಿ ಸಾವು | Saulos Chilima