ಕಲಬುರಗಿ : ಲೋಕಸಭಾ ಚುನಾವಣೆಯ ನಿಖರ ಫಲಿತಾಂಶ ಇದೆ ನಾಲ್ಕರಂದು ಹೊರ ಬೀಳಲಿದೆ ಆದರೆ ಅದಕ್ಕೂ ಮುನ್ನ ನಿನ್ನೆ ಬಿಜೆಪಿ ಬಹುಮತ ಪಡಿದಿದೆ ಎಂದು ಸಮೀಕ್ಷೆ ಬಹಿರಂಗಗೊಳಿಸಿತು ಇನ್ನು ಈ ಒಂದು ಎಕ್ಸಿಟ್ ಪೋಲ್ ಸಮೀಕ್ಷೆ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು,ಇಂಡಿಯಾ ಒಕ್ಕೂಟ 295ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತ ಎಂದು ತಿಳಿಸಿದರು.
ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ಸಂಸ್ಥೆಗಳು ಪ್ರಕಟಿಸಿರುವ ಮತಗಟ್ಟೆ ಸಮೀಕ್ಷೆಗಳು ಹಿಂದೆಯೂ ಸುಳ್ಳಾಗಿದ್ದವು. ಅಖಿಲ ಭಾರತ ಮಟ್ಟದಲ್ಲಿ ‘ಇಂಡಿಯಾ’ ಒಕ್ಕೂಟ 295ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತ. ರಾಜ್ಯದಲ್ಲಿ ಕಾಂಗ್ರೆಸ್ಗೆ 18 ಸ್ಥಾನಗಳು ಬರಲಿವೆ ಎಂದು ಅವರು ತಿಳಿಸಿದರು.
ಕಳೆದ ವರ್ಷ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬುದನ್ನು ಹೇಳಿರಲಿಲ್ಲ.ಬಿಜೆಪಿ ಮೊದಲಿನಿಂದಲೂ 400 ಪಾರ್ ಎಂದು ಹೇಳುತ್ತಾ ಬಂದಿದೆ. ಅಷ್ಟು ಸೀಟುಗಳ ಬಂದರೆ ಸಂವಿಧಾನವನ್ನು ಬದಲಿಸುವುದು ಸುಲಭ ಎಂದು ಆ ಪಕ್ಷದ ಮುಖಂಡರು ಹೇಳಿದ್ದರು. ನಮ್ಮ ಅಂದಾಜಿನ ಪ್ರಕಾರ ಬಿಜೆಪಿ 230 ಸ್ಥಾನಗಳನ್ನಷ್ಟೇ ಗೆಲ್ಲಬಹುದು ಎಂದು ತಿಳಿಸಿದರು.
ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬರುವುದಿಲ್ಲ ಎಂದಿದ್ದವು. ಆದರೆ, ಫಲಿತಾಂಶ ಬಂದ ಮೇಲೆ ಆಗಿದ್ದೇನು? ಕಾಂಗ್ರೆಸ್ ಪಕ್ಷ 136 ಸ್ಥಾನಗಳಲ್ಲಿ ಜಯಗಳಿಸಿತ್ತು. ಆಗಲೂ ನಮಗೆ 125 ಸ್ಥಾನಗಳಾದರೂ ಬರುತ್ತವೆ ಎಂಬ ವಿಶ್ವಾಸವಿತ್ತು. ಮಾಧ್ಯಮಗಳ ಮತಗಟ್ಟೆ ಸಮೀಕ್ಷೆಗಳಿಗಿಂತ ನಮಗೆ ಜನರ ಮತಗಟ್ಟೆ ಸಮೀಕ್ಷೆಯ ಮೇಲೆ ಹೆಚ್ಚಿನ ವಿಶ್ವಾಸವಿದೆ. ಇನ್ನು 48 ಗಂಟೆಗಳಲ್ಲಿ ಫಲಿತಾಂಶವೇ ಹೊರಬೀಳಲಿದೆ ಎಂದರು.