ಜೆಕ್ ಗಣರಾಜ್ಯದ ಪಾರ್ಡುಬಿಸ್ ನಲ್ಲಿ ಬುಧವಾರ ತಡರಾತ್ರಿ ಪ್ರಯಾಣಿಕರ ರೈಲು ಸರಕು ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು 26 ಜನರು ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಗವರ್ನರ್ ತಿಳಿಸಿದ್ದಾರೆ.
ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಾರ, ಪ್ರೇಗ್ನಿಂದ ಪೂರ್ವಕ್ಕೆ ದೇಶದ ಮುಖ್ಯ ರೈಲು ಕಾರಿಡಾರ್ನ ಭಾಗವಾದ ಪಾರ್ಡುಬಿಸ್ನಲ್ಲಿ ಈ ಅಪಘಾತ ಸಂಭವಿಸಿದೆ. ಪ್ಯಾಸೆಂಜರ್ ರೈಲಿನ ಬಗ್ಗೆ ವಿವರಗಳನ್ನು ಹಂಚಿಕೊಂಡ ಪಾರ್ಡುಬಿಸ್ ಪ್ರದೇಶದ ಗವರ್ನರ್ ಮಾರ್ಟಿನ್ ನೆಟೊಲಿಕಿ, ಇದನ್ನು ರೈಲು ಕಂಪನಿ ರೆಜಿಯೊಜೆಟ್ ನಿರ್ವಹಿಸುತ್ತಿದೆ ಎಂದು ಹೇಳಿದರು.
“ರೆಜಿಯೋಜೆಟ್ ರೈಲು ಮತ್ತು ಸರಕು ರೈಲು ನಡುವೆ ಮುಖಾಮುಖಿ ಡಿಕ್ಕಿಯಾಗಿ ಹಲವಾರು ಜನರು ಸಾವನ್ನಪ್ಪಿದ್ದಾರೆ ಮತ್ತು ಡಜನ್ಗಟ್ಟಲೆ ಜನರು ಗಾಯಗೊಂಡಿದ್ದಾರೆ” ಎಂದು ಅವರು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ .ಘಟನೆಯ ನಂತರ, ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪಿ ಪ್ರಯಾಣಿಕರನ್ನು ಸ್ಥಳಾಂತರಿಸಲು ಪ್ರಾರಂಭಿಸಿದವು. ಹಲವಾರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ರೈಲ್ವೆ ಇಲಾಖೆಯ ಅಗ್ನಿಶಾಮಕ ದಳದ ವಕ್ತಾರರು ಜೆಕ್ ಟಿವಿಗೆ ತಿಳಿಸಿದ್ದಾರೆ.