ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸ್ಐಟಿಯಲ್ಲಿರುವ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಇದೀಗ ಎಸ ಐ ಟಿ ಅಧಿಕಾರಿಗಳು ಮೆಡಿಕಲ್ ಟೆಸ್ಟ್ಗೆ ಎಂದು ಆಸ್ಪತ್ರೆಗೆ ಕರೆದು ತಂದಿದ್ದಾರೆ.
ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಒಂದು ತಿಂಗಳಲ್ಲಿ ವಿದೇಶದಲ್ಲಿ ಪ್ರಜ್ವಲ್ ರೇವಣ್ಣ ಅವರು ತಲೆಮರಿಸಿಕೊಂಡಿದ್ದರು. ಅದಾದ ಬಳಿಕ ಇದೊಂದು ಪ್ರಕರಣದಲ್ಲಿ ಹಲವಾರು ಬೆಳವಣಿಗೆಗಳು ನಡೆಯದವು. ಇತ್ತೀಚಿಗೆ ಅಂದರೆ ಮೇ 27ರಂದು ಮಧ್ಯರಾತ್ರಿ ಜಪಾನ್ ನಿಂದ ಪ್ರಜ್ವಲ್ ರೇವಣ್ಣ ಅವರು ಬೆಂಗಳೂರಿಗೆ ಆಗಮಿಸಿದ್ದರು.
ಬೆಂಗಳೂರಿಗೆ ಬಂದ ತಕ್ಷಣ ಎಸ್ ಐ ಟಿ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದುಕೊಂಡು ಮರುದಿನ ಕೋರ್ಟಿಗೆ ಹಾಜರುಪಡಿಸಿದ್ದರು. ಇವಳೆ ಕೋರ್ಟ್ ವಿಚಾರಣೆ ನಡೆಸಿ ಎಸ್ ಐ ಟಿ ಕಸ್ಟರ್ಡಿಗೆ ನೀಡಿ ಎಂದು ಆದೇಶ ಹೊರಡಿಸಿತ್ತು ಇದೀಗ ರೇವಣ್ಣ ಅವರನ್ನು ಮೆಡಿಕಲ್ ಟೆಸ್ಟ್ಗೆ ಎಂದು ಎಸ ಐ ಟಿ ಅಧಿಕಾರಿಗಳು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.