ಬೆಂಗಳೂರು : ರಾಜ್ಯ ಸರ್ಕಾರವು ಕರ್ನಾಟಕದಲ್ಲಿ ಹಮಾರೇ ಬಾರಾಹ್ ಸಿನಿಮಾವನ್ನು ನಿಷಧಿಸಿರುವುದಕ್ಕೆ ನಟ ಚೇತನ್ ಅಹಿಂಸಾ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿರುವ ಚೇತನ್ ಅಹಿಂಸಾ, ಮುಸ್ಲಿಂ ಗುಂಪುಗಳು ಮತ್ತು ಇತರರು ಚಿತ್ರ ಬಿಡುಗಡೆಗೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ‘ಹಮಾರೇ ಬಾರಾಹ್’ ಚಿತ್ರವನ್ನು ನಿಷೇಧಿಸಿದೆ. ಇದು 19ನೇ ವಿಧಿಯ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಸಿದ್ದರಾಮಯ್ಯ ಸರ್ಕಾರದ ನೇರ ದಾಳಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷವು ವಿರೋಧ ಪಕ್ಷದಲ್ಲಿದ್ದಾಗ ಇತರರ ಮೇಲೆ ಬೆರಳು ತೋರಿಸಲು ಇಷ್ಟಪಡುತ್ತದೆ ಆದರೆ ಅದು ಅಧಿಕಾರದಲ್ಲಿದ್ದಾಗ ಅಸಂವಿಧಾನಿಕವಾಗಿ ವರ್ತಿಸುತ್ತದೆ. ಈ ಚಿತ್ರದ ಸಂದೇಶವನ್ನು ಇಷ್ಟಪಡದವರಿಗೆ ತಮ್ಮದೇ ಆದ ಚಲನಚಿತ್ರವನ್ನು ಮಾಡುವ ಸಂಪೂರ್ಣ ಹಕ್ಕಿದೆ ಎಂದು ಹೇಳಿದ್ದಾರೆ.