ನವದೆಹಲಿ : ಲೋಕಸಭೆ ಚುನಾವಣಾ ಫಲಿತಾಂಶ ಬಹುತೇಕ ಹೊರಬಿದ್ದಿದ್ದು , ನಿರೀಕ್ಷೆಯಂತೆ ಎನ್ಡಿಎ ಹೆಚ್ಚಿನ ಸ್ಥಾನಗಳನ್ನು ಪಡೆಯುವ ವಿಫಲವಾಗಿದೆ. ಅದೇ ರೀತಿಯಾಗಿ, ಇಂಡಿಯಾ ಮೈತ್ರಿ ಕೂಟ ನಿರೀಕ್ಷೆಯಂತೆ ಹೆಚ್ಚಿನ ಸ್ಥಾನಗಳನ್ನು ಗಳಿಸಿಕೊಂಡಿದೆ, ಇದೀಗ ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಿದರು.
ಸಂವಿಧಾನವನ್ನು ಉಳಿಸುವ ಮೊದಲ ಹೆಜ್ಜೆ ಜನರು ಇಟ್ಟಿದ್ದಾರೆ. ಸಂವಿಧಾನದ ರಕ್ಷಣೆಗಾಗಿ ಜನರು ಒಗ್ಗಟ್ಟಾಗಿ ಹೋರಾಡಿದ್ದಾರೆ. ಸಂವಿಧಾನ ಪುಸ್ತಕ ಕೈಯಲ್ಲಿ ಹಿಡಿದು ರಾಹುಲ್ ಗಾಂಧಿ ಇದೆ ವೇಳೆ ತೋರಿಸಿದರು. ಸಂವಿಧಾನವನ್ನು ಉಳಿಸಲು ಹೋರಾಟ ಮಾಡಬೇಕಿತ್ತು.ಮೋದಿ ಅಮಿತ್ ಶಾ ಎಲ್ಲಾ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದರು.
ಇಡೀ ಆಡಳಿತ ವ್ಯವಸ್ಥೆ ವಿರುದ್ಧ ಹೋರಾಟ ಮಾಡಿದ್ದೇವೆ. ನಾವು ಕೇವಲ ರಾಜಕಾರಣಕ್ಕಾಗಿ ಹೋರಾಟ ಮಾಡಲಿಲ್ಲ ಎಂದು ದೆಹಲಿ ಎಐಸಿಸಿ ಕಚೇರಿಯಲ್ಲಿ ರಾಹುಲ್ ಗಾಂಧಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಎಲ್ಲಾ ಸಂಸ್ಥೆಗಳನ್ನ ಮೋದಿ, ಅಮಿತ್ ಶಾ ಬೆದರಿಸಿದ್ದರು. ಸಂವಿಧಾನವನ್ನು ಉಳಿಸುವ ಹೋರಾಟವಾಗಿತ್ತು. ನಮ್ಮ ಬ್ಯಾಂಕ್ ಅಕೌಂಟ್ ಸೀಸ್ ಮಾಡಿದಾಗ ನಮ್ಮ ಮುಖ್ಯಮಂತ್ರಿ ಅವರನ್ನು ಜೈಲಿಗೆ ಹಾಕಿದ್ದರು.
ಒಂದಾಗಿ ಹೋರಾಡಬೇಕು ಅಂತ ಆಗ ನಾನು ಅಂದುಕೊಂಡಿದ್ದೆ. ಮೊದಲಿಗೆ ನಾವು ಇಂಡಿಯಾ ಒಕ್ಕೂಟದ ನಾಯಕರಿಗೆ ಗೌರವ ನೀಡುತ್ತಿದ್ದೇವೆ. ಎಲ್ಲೆಲ್ಲಿ ಒಗ್ಗಟ್ಟಾಗಿ ಹೊರಾಡಿದ್ದೇವೆ ಅಲ್ಲೆಲ್ಲ ಗೆದ್ದಿದ್ದೇವೆ. ಸಂವಿಧಾನ ಮೀಸಲಾತಿ ಮೇಲೆ ದಾಳಿ ಬಡತನ ಅದಾನಿ ಅವರ ಷೇರು ಬಿದ್ದಿರುವುದನ್ನು ನೋಡಿದ್ದೀರಿ. ಭ್ರಷ್ಟಾಚಾರದ ನೇರ ಸಂಪರ್ಕ ಮೋದಿಯವರಿಗಿದೆ. ಕಾಂಗ್ರೆಸ್ ಪಕ್ಷ ನಿಮ್ಮ ಜೊತೆಗೆ ನಿಲ್ಲುತ್ತದೆ ಜಾತಿಗಣತಿ ಮಹಾಲಕ್ಷ್ಮಿ ನಮ್ಮ ಭರವಸೆಯಾಗಿದೆ ಎಂದು ತಿಳಿಸಿದರು.