ಬೆಂಗಳೂರು: ಎರಡು ಹಂತಗಳಲ್ಲಿ ಕರ್ನಾಟಕದಲ್ಲಿ ನಡೆದಿದ್ದಂತ ಲೋಕಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ ವರದಿ ಬಹಿರಂಗಗೊಂಡಿದೆ. ಎನ್ ಡಿಎ 20 ಸ್ಥಾನಗಳನ್ನು ಗೆದ್ದು ಕೊಂಡರೇ, ಇಂಡಿಯಾ ಮೈತ್ರಿಕೂಟ 08 ಸ್ಥಾನ ಗೆಲ್ಲಲಿದೆ ಎಂಬುದಾಗಿ ಟಿವಿ9 ಪೋಲ್ಸ್ಟ್ರಾಟ್ ಮತಗಟ್ಟೆ ಸಮೀಕ್ಷೆ ತಿಳಿಸಿದೆ.
ಈ ಕುರಿತಂತೆ ಮಾಹಿತಿ ಬಿಡುಗಡೆ ಮಾಡಿರುವಂತ ಟಿವಿ9, ಪೋಲ್ ಸ್ಟ್ರಾಟ್ ಮತಗಟ್ಟೆ ಸಮೀಕ್ಷೆಯ ಪ್ರಕಾರ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಯಿಂದ 18 ಸ್ಥಾನ ಹಾಗೂ ಜೆಡಿಎಸ್ ಪಕ್ಷದಿಂದ 2 ಸ್ಥಾನಗಳಿಗೆ ಸ್ಪರ್ಧೆ ನಡೆಸಲಾಗಿತ್ತು. ಕಾಂಗ್ರೆಸ್ ಪಕ್ಷದಿಂದ 28 ಸ್ಥಾನಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು ಎಂದಿದೆ.
ಕರ್ನಾಟಕ ಲೋಕಸಭಾ ಚುನಾವಣೆ ಎಕ್ಸಿಟ್ ಪೋಲ್ ನ ಪೋಲ್ ಸ್ಟ್ರಾಟ್ ಮತಗಟ್ಟೆ ಸಮೀಕ್ಷೆಯ ಪ್ರಕಾರ ಎನ್ ಡಿಎ ಮೈತ್ರಿ ಕೂಟವು 20 ಸ್ಥಾನಗಳನ್ನು ಗೆಲ್ಲಲಿದೆ. ಇಂಡಿಯಾ ಮೈತ್ರಿಕೂಟವಾದಂತ ಕಾಂಗ್ರೆಸ್ 08 ಸ್ಥಾನಗಳಿಗೆ ತೃಪ್ತಿಗೊಳ್ಳಬೇಕಾಗಿದೆ ಎಂಬುದಾಗಿ ತಿಳಿಸಿದೆ.
ಇಂಡಿಯಾ ಟಿವಿ-ಸಿಎನ್ಎಕ್ಸ್ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಬಿಜೆಪಿ 18-22, ಕಾಂಗ್ರೆಸ್ 4-8 ಮತ್ತು ಜೆಡಿಎಸ್ 1-3 ಸ್ಥಾನಗಳನ್ನು ಗೆಲ್ಲಲಿದೆ.
ಕರ್ನಾಟಕ ಲೋಕಸಭೆ ಚುನಾವಣೆ ಎಕ್ಸಿಟ್ ಪೋಲ್#exitpollresults2024 #ExitPoll #TV9Kannada pic.twitter.com/JU2Y6XS93r
— TV9 Kannada (@tv9kannada) June 1, 2024
BIG NEWS: ರಾಜ್ಯ ಸರ್ಕಾರದಿಂದ ‘ಗುತ್ತಿಗೆದಾರ’ರಿಗೆ ಬಿಗ್ ಶಾಕ್: ಈ ನಿಯಮ ಪಾಲಿಸದಿದ್ರೆ ‘ಡಿಬಾರ್ ಫಿಕ್ಸ್’
BREAKING: ಕೆಇಎಯಿಂದ ‘K-CET ಪರೀಕ್ಷೆ’ ಫಲಿತಾಂಶ ಪ್ರಕಟ: ಈ ರೀತಿ ರಿಸಲ್ಟ್ ಚೆಕ್ ಮಾಡಿ