ಬೆಂಗಳೂರು : ಕಳೆದ ಮೇ 20 ರಂದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಜಿ ಆರ್ ಫಾರ್ಮ್ ಹೌಸ್ ನಲ್ಲಿ ರೇವ್ ಪಾರ್ಟಿ ಆಯೋಜನೆ ಮಾಡಿಲಾಗಿತ್ತು. ಈ ಒಂದು ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಈ ಒಂದು ಪ್ರಕರಣದಲ್ಲಿ ತೆಲುಗು ನಟಿ ಹೇಮಾ ಕೂಡ ಭಾಗಿಯಾಗಿದ್ದು ಇದೀಗ ಸಿಸಿಬಿ ವಿಚಾರಣೆಗೆ ಹೇಮಾ ಅವರು ಹಾಜರಾಗಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಹೇಮಾ ಅವರು ಹೊರಗಡೆ ಬಂದು ವಿಡಿಯೋ ರೆಕಾರ್ಡ್ ಮಾಡಿ ಪ್ರಕರಣದ ದಿಕ್ಕನ್ನು ತಪ್ಪಿಸುವ ಪ್ರಯತ್ನ ಮಾಡಿದರು. ಹಾಗಾಗಿ ಹೇಮಾಗೆ ಸಿಸಿಬಿ ಎರಡು ಸಲ ನೋಟಿಸ್ ನೀಡಿದರು ವಿಚಾರಣೆಗೆ ಹಾಜರಾಗಿರಲಿಲ್ಲ. ಅದಕ್ಕೆ ಕ್ಯಾರೆ ಅನ್ನದೆ ವಿಚಾರಣೆಗೆ ಗೈರಾಗಿದ್ದರು. ಇದೀಗ ಮೊದಲ ಬಾರಿಗೆ ನಟಿ ಹೇಮಾ ಅವರು ಸಿಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಅದರಂತೆ ಇಂದು ನಟಿ ಹೇಮಾಳನ್ನು ವಶಕ್ಕೆ ಪಡೆಯಲು ಸಿಸಿಬಿ ಸಿದ್ಧತೆ ಮಾಡಿಕೊಂಡಿದ್ದಾರೆ. ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ತೆಲುಗು ನಟಿ ಹೇಮಾ ಹಿಮಾ ಡ್ರಗ್ ಸೇವನೆ ಮಾಡಿದ್ದು ದೃಢ ಕೂಡ ಆಗಿತ್ತು ಎನ್ನಲಾಗಿದೆ. ಡ್ರಗ್ ಮತ್ತು ರೆವ್ ಪಾರ್ಟಿ ಆಯೋಜನೆಯಲ್ಲಿ ಆಕೆ ಪಾತ್ರ ಕೂಡ ಇನ್ನೂ ಇದೆ ಅನ್ನೋದು ಗೊತ್ತಾಗಿದೆ. ಹಾಗಾಗಿ ನಟಿ ಹೇಮಾ ಅವರನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ನಾಳೆ ಕೋರ್ಟಿಗೆ ಹಾಜರುಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನು ಮತ್ತೊಂದೆಡೆ ಸಿಸಿಬಿ ತನಿಖೆಯಲ್ಲಿ ಮತ್ತಷ್ಟು ಸ್ಪೋಟಕ ಸತ್ಯ ಬಯಲಾಗುತ್ತಿದೆ. ಇದು ಕೇವಲ ಡ್ರಗ್ಸ್ ಪಾರ್ಟಿ ಮಾತ್ರವಲ್ಲ. ರೇವ್ ಪಾರ್ಟಿಯ ಮತ್ತಷ್ಟು ಕರಾಳ ಮುಖ ಬಯಲಾಗುತ್ತಿದೆ. ಬಂಧಿತರ ಖಾತೆಯಲ್ಲಿನ 86 ಲಕ್ಷ ಹಣ ಫ್ರೀಜ್ ಮಾಡಲಾಗಿದೆ. ಒಟ್ಟು ಏಳು ಬ್ಯಾಂಕ್ ಖಾತೆಗಳಲ್ಲಿನ 86 ಲಕ್ಷ ಹಣವನ್ನು ಅಧಿಕಾರಿಗಳು ಫ್ರೀಜ್ ಮಾಡಿದ್ದಾರೆ. ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಅಲ್ಲದೆ ಬೆಟ್ಟಿಂಗ್ ಮತ್ತು ಸೆಕ್ಸ್ ದಂಧೆ ಕೂಡ ನಡೆಯುತ್ತಿತ್ತು.
ಆಂಧ್ರ ಪ್ರದೇಶ ಚುನಾವಣೆ ಹಾಗೂ ಲೋಕ ಸಭಾ ಚುನಾವಣೆ, ಐಪಿಲ್ ಹಾಗು ಇತರೆ ಕ್ರೀಡೆಯ ಬಗ್ಗೆ ಬೆಟ್ಟಿಂಗ್ ನಡೆಯುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ. ಈ ಬಗ್ಗೆಯೂ ಪೊಲೀಸರಿಂದ ತನಿಖೆ ಮುಂದುವರೆದಿದೆ. ಪೆಡ್ಲರ್ ಸಿದ್ದಿಕ್ ಮತ್ತು ನಾಗಬಾಬು ಬಳಿ ಡ್ರಗ್ಸ್ ಖರೀದಿ ಮಾಡಿರುವುದಕ್ಕೆ ಸಾಕ್ಷ್ಯ ಪತ್ತೆಯಾಗಿದೆ. ಕೆಲವು ಪೆಡ್ಲರ್ಗಳಿಗೆ ಸಂದೇಶ ಕಳಿಸಿ ಡ್ರಗ್ಸ್ ಖರೀದಿ ಮಾಡಲಾಗಿತ್ತು.
ಡ್ರಗ್ಸ್ ಮಾರಾಟ ಮಾಡಿರುವ ಪೆಡ್ಲರ್ಗಾಗಿಯೂ ಸಿಸಿಬಿ ಹುಡುಕಾಟ ನಡೆಸುತ್ತಿದೆ.ಪಾರ್ಟಿಯಲ್ಲಿ ಎಂಡಿಎಂಎ, ಕೊಕೇನ್, ಗಾಂಜಾ, ಹೈಡ್ರೋ ಗಾಂಜಾ, ಎಂ, ಎಕ್ಸ್ಟೆಸಿ ಪಿಲ್ಸ್, ಚಸರ್ ಹೀಗೆ ಹಲವಾರು ಮಾದರಿಯ ಡ್ರಗ್ಸ್ ಸೇವನೆ ಮಾಡಿರುವುದು ಪತ್ತೆಯಾಗಿದೆ. ಎಲ್ಲಾ ಮಾದರಿಯ ಡ್ರಗ್ಸ್ ಅನ್ನು ಹೇಗೆ ಪಾರ್ಟಿಗೆ ತಂದಿದ್ರು ಎಂಬ ಬಗ್ಗೆ ಸಿಸಿಬಿ ತನಿಖೆ ನಡೆಸುತ್ತಿದೆ.