ಶಿವಮೊಗ್ಗ: ಸಾಗರ ತಾಲೂಕಿನಲ್ಲಿ ಮಳೆಗಾಲದಲ್ಲಿ ಯಾವುದೇ ರಸ್ತೆ ಕಾಮಗಾರಿ ನಡೆಸಬಾರದು. ಇದು ಅವೈಜ್ಞಾನಿಕವಾದಂತ ಕಾಮಗಾರಿಯಾಗಲಿದೆ. ರಸ್ತೆ ಮಾಡಿದ್ರೂ ಹಾಳಾಗಿ ಹೋಗುತ್ತದೆ. ಯಾವುದೇ ರಸ್ತೆ ಕಾಮಗಾರಿ ಮಳೆಗಾಲ ಮುಗಿಯೋವರೆಗೆ ಮಾಡಬಾರದು. ಮಳೆಗಾಲದಲ್ಲಿ ನೈಸರ್ಗಿಕ ಅವಘಡಗಳನ್ನು ತುರ್ತಾಗಿ ಕೈಗೊಳ್ಳೋ ನಿಟ್ಟಿನಲ್ಲಿ ಯಾವುದೇ ಅಧಿಕಾರಿ ರಜೆ ಹಾಕುವಂತಿಲ್ಲ ಎಂಬುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ಖಡಕ್ ಸೂಚನೆ ನೀಡಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಪ್ರಗತಿ ಪರಿಶೀಲನೆ ಸಭೆಯನ್ನು ನಡೆಸಿದಂತ ಅವರು, ಇಲಾಖಾ ವಾರು ಅಧಿಕಾರಿಗಳಿಂದ ತಾಲೂಕಿನ ಪ್ರಗತಿಯ ಕುರಿತಂತೆ ಮಾಹಿತಿಯನ್ನು ಪಡೆದರು.
ಮಳೆಗಾಲದಲ್ಲಿ ರಸ್ತೆ ಕಾಮಗಾರಿ ಮಾಡುವಂತಿಲ್ಲ. ಯಾವುದೇ ಕಾಮಗಾರಿ ನಡೆಸದಂತೆ ಖಡಕ್ ಸೂಚನೆ ನೀಡಿದರು. ಅಲ್ಲದೇ ಮಳೆಗಾಲದಲ್ಲಿ ಅಲ್ಲಲ್ಲಿ ಅವಘಡಗಳು ಉಂಟಾಗುತ್ತವೆ. ಇವುಗಳನ್ನು ಸಕಾಲದಲ್ಲಿ ಸಮರ್ಪಕವಾಗಿ ನಿರ್ವಹಣೆ ಮಾಡಬೇಕಿದೆ. ಈ ಹಿನ್ನಲೆಯಲ್ಲಿ ಯಾವುದೇ ಅಧಿಕಾರಿಗಳು ಮೂರು ತಿಂಗಳು ರಜೆ ಹಾಕುವಂತಿಲ್ಲ. ನಿಮ್ಮ ಕೆಲಸಗಳು ಏನೇ ಇದ್ರೂ ರಜಾ ದಿನಗಳಲ್ಲಿ ಮುಗಿಸಿಕೊಳ್ಳುವಂತೆ ತಿಳಿಸಿದರು.
ಮಳೆಗಾಲದಲ್ಲಿ ಸಮಸ್ಯೆ ಪರಿಹರಿಸೋ ನಿಟ್ಟಿನಲ್ಲಿ ಪಿಡಿಓ, ವಿಎ ಕೆಲಸ ಮುಖ್ಯವಾಗಿದೆ. ಮನೆಯ ಮೇಲೆ ಮರ ಬಿದ್ದು, ಇನ್ನೂ ಯಾವುದೇ ಸಮಸ್ಯೆ ಉಂಟಾದಾಗ ನಮಗೆ ಸೂಚನೆ ನೀಡಬೇಕು. ಅದನ್ನ ಸರಿ ಪಡಿಸೋ ಕೆಲಸ ಮಾಡಬೇಕು. ತ್ವರಿತವಾಗಿ ಮಳೆಯಿಂದ ಸಮಸ್ಯೆ ಆದಾಗ ಪ್ರತಿ ಸ್ಪಂದಿಸೋ ಕೆಲಸ ಮಾಡಬೇಕು ಎಂಬುದಾಗಿ ಅಧಿಕಾರಿಗಳಿಗೆ ಸೂಚಿಸಿದರು.
ವರದಿ: ವಸಂತ ಬಿ ಈಶ್ವರಗೆರೆ