ಕೋಲ್ಕತ್ತಾ : ಪ್ರಧಾನಿಗೆ ಬಹುಮತ ಸಿಗದಿರುವುದು ಸಂತಸ ತಂದಿದೆ. ಈ ಬಾರಿ 400 ಸೀಟು ದಾಟುತ್ತೇವೆ ಎಂದು ಹೇಳಿದ್ದಕ್ಕೆ ಪ್ರಧಾನಿಯವರು ವಿಶ್ವಾಸಾರ್ಹತೆ ಕಳೆದುಕೊಂಡಿದ್ದಾರೆ, ಕೂಡಲೇ ರಾಜೀನಾಮೆ ನೀಡಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗ್ರಹಿಸಿದರು.
ಕೋಲ್ಕತ್ತಾದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, ಜನಾದೇಶಕ್ಕಾಗಿ ಪಶ್ಚಿಮ ಬಂಗಾಳದ ಜನತೆಗೆ ಧನ್ಯವಾದ ಅರ್ಪಿಸಿದ ಮಮತಾ, ಮೋದಿ ಅವರು ಎಲ್ಲ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದ್ದಾರೆ ಎಂಬುದನ್ನು ಈ ಫಲಿತಾಂಶಗಳು ತೋರಿಸಿವೆ. ಅವರು ತಕ್ಷಣವೇ ರಾಜೀನಾಮೆ ನೀಡಬೇಕು. ಈ ಬಾರಿ ಬಹಳಷ್ಟು ಜನ ನನ್ನನ್ನು ಕಡಿಮೆ ಅಂದಾಜು ಮಾಡಿದ್ದಾರೆ ಎಂದರು.
ನನಗೆ ಷೇರು ಮಾರುಕಟ್ಟೆ ಹೆಚ್ಚು ಅರ್ಥವಾಗುತ್ತಿಲ್ಲ, ಆದರೆ ನೀವು ಇಂದು ಷೇರು ಮಾರುಕಟ್ಟೆಯನ್ನು ನೋಡಿದ್ದೀರಾ? ಎಂದು ಕೇಳಿದ್ದಾರೆ.ಅಲ್ಲದೆ ಮುಂದುವರೆದು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ ಬ್ಯಾನರ್ಜಿ, “ನೀವು ಇಸಿಐ, ಸಿಬಿಐ ಅನ್ನು ನಿಯಂತ್ರಿಸಬಹುದು, ಆದರೆ ಇಂಡಿಯಾ ಬ್ಲಾಕ್ ನಿಮ್ಮನ್ನು ಕೆಳಗಿಳಿಸುತ್ತದೆ ಎಂದು ಹೇಳಿದ್ದಾರೆ.