ಮಂಡ್ಯ : ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ ಡಾ.ಮಂಜುನಾಥ್ ಗೆಲುವು ಕುರಿತಾಗಿ HD ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು,ಡಾ.ಮಂಜುನಾಥ್ ನ ಹರಕೆ ಕುರಿ ಮಾಡಿದ್ದಾರೆ ಎಂದಿದ್ದರೂ.ಇವತ್ತು ಯಾರು ಹರಕೆ ಕುರಿಯಾಗಿದ್ದಾರೆ ಎಂಬುದು ಫಲಿತಾಂಶದಿಂದ ತಿಳಿದಿದೆ.ಡಿ.ಕೆ.ಸುರೇಶ್ ರ 2019 ರ ಗೆಲುವಿಗೆ ಜೆಡಿಎಸ್ ಕಾರಣ.ಜೆಡಿಎಸ್ ಸಹಕಾರವೇ ಅವರ ಹಿಂದಿನ ಎರಡು ಗೆಲುವಿಗೆ ಕಾರಣ. ನಮ್ಮ ಪಕ್ಷವನ್ನ ಸರ್ವ ನಾಶ ಮಾಡಲು ಹೊರಟಿದ್ದರು.ಅದಕ್ಕೆ ಇಂದು ಜನರು ಉತ್ತರ ಕೊಟ್ಟಿದ್ದಾರೆ ಎಂದರು
ಮಂಡ್ಯದಲ್ಲಿ ನೂತನ ಸಂಸದ ಕುಮಾರಸ್ವಾಮಿ ಸುದಿಗೋಷ್ಠಿಯಲ್ಲಿ ಮಾತನಾಡಿ,ಇದು ನನ್ನ ಗೆಲುವಲ್ಲ, ಮಂಡ್ಯ ಜಿಲ್ಲೆ ಜನರ ಗೆಲುವು. ನಾನು ಈ ಚುನಾವಣೆಯಲ್ಲಿ ಪ್ರಚಾರ ಮಾಡಿಲ್ಲ. ಎರಡು ಪಕ್ಷದ ನಾಯಕರು, ಕಾರ್ಯಕರ್ತರ ಶ್ರಮದಿಂದ ಗೆಲುವು ಕಂಡಿದ್ದೇನೆ.ಈ ಜಿಲ್ಲೆಯ ಜನರು ಋಣ ನಾನು ಹೊತ್ತಿದ್ದೇನೆ.
ಭಗವಂತ ಕೊಟ್ಟ ಅವಕಾಶವನ್ನ ಬಳಸಿಕೊಂಡು ಸಮಸ್ಯೆ ಪರಿಹಾರ ಮಾಡಲು ಪ್ರಯತ್ನಿಸುತ್ತೇನೆ.ಜನರ ನಿರೀಕ್ಷೆಗಳನ್ನ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡ್ತೇನೆ.ಎಲ್ಲ ಫ್ಯಾಕ್ಟರ್ ವರ್ಕ್ ನಿಂದ ಗೆಲುವು ಸಿಕ್ಕಿದೆ.ಪಕ್ಷಾತೀತವಾಗಿ ನನ್ನನ್ನ ಗೆಲ್ಲಿಸಿದ್ದಾರೆ. ಬೇರೆ ಪಕ್ಷದ ಮುಖಂಡರು ಸಹಕರಿಸಿದ್ದಾರೆ.ಅವರ ನಿರೀಕ್ಷೆ ಹುಸಿಯಾಗಲ್ಲ ಎಂದು ಅವರು ತಿಳಿಸಿದರು.
ಸಿಎಂ ವಿರುದ್ದ ಕುಮಾರಸ್ವಾಮಿ ಕಿಡಿ. ಸೂರ್ಯ ಚಂದ್ರು ಹುಟ್ಟೋದು ಎಷ್ಟು ಸತ್ಯನೋ, ಕುಮಾರಸ್ವಾಮಿ ಸೋಲೋದು ಅಷ್ಟೇ ಸತ್ಯ ಅಂತಿದ್ರು.ಇವಾಗ ಸೂರ್ಯ ಚಂದ್ರ ಹುಟ್ಟೋಕೆ ಸರ್ಕಾರ ಆದೇಶ ಕೊಡುತ್ತೋ, ಇಲ್ವೋ?ಮಂಡ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೂತನ ಸಂಸದ ಕುಮಾರಸ್ವಾಮಿ ಟಾಂಗ್ ನೀಡಿದರು.ಮಂಡ್ಯ, ರಾಮನಗರ ಜನ ರಾಜಕೀಯವಾಗಿ ಶಕ್ತಿ ತುಂಬಿದ್ದಾರೆ.ಕೇಂದ್ರದಿಂದ ರಾಜ್ಯದ ನಿರೀಕ್ಷೆಗಳನ್ನ ಕಾರ್ಯರೂಪಕ್ಕೆ ತರಲಾಗುವುದು.
ನನಗೆ ದೊಡ್ಡ ಅಂತರದ ಗೆಲುವಿನ ನಿರೀಕ್ಷೆ ಇತ್ತು. ಆದ್ದರಿಂದಲೇ ನಾನು ಇಲ್ಲಿ ಠಿಕಾಣಿ ಹೂಡಲಿಲ್ಲ.ರಾಜ್ಯದ ಎಲ್ಲ ಕ್ಷೇತ್ರವನ್ನ ಸುತ್ತಿದ್ದೇನೆ.ರಾಮನಗರ, ಚನ್ನಪಟ್ಟಣದ ರೀತಿ ಮಂಡ್ಯ ಜಿಲ್ಲೆಯ ನಾಯಕರು ಜವಾಬ್ದಾರಿ ನಿರ್ವಹಿಸಿದ್ದಾರೆ.ನನ್ನನಿರೀಕ್ಷೆ 25 ಸ್ಥಾನ ಗೆಲ್ಲುವ ಗುರಿ ಇತ್ತು. ಆದರೇ 19 ಬಂದಿರೋದು ನೋವು ತಂದಿದೆ.
ನಾಳೆ ದೆಹಲಿ ಸಭೆಗೆ ಆಹ್ವಾನಿಸಿದ್ದಾರೆ.ಕೇಂದ್ರ ಮಂತ್ರಿಯಾಗ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಮಂತ್ರಿಯಾಗುವುದು ಮುಖ್ಯವಲ್ಲ.ಜಿಲ್ಲೆಯ ಸಮಸ್ಯೆಗಳಿಗೆ ಪರಿಹಾರ ಮೊದಲ ಆದ್ಯತೆ ನೀಡುತ್ತೇನೆ.ಕಾವೇರಿ ಸಮಸ್ಯೆ ಬಗೆಹರಿಸುತ್ತಾರಾ ಎಂಬ ವಿಚಾರವಾಗಿ ಮಾತನಾಡಿದ ಅವರು, ಬ್ರೀಟಿಷರ ಕಾಲದಿಂದಲೂ ಕಾವೇರಿ ಸಮಸ್ಯೆ ಇದೆ.ಶಾಶ್ವತ ಪರಿಹಾರಕ್ಕೆ ಪ್ರಯತ್ನ ಪಡುತ್ತೇನೆ.
ಎನ್ ಡಿಎ ಸರ್ಕಾರ ರಚನೆಗೆ ಸಮಸ್ಯೆ ಇಲ್ಲ.ಹಾಸನದಲ್ಲಿ ಜೆಡಿಎಸ್ ಗೆ ಸೋಲು ವಿಚಾರವಾಗಿ ಮುಂದಿನ ಬಾರಿ ಗೆಲ್ಲುತ್ತೇವೆ ಬಿಡಿ.
ಮಂಡ್ಯ ಗೆಲುವಿನಿಂದ ಚನ್ನಪಟ್ಟಣ ಕ್ಷೇತ್ರ ತೆರವು ವಿಚಾರ.ಇಡೀ ಕರ್ನಾಟಕ ನನ್ನ ಕರ್ಮ ಭೂಮಿ.ಪಕ್ಷದ ಕಾರ್ಯಕರ್ತರ ಜೊತೆ ಕುಳಿತು ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.