ಬೆಂಗಳೂರು : ವಿವಿಧ ತಾಲ್ಲೂಕು ಪಂಚಾಯತಿಗಳ ವ್ಯಾಪ್ತಿಯ ಇಲಾಖೆಗಳಲ್ಲಿ ಅಧಿಕಾರಿ/ಸಿಬ್ಬಂದಿಯವರ ವೇತನ ಮತ್ತು ವೇತನೇತರ ವೆಚ್ಚಗಳಿಗೆ ಸಂಬಂಧಿಸಿದ ಪಾವತಿಗಳಿಗಾಗಿ ಅನುದಾನವನ್ನು ಬಿಡುಗಡೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
2024-25ನೇ ಆರ್ಥಿಕ ಸಾಲಿಗೆ ವಿವಿಧ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಇಲಾಖೆಯ ಅಧಿಕಾರಿ/ಸಿಬ್ಬಂದಿರವರ ವೇತನ ಪಾವತಿಗೆ ಕೊರತೆಯಾಗಿರುವ ಅನುದಾನವನ್ನು TP link documentಅನ್ನು ಪರಿಷ್ಕರಿಸಿ ವ್ಯತ್ಯಾಸದ ಮೊತ್ತವನ್ನು ಬಿಡುಗಡೆ ಮಾಡಲು ಉಲ್ಲೇಖಿತ ಪತ್ರದಲ್ಲಿ ಕೋರಲಾಗಿದೆ.
ಪ್ರಸ್ತಾವನೆಯನ್ನು ಪರಿಶೀಲಿಸಿ, ವಿವಿಧ ತಾಲ್ಲೂಕು ಪಂಚಾಯಿತಿಗಳಿಗೆ 2024-25ನೇ ಸಾಲಿನಲ್ಲಿ IP link documenದನ್ವಯ ನಿಗಧಿಯಾದ ಅನುದಾನವನ್ನು ಪರಿಷ್ಕರಿಸಿ ಮೊದಲನೇ ಕಂತಿನ ವ್ಯತ್ಯಾಸದ ಮೊತ್ತ ರೂ.3208.85ಲಕ್ಷಗಳನ್ನು ಸಂಬಂಧಪಟ್ಟ ಲೆಕ್ಕ ಶೀಷಿರ್ಮಿಕೆಯಡಿ ಬಿಡುಗಡೆಗೊಳಿಸಲು ನಿರ್ಣಯಿಸಿ ಈ ಕೆಳಕಂಡಂತೆ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ 2024-25ನೇ ಆರ್ಥಿಕ ಸಾಲಿಗೆ ವಿವಿಧ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಇಲಾಖೆಯ ಅಧಿಕಾರಿ/ಸಿಬ್ಬಂದಿರವರ ವೇತನ ಪಾವತಿಗೆ ಕೊರತಯಾಗಿರುವ ಅನುದಾನವನ್ನು TP link documentಅನ್ನು ಪರಿಷ್ಕರಿಸಿ ವ್ಯತ್ಯಾಸದ ಮೊತ್ತವನ್ನು ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಇಲಾಖೆಗಳ ಅಧಿಕಾರಿ/ಸಿಬ್ಬಂದಿರವರ ವೇತನ ಇಲಾಖೆ ಸಿಬ್ಬಂದಿರವರ ವೇತನ ಪಾವತಿಗಾಗಿ ಕಾಲಂ 4ರ ಲೆಕ್ಕ ಶೀರ್ಷಿಕೆಯಡಿ ರೂ.3208.85ಲಕ್ಷ (ರೂಪಾಯಿ ಮೂರು ಸಾವಿರದ ಎರಡು ನೂರ ಎಂಟು ಲಕ್ಷಗಳ ಎಂಬತ್ತೈದು ಸಾವಿರಗಳು ಮಾತ್ರ) ಗಳನ್ನು ಬಿಡುಗಡೆಗೊಳಿಸಿದೆ.