ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ನಿರೀಕ್ಷೆ ಮಾಡಿದಷ್ಟು ಸೀಟ್ ಗೆಲ್ಲಲು ಸಾಧ್ಯವಾಗಿಲ್ಲ. ಇದರಿಂದ ಸಿಎಂ ಸಿದ್ಧರಾಮಯ್ಯ ಕೂಡ ಬೇಸರಗೊಂಡಿದ್ದಾರೆ. ಅವರು ಬಹಳ ಸೆನ್ಸಿಟಿವ್ ವ್ಯಕ್ತಿ. ಇದರಿಂದಾಗಿ ನಾಳೆಯೇ ಅವರು ರಾಜೀನಾಮೆ ಕೊಟ್ಟರೂ ಕೊಡಬಹುದು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಎಕ್ಸಾಂನಲ್ಲಿ ಸೋತಿದ್ದಾರೆ. ಡಿಸಿಎಂ ತವರು ಕ್ಷೇತ್ರದಲ್ಲಿ ಹೀನಾಯ ಸೋಲು ಕಂಡಿದ್ದಾರೆ. ಡಾ. ಮಂಜುನಾಥ್ ಅವರು ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಹಾಗಿದ್ದರೂ ಬಹು ಮತದಿಂದ ಗೆಲುವು ಸಾಧಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ತುಂಬಾ ಸೆನ್ಸಿಟಿವ್. ಸಿಎಂ ಸಿದ್ದರಾಮಯ್ಯ ಅವರು ನಾಳೆ ರಾಜೀನಾಮೆ ಕೊಡುತ್ತಾರೆ ಅನಿಸುತ್ತೆ. ನಾಳೆ ಬೆಳಿಗ್ಗೆ ಪತ್ರಿಕಾಗೋಷ್ಠಿ ಕರೆದು ರಾಜೀನಾಮೆ ಕೊಟ್ಟರು ಕೊಡಬಹುದು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ವೋಟು ಶೇ.46. ಎನ್ಡಿಎಗೆ 51.66 % ವೋಟ್ ಶೇರಿಂಗ್ ಬಂದಿದೆ 136 ಎಂಎಲ್ಎ ಇರುವ ಕಾಂಗ್ರೆಸ್ ಸರ್ಕಾರಕ್ಕೆ ಶೇ. 45.43ರಷ್ಟು ವೋಟ್ ಶೇರ್ ಬಂದಿದೆ. ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಯೋಗ್ಯತೆ ಇದರಲ್ಲೇ ಗೊತ್ತಾಗುತ್ತಿದೆ. ಈ ಬಾರಿ ಡಬಲ್ ಡಿಜಿಟ್ ದಾಟುತ್ತೇವೆ ಅಂತಾ ಸಿಎಂ ಹೇಳ್ತಾ ಇದ್ರು. ಡಿಸಿಎಂ ನನ್ನದೇ ಸ್ಟ್ರಾಟರ್ಜಿ ಅನ್ನುತ್ತಿದ್ರು ಆದ್ರೆ ಏನು ಆಗಲಿಲ್ಲ ಎಂದರು.