ಬೆಂಗಳೂರು : 2024-25ನೇ ಸಾಲಿಗೆ ಶಿಕ್ಷಣ ಹಕ್ಕು ಕಾಯಿದೆ-2009ರ ಸೆಕ್ಷನ್ 12(1)(ಬಿ) ಮತ್ತು 12(1)(ಸಿ) ಅಡಿ ಪ್ರವೇಶ ಪ್ರಕ್ರಿಯೆಯ ದಿನಾಂಕ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
2024-25ನೇ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯಿದೆ ಸೆಕ್ಷನ್ 12(1)(ಬಿ) ಮತ್ತು 12(1)(ಸಿ) ಅಡಿ ಪ್ರವೇಶ ಪ್ರಕ್ರಿಯೆ ನಡೆಸಲು ಉಲ್ಲೇಖ-04ರ ಸುತ್ತೋಲೆಯನ್ವಯ ಕ್ರಮವಹಿಸಲಾಗಿದೆ. ಕಾರ್ಯಸೂಚಿಯನ್ವಯ ಆರ್.ಟಿ.ಇ ಅಡಿ ಮೊದಲ ಸುತ್ತಿನ ಆನ್ಲೈನ್ ಲಾಟರಿ ಪ್ರಕ್ರಿಯೆಯನ್ನು 05.06.2024 ರಂದು ನಡೆಸಲು ದಿನಾಂಕವನ್ನು ನಿಗದಿಪಡಿಸಲಾಗಿತ್ತು.
ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಆರ್.ಟಿ.ಇ ಮೊದಲ ಸುತ್ತಿನ ಆನ್ಲೈನ್ ಲಾಟರಿ ಪ್ರಕ್ರಿಯೆಯನ್ನು ಮುಂದೂಡಲಾಗಿದ್ದು, ದಿನಾಂಕ 07.06.2024 ನಡೆಸಲಾಗುವುದು. ಪರಿಷ್ಕೃತ ವೇಳಾಪಟ್ಟಿಯನ್ನು ಲಗತ್ತಿಸಿದೆ.