ಬೆಂಗಳೂರು: ಚಂದನ್- ನಿವೇದಿತಾ ಡೈವೋರ್ಸ್‌ಈಗ ದೊಡ್ಡ ಸದ್ದು ಮಾಡುತ್ತಿದೆ. ಈ ನಡುವೆ ಇಬ್ಬರ ಡೈವೋರ್ಸ್ ಬಗ್ಗೆ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿದ್ದಾರೆ.
ಇವೆಲ್ಲದರ ನಡುವೆ ಇಬ್ಬರ ಡೈವೋರ್ಸ್‌ಗೆ ದೇವರ ಶಾಪವೇ ಕಾರಣ ಅಂಥ ಜನತೆ ಮಾತನಾಡುತ್ತಿದ್ದಾರೆ. ಹೌದು, 2019ರ ನವೆಂಬರ್ ನಲ್ಲಿ ಮೈಸೂರು ಯುವ ದಸರಾದ ವೇದಿಕೆಯಲ್ಲಿ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ರೀಲ್ಸ್ ಸ್ಟಾರ್ ನಿವೇದಿತಾ ಗೌಡಗೆ ಪ್ರಪೋಸ್ ಮಾಡಿ ಉಂಗುರ ತೊಡಿಸಿ ತಮ್ಮ ಪ್ರೀತಿ ನಿವೇದನೆ ಮಾಡಿಕೊಂಡಿದ್ದರು, ಆಗ ಇಬ್ಬರಿಗೂ ಕೂಡ ರಾಜ್ಯದ ಜನತೆ ಛೀಮಾರಿ ಹಾಕಿದ್ದರು ಕೂಡ. ಚಂದನ್ ಶೆಟ್ಟಿ ನಡವಳಿಕೆ ಬಗ್ಗೆ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದವು, ಇದು ಬೆಡ್‌ರೂಮ್ ಅಲ್ಲ ಸಾರ್ವಜನಕರ ಸ್ಥಳ, ಇದಲ್ಲದೇ ಜನರ ತೆರಿಗೆ ದುಡ್ಡಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಅಂಥ ಇಬ್ಬರ ವಿರುದ್ದ ಜನತೆ ಕಿಡಿಕಾರಿದ್ದನ್ನು ಸ್ಮರಿಸಬಹುದಾಗಿದೆ.
ಈ ನಡುವೆ ಆಗ ಸಚಿರಾಗಿದ್ದ, ಹಾಗೂ ಈಗ ತುಮಕೂರು ಸಂಸದರಾಗಿರುವ ವಿ.ಸೋಮಣ್ಣ ಕೂಡ ಬೇಸರ ವ್ಯಕ್ತಪಡಿಸಿದ್ದರು. ಆಗ ಅವರು ಯುವ ದಸರಾ ವೇದಿಕೆ ದೇವರ ಸನ್ನಿಧಿಯಂತೆ. ಇಲ್ಲಿ ಈ ರೀತಿಯ ನಡೆ ಸರಿಯಲ್ಲ. ಇದು ಅಕ್ಷಮ್ಯ ಅಪರಾಧ. ಇನ್ನು ಆರು ತಿಂಗಳಲ್ಲಿ ಅವರಿಬ್ಬರಿಗೂ ಆ ತಾಯಿ ಚಾಮುಂಡೇಶ್ವರಿ ಶಿಕ್ಷೆ ನೀಡುತ್ತಾಳೆ,” ಎಂದು ಹೇಳಿದ್ದರು. ಈಗ ಅದೇ ರೀತಿ ಕೂಡ ಇಬ್ಬರು ದೂರವಾಗಿದ್ದು, ಆ ಒಂದು ತಪ್ಪು ಈಗ ಶಾಪವಾಗಿ ಬದಲಾಯ್ತಾ ಎನ್ನುವ ಅನುಮಾನ ಶುರುವಾಗಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಾಕ ಚರ್ಚೆಯಾಗುತ್ತಿದೆ.