Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಯಾವುದೇ ಧರ್ಮ ಆಗಲಿ ಪ್ರೀತಿ ತೋರಿಸುತ್ತದೆ, ಹೊರತು ದ್ವೇಷ ಮಾಡುವಂತೆ ಹೇಳಲ್ಲ : ಸಿಎಂ ಸಿದ್ದರಾಮಯ್ಯ

21/03/2026 11:52 AM

ALERT : ಚಿನ್ನ ಪಾಲಿಶ್ ಮಾಡಿಸೋ ಮುನ್ನ ಹುಷಾರ್ : ಬೆಂಗಳೂರಲ್ಲಿ 30 ಗ್ರಾಂ ಚಿನ್ನ ಡಾಲರ್ ಎಗರಿಸಿ ಕಳ್ಳರು ಪರಾರಿ!

21/03/2026 11:50 AM

BREAKING : ಖ್ಯಾತ ಒಡಿಸ್ಸಿ ನೃತ್ಯಗಾರ್ತಿ ಮಧುಮಿತಾ ರಾವತ್ ‘ಹೃದಯಾಘಾತದಿಂದ’ ನಿಧನ | Madhumita Rawat No More

21/03/2026 11:43 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವ್ಯಾಜ್ಯ ಬಗೆಹರಿಸಿಕೊಳ್ಳುವವರಿಗೆ ಮತ್ತೊಂದು ಸುವರ್ಣ ಅವಕಾಶ : ಜುಲೈ 13 ರಂದು ʻರಾಷ್ಟ್ರೀಯ ಲೋಕ್‌ ಅದಾಲತ್ʼ
KARNATAKA

ವ್ಯಾಜ್ಯ ಬಗೆಹರಿಸಿಕೊಳ್ಳುವವರಿಗೆ ಮತ್ತೊಂದು ಸುವರ್ಣ ಅವಕಾಶ : ಜುಲೈ 13 ರಂದು ʻರಾಷ್ಟ್ರೀಯ ಲೋಕ್‌ ಅದಾಲತ್ʼ

By kannadanewsnow5707/06/2024 5:55 AM

ಬೆಂಗಳೂರು : ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಜುಲೈ, 13 ರಂದು ರಾಜ್ಯದ ವಿವಿಧ ಹಂತದ ಎಲ್ಲಾ ನ್ಯಾಯಾಲಯಗಳಲ್ಲಿ ‘ರಾಷ್ಟ್ರೀಯ ಲೋಕ್ ಅದಾಲತ್’ ನಡೆಯಲಿದೆ.

ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಮತ್ತು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಿಗೆ ತಕ್ಷಣ ಪರಿಹಾರ ಪಡೆದುಕೊಳ್ಳಲು ರಾಷ್ಟ್ರೀಯ ಲೋಕ ಅದಾಲತ್ ಸುವರ್ಣ ಅವಕಾಶವಾಗಿದೆ.

ವ್ಯಾಜ್ಯ ಪೂರ್ವ ಪ್ರಕರಣಗಳು: ಚೆಕ್ ಅಮಾನ್ಯದ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ಇತರೆ ಪ್ರಕರಣಗಳು (ರಾಜೀಯಾಗಬಲ್ಲ ಅಪರಾಧಿಕ ಪ್ರಕರಣಗಳು, ವೈವಾಹಿಕ ಪ್ರಕರಣಗಳು ಮತ್ತು ಇತರೆ ಸಿವಿಲ್ ಪ್ರಕರಣಗಳು ಮತ್ತಿತರ), ಕರ್ನಾಟಕ ರಿಯಲ್ ಎಸ್ಟೇಟ್ ಪ್ರಾಧಿಕಾರಕ್ಕೆ ಸಂಬಂಧಪಟ್ಟ ಪ್ರಕರಣಗಳು, ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿನ ಪ್ರಕರಣಗಳು, ಸಾಲ ವಸೂಲಾತಿ ನ್ಯಾಯಾಧೀಕರಣದ ಪ್ರಕರಣಗಳು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ, ಖಾಯಂ ಜನತಾ ನ್ಯಾಯಾಲಯದಲ್ಲಿನ ಪ್ರಕರಣಗಳು.

ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು: ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಚೆಕ್ ಅಮಾನ್ಯದ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣದ ಪ್ರಕರಣಗಳು, ಕಾರ್ಮಿಕ ವಿವಾದಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ವೈವಾಹಿಕ ಪ್ರಕರಣಗಳು, ಭೂಸ್ವಾಧೀನ ಪ್ರಕರಣಗಳು, ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದ ಸೇವಾ ಪ್ರಕರಣಗಳು ಹಾಗೂ ಪಿಂಚಣಿ ಪ್ರಕರಣಗಳು, ಕಂದಾಯ ಪ್ರಕರಣಗಳು ಹಾಗೂ ರಾಜೀಯಾಗಬಲ್ಲ ಸಿವಿಲ್ ಮತ್ತು ಇತರೆ ಪ್ರಕರಣಗಳು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ.

ನ್ಯಾಯಾಲಯದಲ್ಲಿ ಉಭಯ ಪಕ್ಷಕಾರರು ರಾಜೀ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ ಮಾಡಲಾಗುವುದು. ಇಬ್ಬರಿಗೂ ಒಪ್ಪಿಗೆಯಾಗುವಂತೆ ಪ್ರಕರಣವು ತೀರ್ಮಾನವಾಗುವುದರಿಂದ ಬಾಂಧವ್ಯವು ಉಳಿದು ವಿವಾದವು ತೀರ್ಮಾನವಾಗುತ್ತದೆ. ನ್ಯಾಯಾಲಯದಲ್ಲಿ ದಾಖಲಾಗದೇ ಇರುವ ಪ್ರಕರಣಗಳನ್ನು ಸಹ ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ನ್ಯಾಯಾಲಯ ಶುಲ್ಕವನ್ನು ಪೂರ್ಣವಾಗಿ ಮರು ಪಾವತಿಸಲಾಗುವುದು. ಸಂಧಾನಕಾರರು ಸೂಚಿಸುವ ಪರಿಹಾರ ಒಪ್ಪಿಗೆಯಾದಲ್ಲಿ ಮಾತ್ರ ರಾಜೀ ಮಾಡಿಕೊಳ್ಳಬಹುದು. ಕಡಿಮೆ ಖರ್ಚಿನಲ್ಲಿ ಶೀಘ್ರ ತೀರ್ಮಾನಕ್ಕಾಗಿ ಇದೊಂದು ವಿಶೇಷ ಅವಕಾಶವಾಗಿದೆ.

ಪ್ರತಿದಿನ ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಹಾಗೂ ಖಾಯಂ ಜನತಾ ನ್ಯಾಯಾಲಯಗಳಲ್ಲಿ ಲೋಕ್ ಅದಾಲತ್‍ಗೆ ಸಂಬಂಧಿಸಿದಂತೆ ಪೂರ್ವಭಾವಿ ಬೈಠಕ್‍ಗಳು ಭೌತಿಕ ಹಾಗೂ ವೀಡಿಯೋ ಕಾನ್ಫೆರೆನ್ಸ್ ಮೂಲಕ ಗೌರವಾನ್ವಿತ ಉಚ್ಛ ನ್ಯಾಯಾಲಯ ಎಸ್‍ಒಪಿ ನಿಯಮಗಳಂತೆ ನಡೆಯುತ್ತದೆ. ಹೆಚ್ಚಿನ ಮಾಹಿತಿಗೆ ದೂ.ಸಂ.08272-222373, ಟೋಲ್ ಫ್ರೀ ಸಂಖ್ಯೆ 180042590900 ನ್ನು ಸಂಪರ್ಕಿಸಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅವರು ತಿಳಿಸಿದ್ದಾರೆ.

Another golden opportunity for dispute litigants: 'Rashtriya Lok Adalat' to be held on July 13 ವ್ಯಾಜ್ಯ ಬಗೆಹರಿಸಿಕೊಳ್ಳುವವರಿಗೆ ʻಸುವರ್ಣ ಅವಕಾಶʼ : ನಾಳೆ ರಾಜ್ಯಾದ್ಯಂತ ʻಲೋಕ ಅದಾಲತ್ʼ
Share. Facebook Twitter LinkedIn WhatsApp Email

Related Posts

ಯಾವುದೇ ಧರ್ಮ ಆಗಲಿ ಪ್ರೀತಿ ತೋರಿಸುತ್ತದೆ, ಹೊರತು ದ್ವೇಷ ಮಾಡುವಂತೆ ಹೇಳಲ್ಲ : ಸಿಎಂ ಸಿದ್ದರಾಮಯ್ಯ

21/03/2026 11:52 AM1 Min Read

ALERT : ಚಿನ್ನ ಪಾಲಿಶ್ ಮಾಡಿಸೋ ಮುನ್ನ ಹುಷಾರ್ : ಬೆಂಗಳೂರಲ್ಲಿ 30 ಗ್ರಾಂ ಚಿನ್ನ ಡಾಲರ್ ಎಗರಿಸಿ ಕಳ್ಳರು ಪರಾರಿ!

21/03/2026 11:50 AM1 Min Read

ಮೂಡುಬಿದ್ರೆ ಇನ್ಸ್ಪೆಕ್ಟರ್ ಸಂದೇಶ್ ಪ್ರಕರಣಕ್ಕೆ ಟ್ವಿಸ್ಟ್ : ಮಹಿಳೆಯರಿಗೆ ಲೈಂಗಿಕ ಕಿರುಕುಳವೇ ನೀಡಿಲ್ಲ ಎಂದ ಕಮಿಷನರ್!

21/03/2026 11:29 AM1 Min Read
Recent News

ಯಾವುದೇ ಧರ್ಮ ಆಗಲಿ ಪ್ರೀತಿ ತೋರಿಸುತ್ತದೆ, ಹೊರತು ದ್ವೇಷ ಮಾಡುವಂತೆ ಹೇಳಲ್ಲ : ಸಿಎಂ ಸಿದ್ದರಾಮಯ್ಯ

21/03/2026 11:52 AM

ALERT : ಚಿನ್ನ ಪಾಲಿಶ್ ಮಾಡಿಸೋ ಮುನ್ನ ಹುಷಾರ್ : ಬೆಂಗಳೂರಲ್ಲಿ 30 ಗ್ರಾಂ ಚಿನ್ನ ಡಾಲರ್ ಎಗರಿಸಿ ಕಳ್ಳರು ಪರಾರಿ!

21/03/2026 11:50 AM

BREAKING : ಖ್ಯಾತ ಒಡಿಸ್ಸಿ ನೃತ್ಯಗಾರ್ತಿ ಮಧುಮಿತಾ ರಾವತ್ ‘ಹೃದಯಾಘಾತದಿಂದ’ ನಿಧನ | Madhumita Rawat No More

21/03/2026 11:43 AM

ಏರ್ ಇಂಡಿಯಾ ಎಡವಟ್ಟು: 8 ಗಂಟೆ ಹಾರಾಟ ನಡೆಸಿದ ಬಳಿಕ ಕೆನಡಾ ವಿಮಾನ ಯು-ಟರ್ನ್; ‘ತಪ್ಪು ವಿಮಾನ’ ಹಾರಿಸಿದ್ದನ್ನು ಅರಿತ ಸಿಬ್ಬಂದಿ!

21/03/2026 11:37 AM
State News
KARNATAKA

ಯಾವುದೇ ಧರ್ಮ ಆಗಲಿ ಪ್ರೀತಿ ತೋರಿಸುತ್ತದೆ, ಹೊರತು ದ್ವೇಷ ಮಾಡುವಂತೆ ಹೇಳಲ್ಲ : ಸಿಎಂ ಸಿದ್ದರಾಮಯ್ಯ

By kannadanewsnow0521/03/2026 11:52 AM KARNATAKA 1 Min Read

ಬೆಂಗಳೂರು : ಯಾವುದೇ ಧರ್ಮ ದ್ವೇಷ ಮಾಡುವಂತೆ ಹೇಳಲ್ಲ ಎಂದು ಮಿಲ್ಲರ್ ರಸ್ತೆಯ ಮಸ್ಕಿದ್ ಈ ಖಾದರಿಯಲ್ಲಿ ರಂಜಾನ್ ಹಿನ್ನೆಲೆಯಲ್ಲಿ…

ALERT : ಚಿನ್ನ ಪಾಲಿಶ್ ಮಾಡಿಸೋ ಮುನ್ನ ಹುಷಾರ್ : ಬೆಂಗಳೂರಲ್ಲಿ 30 ಗ್ರಾಂ ಚಿನ್ನ ಡಾಲರ್ ಎಗರಿಸಿ ಕಳ್ಳರು ಪರಾರಿ!

21/03/2026 11:50 AM

ಮೂಡುಬಿದ್ರೆ ಇನ್ಸ್ಪೆಕ್ಟರ್ ಸಂದೇಶ್ ಪ್ರಕರಣಕ್ಕೆ ಟ್ವಿಸ್ಟ್ : ಮಹಿಳೆಯರಿಗೆ ಲೈಂಗಿಕ ಕಿರುಕುಳವೇ ನೀಡಿಲ್ಲ ಎಂದ ಕಮಿಷನರ್!

21/03/2026 11:29 AM

ಬಾಗಲಕೋಟೆಯಲ್ಲಿ ಟ್ರೇಡಿಂಗ್ ಹೆಸರಲ್ಲಿ 1.20 ಕೋಟಿ ವಂಚನೆ ತನಿಖೆ ವೇಳೆ, 1296 ಮ್ಯೂಲ್ ಅಕೌಂಟ್ ಪತ್ತೆ, ಆರೋಪಿ ಅರೆಸ್ಟ್!

21/03/2026 11:05 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.