ಬೆಂಗಳೂರು : ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಬೋವಿ ನಿಗಮದಲ್ಲಿ 100 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ವಾಯ್ಸ್ ಮಸೇಜ್ ಮೂಲಕ ಗಂಭೀರ ಆರೋಪ ಮಾಡಿದ್ದಾರೆ.
ಬೋವಿ ನಿಗಮದ ಮಾಜಿ ಅಧ್ಯಕ್ಷರಾದ ಗೂಳಿಹಟ್ಟಿ ಶೇಖರ್ ಅವರು, ಕೋಟಾ ಶ್ರೀನಿವಾಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಉಡುಪಿ-ಚಿಕ್ಕಮಗಳೂರು ನೂತನ ಸಂಸದ ಶ್ರೀನಿವಾಸ ಪೂಜಾರಿ ಅವರು ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದಾಗ ಹಗರಣ ನಡೆದಿದೆ. ಪ್ರಕರಣ ಸಂಬಂಧ ಇಬ್ಬರ ಕೊಲೆಯಾಗಿದೆ. ಬೋವಿ ನಿಗಮದ ಹಗರಣವನ್ನು ಸಿಐಡಿ ತನಿಖೆಗೆ ನೀಡಲಾಗಿದೆ. ಸಿಬಿಐ ತನಿಖೆ ಬೇಡ, ಸಿಟಿಂಗ್ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಿಸಿ ಎಂದು ಹೇಳಿದ್ದರು.
ಕೋಟಾ ಶ್ರೀನಿವಾಸ ಪೂಜಾರಿ ಈಗ ೫೦-೬೦ ಕೋಟಿ ಆಸ್ತಿ ಮಾಡಿದ್ದು ಎಲ್ಲಿಂದ ಬಂತು? ಎಸ್ ಟಿ ನಿಗಮ, ಬೋವಿ ನಿಗಮದ ಹಗರಣಗಳ ಬಗ್ಗೆ ತನಿಖೆ ಮಾಡಿ, ಸಿದ್ದರಾಮಯ್ಯ ಸಿಎಂ ಆದ ಬಳಿಕ ತನಿಖೆ ಸ್ಥಗಿತ ಆಗಿದೆ. ಯಡಿಯೂರಪ್ಪ ಕೇಸ್ ತನಿಖೆ ಮಾಡಿದೇ ಯಾಕೆ ಮುಚ್ಚಿ ಹಾಕಿದ್ರಿ ? ದೂರುದಾರ ಮಹಿಳೆ ಸಾವಿಗೀಡಾದ ಸುದ್ದಿ ಎಲ್ಲೆಡೆ ಬಂದಿದೆ. ಪ್ರಜ್ವಲ್ ಕೇಸ್ ಮಾತ್ರ ತನಿಖೆ ಮಾಡ್ತೀರಾ ಎಂದು ಕಿಡಿಕಾರಿದ್ದಾರೆ.