ಬೆಂಗಳೂರು : ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ವಿಡಿಯೋ ಇಟ್ಟುಕೊಂಡು ಕಿಡಿಗೇಡಿಗಳು ದಂಧೆಗಿಳಿದಿದ್ದಾರೆ. ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಬೇಕಾ? ಡಿಎಂ ಮಾಡಿ. ಡಿಎಂ ಮಾಡುವುದರ ಜೊತೆಗೆ ಪೇಜ್ ಲೈಕ್ ಮಾಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಲೈಕ್ಗಳಿಗಾಗಿ ಕಿಡಿಗೇಡಿಗಳು ದಂಧೆಗಿಳಿದಿದ್ದಾರೆ. ವಿಡಿಯೋ ಬೇಕೆಂದರೆ ಇಂತಿಷ್ಟು ಹಣ ನೀಡಬೇಕು ಎಂದು ಹಣ ಮಾಡುವ ಅನಿಷ್ಟ ದಂಧೆಗೆ ಕೈ ಹಾಕಿದ್ದಾರೆ.
ಹೌದು ಪ್ರಜ್ವಲ್ ಅಶ್ಲೀಲ ವಿಡಿಯೋ ಇಟ್ಟುಕೊಂಡು ಇದೀಗ ದಂಧೆಗೆ ಇಳಿದ ಕಿಡಿಗೇಡಿಗಳು. ಸೋಶಿಯಲ್ ಮೀಡಿಯಾದಲ್ಲಿ ಲೈಕ್ ಗೋಸ್ಕರ ಕಿಡಿಗೇಡಿಗಳು ಇದೀಗ ಈ ಹೊಲಸು ದಂಧೆಗೆ ಇಳೆದಿದ್ದಾರೆ. ಡೈರೆಕ್ಟ್ ಮೆಸೇಜ್ ಮಾಡುವುದರ ಜೊತೆಗೆ ನಮ್ಮ ಪೇಜ್ ಲೈಕ್ ಮಾಡಿ ಪ್ರಜ್ವಲ್ ರೇವಣ್ಣನ ಎಲ್ಲಾ ವಿಡಿಯೋಗಳಿವೆ ನಿಮಗೆ ಬೇಕಿದ್ದರೆ ಹಣ ಕಳುಹಿಸಿ ಎಂದು ಲೈಕ್ ಗೋಸ್ಕರ ಹಾಗೂ ಹಣಕ್ಕಾಗಿ ಪ್ರಜ್ವಲ್ ಆಶೀಲ ವಿಡಿಯೋಗಳಿಗೆ ಕಿಡಿಗೇಡಿಗಳು ದಂಧೆಗೆ ಇಳಿದಿದ್ದರೆ.
ಸಂತ್ರಸ್ತೆಯರಲ್ಲದೆ ತೆಲುಗು ನಾಯಕ ನಟಿಯರ ಫೊಟೋ ಬಳಸಿ ವಿಡಿಯೋ ಇದೆ ಎಂದು ವಂಚನೆ ಮಾಡಲಾಗುತ್ತಿದೆ. ಈಗಾಗಲೆ ಎಸ್ಐಟಿ ವಿಡಿಯೋಗಳನ್ನ ಶೇರ್ ಮಾಡದಂತೆ ಸುತ್ತೋಲೆ ಹೊರಡಿಸಿದೆ. ಆದರೂ ವಿಡಿಯೋಗಳನ್ನ ಹಣಕ್ಕಾಗಿ, ಲೈಕ್ ಗಾಗಿ ಬಳಕೆ ಮಾಡಲಾಗುತ್ತಿದ್ದು ಈ ಬಗ್ಗೆ ಆದಷ್ಟು ಬೇಗ ಗಮನ ಹರಿಸಿ ಆರೋಪಿಗಳನ್ನು ಬಂಧಿಸಿ ಶಿಕ್ಷಿಸಬೇಕಿದೆ.
ಪ್ರಜ್ವಲ್ ವಿಡಿಯೋ ಪಡೆಯಲು ಕೆಲವರು ಮುಗಿಬಿದ್ದು ವಿಡಿಯೋ ಪಡೆಯುತ್ತಿದ್ದಾರೆ ಎಬ ಮಾಹಿತಿ ಸಿಕ್ಕಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಪ್ರಜ್ವಲ್ ವಿಡಿಯೋ ಟ್ರೆಂಡಿಂಗ್ ಆಗಿದೆ. ವಿಡಿಯೋ ವೈರಲ್ ಆಗ್ತಿರೋದನ್ನ ತಡೆಯೋದ್ರಲ್ಲಿ ವಿಫಲವಾಗಿದೆ.