ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಗಾವಣೆಯಲ್ಲಿ ತೆಲಂಗಾಣಕ್ಕೆ ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಆಗಿದೆ ಎಂದು ಗಂಭೀರ ಆರೋಪ ಮಾಡಿದರು.
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೈ ಹೈಕಮಾಂಡ್ಗೆ ತಲುಪಿಸಲು ಹಣ ವರ್ಗಾವಣೆ ಮಾಡಲಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ ರಾಜು ಹೇಳಿಕೆಯನ್ನು ನೀಡಿದ್ದು, ಈ ಒಂದು ಪ್ರಕರಣದಲ್ಲಿ ಸಿಎಂ ಸಹ ತಪ್ಪಿತಸ್ಥರು. ಅವರ ಒಂದು ನಿಗಾವಣೆಯಲ್ಲಿ ಹಣ ವರ್ಗಾವಣೆ ಮಾಡಲಾಗಿದೆ.ಇದು ಸಿಎಂ ಮೂಗಿನ ಅಡಿಯಲ್ಲಿ ನಡೆದ ಅಕ್ರಮವಾಗಿದೆ.ಆರ್ಥಿಕ ಇಲಾಖೆಯ ಅನುಮತಿ ಇಲ್ಲದೆ ಹಣ ವರ್ಗಾವಣೆ ಮಾಡಲು ಸಾಧ್ಯವಿಲ್ಲ.
ತೆಲಂಗಾಣ ಚುನಾವಣೆಗೆ ದಲಿತರ ಹಣವನ್ನು ವರ್ಗಾವಣೆ ಮಾಡಲಾಗಿದೆ. ಕೂಡಲೇ ಸಚಿವ ಬಿ ನಾಗೇಂದ್ರ ಅವರ ರಾಜೀನಾಮೆಯನ್ನು ಪಡೆಯಬೇಕು. ಇಲ್ಲದಿದ್ದರೆ ವಿಜಯೇಂದ್ರ ಹಾಗೂ ಆರ್ ಅಶೋಕ ನೇತೃತ್ವದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಲಾಗುತ್ತದೆ.ಈ ಮಸಿಯನ್ನು ಎಸ್ಐಟಿ ಮೂಲಕ ವರೆಸಿಕೊಳ್ಳಲು ಸಾಧ್ಯನಾ? ಸಿಎಂ ಈ ಪ್ರಕರಣದಲ್ಲಿ ಪಾಲುದಾರರಲ್ಲದಿದ್ದರೆ ಸಿಬಿಐಗೆ ವಹಿಸಲಿ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ವಿರುದ್ಧ ಮಾಜಿ ಶಾಸಕ ಪಿ ರಾಜು ಕಿಡಿಕಾರಿದರು.