ಬೆಂಗಳೂರು : ಇಂದು ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆ ಆಗುತ್ತಿದ್ದು, ಹಲವು ಪ್ರದೇಶಗಳಲ್ಲಿ ಅವಾಂತರ ಸೃಷ್ಟಿಯಾಗಿದೆ.ಕಿನೋ ಟಾಕೀಸ್ ಬಳಿ ಅಂಡರ್ ಪಾಸ್ ನಲ್ಲಿ ಬಿಎಂಟಿಸಿ ಬಸ್ ಮುಳುಗಡೆಯಾಗಿ ಪ್ರಯಾಣಿಕರು ಪ್ರಾಣಭಯದಲ್ಲಿ ಇದ್ದರು ಇವಳೇ ಸ್ಥಳದಲ್ಲಿದ್ದ ಜನರು ಪ್ರಯಾಣಿಕರನ್ನು ರಕ್ಷಿಸಿದ್ದಾರೆ.
ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆಯಿಂದ ಜನಜೀವನ ಅಸ್ತವೇಸ್ತವಾಗಿದ್ದು, ಕಿನೋ ಟಾಕೀಸ್ ಬಳಿ ಅಂಡರ್ ಪಾಸ್ ನಲ್ಲಿ BMTC ಬಸ್ ಸಿಲುಕಿ ಮುಳುಗಡೆಯಾಗಿದೆ. ನೆಲಮಂಗಲದಿಂದ ಮೆಜೆಸ್ಟಿಕ್ ಗೆ ಬರುತ್ತಿದ್ದ ಬಸ್ ಇದೀಗ ಸಂಪೂರ್ಣ ಮುಳುಗಡೆಯಾಗಿತ್ತು. ಈ ವೇಳೆ ಸ್ಥಳೀಯರ ನೆರವಿನಿಂದ ಪ್ರಯಾಣಿಕರನ್ನು ರಕ್ಷಿಸಲಾಗಿದೆ.
ಬಸ್ ನಲ್ಲಿ ಸಿಲುಕಿದ್ದ ಸ್ತ್ರೀಯರು ಮಕ್ಕಳನ್ನು ಹೊರಗೆ ಕರೆತಂದ ಚಾಲಕ ಮತ್ತು ನಿರ್ವಾಹಕ. ಪ್ರತಿಬಾರಿ ಮಳೆ ಬಂದಾಗಲೂ ಈ ಒಂದು ಅಂಡರ್ ಪಾಸ್ ಸಂಪೂರ್ಣವಾಗಿ ಜಲಾವೃತವಾಗುತ್ತದೆ.ಹಲವು ಬಾರಿ ರಸ್ತೆಯನ್ನು ದುರಸ್ತಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಬಸ್ ನಲ್ಲಿ ಸಿಲುಕಿದ್ದ ಸ್ತ್ರೀಯರು ಮಕ್ಕಳು ಸಿರಿಗಂತೆ ಎಲ್ಲರನ್ನು ಚಾಲಕ್ ಮತ್ತು ನಿರ್ವಾಹಕರು ಸ್ಥಳೀಯರ ನೆರವನಿಂದ ರಕ್ಷಣೆ ಮಾಡಿದ್ದಾರೆ.
ಅಲ್ಲದೆ ಗುಡುಗು ಜೋರಾದ ಗಾಳಿ ಮಳೆಯಿಂದಾಗಿ ಮೆಟ್ರೋ ಹಳ್ಳಿಗಳ ಮೇಲೆ ಮರದ ಗೊಂಬೆಗಳು ಬಿದ್ದಿರುವ ಘಟನೆ ಕೂಡ ನಡೆದಿದೆ. ಗಾಳಿ ಮಳೆಯಿಂದ ಮರದ ಕೊಂಬೆಗಳು ಮೆಟ್ರೋ ಟ್ರ್ಯಾಕ್ ಮೇಲೆ ಬಿದ್ದಿವೆ. ಟ್ರಿನಿಟಿ ಎಂಬಿ ರಸ್ತೆ ಮೆಟ್ರೋ ನಿಲ್ದಾಣದ ನಡುವಿನ ಟ್ರ್ಯಾಕ್ ಮೇಲೆ ಮರದ ಕೊಂಬೆಗಳು ಬಿದ್ದಿವೆ ಮೆಟ್ರೋ ರೈಲಿನ ಟ್ರ್ಯಾಕ್ ಮೇಲೆ ಮರದ ಕೊಂಬೆ ಬಿದ್ದ ಹಿನ್ನೆಲೆಯಲ್ಲಿ ಕೆಲಕಾಲ ಸಂಚಾರ ವ್ಯತೆಯ ಉಂಟಾಯಿತು.