Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಶ್ವೇತಭವನದಲ್ಲಿ ‘ಒನ್ ಬಿಗ್ ಬ್ಯೂಟಿಫುಲ್ ಬಿಲ್’ಗೆ ಸಹಿ ಹಾಕಿದ ಟ್ರಂಪ್ | ‘One Big Beautiful Bill’

05/07/2025 7:51 AM

ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ವಿಮಾನದ ಪೈಲಟ್ ಟೇಕ್ ಆಫ್ ಆಗುವ ಮೊದಲೇ ಅಸ್ವಸ್ಥ : ಆಸ್ಪತ್ರೆಗೆ ದಾಖಲು

05/07/2025 7:40 AM

BREAKING : ಖಾಸಗಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿ ಸಾವು : ಹೊತ್ತಿ ಉರಿದ ಬಸ್, ಪ್ರಯಾಣಿಕರು ಪಾರು!

05/07/2025 7:29 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ ಸರ್ಕಾರದಿಂದ 4,686 PU ಕಾಲೇಜು ಅತಿಥಿ ಉಪನ್ಯಾಸಕರ ಭರ್ತಿಗೆ ಗ್ರೀನ್ ಸಿಗ್ನಲ್
KARNATAKA

ರಾಜ್ಯ ಸರ್ಕಾರದಿಂದ 4,686 PU ಕಾಲೇಜು ಅತಿಥಿ ಉಪನ್ಯಾಸಕರ ಭರ್ತಿಗೆ ಗ್ರೀನ್ ಸಿಗ್ನಲ್

By kannadanewsnow0703/06/2024 5:16 AM
vidhana soudha
vidhana soudha

*ಅವಿನಾಶ್‌ ಆರ್‌ ಭೀಮಸಂದ್ರ

ಬೆಂಗಳೂರು: 2024-25 ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ ಉಪನ್ಯಾಸಕರುಗಳ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರುಗಳನ್ನು ಮಾಡಿಕೊಳ್ಳುವ ಬಗ್ಗೆ ಆದೇಶವನ್ನು ಹೊರಡಿಸಲಾಗಿದೆ.

ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ ಉಲ್ಲೇಖ (01) ರ ಸರ್ಕಾರದ ಆದೇಶದಲ್ಲಿ 2024-25 ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ ಉಪನ್ಯಾಸಕರ ಹುದ್ದೆಗಳು, ಬಡ್ತಿ, ವಯೋನಿವೃತ್ತಿ. ನಿಧನ ಹಾಗೂ ಇತರೆ ಕಾರಣಗಳಿಂದ ತೆರವಾಗಬಹುದಾದ ಉಪನ್ಯಾಸಕರ ಹುದ್ದೆಗಳು ಹಾಗೂ ಹೊಸ ಸಂಯೋಜನೆಗಳಿಗೆ ಹುದ್ದೆ ಮಂಜೂರಾಗದ ವಿಷಯಗಳಿಗೆ ನೇಮಕ ಮಾಡಿಕೊಳ್ಳಬೇಕಾದ ಅತಿಥಿ ಉಪನ್ಯಾಸಕರು ಒಟ್ಟು 4689 ಉಪನ್ಯಾಸಕರ ಹುದ್ದೆಗಳಿಗೆ ಮಾಸಿಕ ರೂ. 12,000/- (ಹನ್ನೆರೆಡು ಸಾವಿರ ಮಾತ್ರ) ರಂತೆ ಗೌರವಧನದ ಆಧಾರದಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳಲು ಆದೇಶಿಸಲಾಗಿದ್ದು, ಮಾರ್ಚ್ 2025 ರ ಅಂತ್ಯಕ್ಕೆ ಖಾಲಿಯಾಗುವ ಹುದ್ದೆಗಳಿಗೆ, ಕಾರ್ಯಭಾರ ಕಡಿಮೆ ಇರುವ ವಿವಿಧ ವಿಷಯಗಳ ಉಪನ್ಯಾಸಕರುಗಳನ್ನು ಸರಿದೂಗಿಸಿದ ನಂತರ ಲಭ್ಯವಾಗುವ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಲು ಅನುಮತಿಸಿದೆ.

ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ ವಿವಿಧ ವಿಷಯಗಳ ಉಪನ್ಯಾಸಕರ ಹುದ್ದೆಗಳನ್ನು ಕಡಿಮೆ ಕಾರ್ಯಭಾರವಿರುವ ವಿಷಯಗಳ ಉಪನ್ಯಾಸಕರುಗಳಿಂದ ಸರಿದೂಗಿಸಿದ ನಂತರ ಉಳಿದ ಹುದ್ದೆಗಳಿಗೆ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕಾದ ಸಂಖ್ಯೆ, ಸಂಯೋಜನೆಯನ್ನು ಮಂಜೂರು ಮಾಡಿ ಹುದ್ದೆ ಮಂಜೂರು ಮಾಡದ ವಿಷಯಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕಾದ ಸಂಖ್ಯೆಯನ್ನು ಹಾಗೂ ನೇಮಕ ಮಾಡಿಕೊಳ್ಳಬೇಕಾದ ಒಟ್ಟು ಅತಿಥಿ ಉಪನ್ಯಾಸಕರ ಸಂಖ್ಯೆ ಮಾಹಿತಿಯನ್ನು ಒದಗಿಸುವಂತೆ ಉಲ್ಲೇಖ (02) ರಲ್ಲಿ ಜಿಲ್ಲಾ ಉಪ ನಿರ್ದೇಶಕರುಗಳಿಂದ ಕೋರಲಾಗಿತ್ತು. ಅದರಂತೆ ಉಲ್ಲೇಖ (03) ರ ಪತ್ರಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಉಪನಿರ್ದೇಶಕರುಗಳು ಮಾಹಿತಿ ಒದಗಿಸಿರುತ್ತಾರೆ.

ಸರ್ಕಾರದ ಆದೇಶ ಸಂಖ್ಯೆ ಇಡಿ 72 ಎಸ್‌ಟಿ 2016 ದಿನಾಂಕ: 04-07-2016 ರಲ್ಲಿನ ಷರತ್ತಿಗೊಳಪಟ್ಟು ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 2024-25 ನೇ ಶೈಕ್ಷಣಿಕ ಸಾಲಿನ ಅವಧಿಗೆ ಖಾಲಿಯಿರುವ ಬೋಧಕ ಹುದ್ದೆಗಳಿಗೆದುರಾಗಿ ಒಟ್ಟು 4689 ಅತಿಥಿ ಉಪನ್ಯಾಸಕರನ್ನು ಅನುಬಂಧದಲ್ಲಿ ಸೂಚಿಸಿರುವ ಸಂಖ್ಯೆಗೆ ಅನುಗುಣವಾಗಿ ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡಿದೆ. 2024-25 ನೇ ಸಾಲಿನ ಆಯವ್ಯಯ ಲೆಕ್ಕಶೀರ್ಷಿಕೆ: 2202-02-109-0-13-324 Honorarium ವೆಚ್ಚದಡಿ  ಗೌರವಧನ ಪಾವತಿಗಾಗಿ ಒದಗಿಸಿರುವ ಅನುದಾನದಿಂದ ಭರಿಸುವುದು. ಈಗ ಸರ್ಕಾರದಿಂದ ಅನುಮತಿ ನೀಡಲಾಗಿರುವ ಸಂಖ್ಯೆಗೆ ಅನುಗುಣವಾಗಿ ಮಾತ್ರ ನೇಮಕ ಮಾಡಿಕೊಳ್ಳತಕ್ಕದ್ದು. ಹೆಚ್ಚುವರಿ ನೇಮಕಾತಿಗೆ ಯಾವುದೇ ಪ್ರಸ್ತಾವನೆ ಸಲ್ಲಿಸತಕ್ಕದ್ದಲ್ಲ ಎಂದು ಈ ಮೂಲಕ ತಿಳಿಸಿದೆ.

ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವಾಗ ಈ ಕೆಳಕಂಡ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನೇಮಕ ಮಾಡಿಕೊಳ್ಳಲು ಸೂಚಿಸಿದೆ.
1. ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ. 55 ರಷ್ಟು ಅಂಕಗಳನ್ನು ಪಡೆದುಕೊಂಡ ಅಭ್ಯರ್ಥಿಗಳನ್ನು ಅತಿಥಿ ಉಪನ್ಯಾಸಕರಾಗಿ ನೇಮಕ ಮಾಡಿಕೊಳ್ಳುವುದು.
2. ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ, ಕಡಿಮೆ ಕಾರ್ಯಭಾರ ಹೊಂದಿರುವ ವಿಷಯಗಳ ಉಪನ್ಯಾಸಕರನ್ನು ಜಿಲ್ಲೆಯ ಇತರೆ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನಿಯೋಜಿಸಿದ ನಂತರ ಉಳಿಕೆ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸುವುದು.
3. ಉಪನ್ಯಾಸಕರೇ ಇಲ್ಲದಿರುವ ಕಡೆ ಹಾಗೂ ನಿಯೋಜನೆಯಂತಹ ಬದಲಿ ವ್ಯವಸ್ಥೆ ಮಾಡಲು ಸಾಧ್ಯವಿಲ್ಲದಿರುವ ಕಡೆ ಮಾತ್ರ ಅತಿಥಿ ಉಪನ್ಯಾಸಕರನ್ನು ಉಪಯೋಗಿಸಿಕೊಳ್ಳಬಹುದು.
4. ಮಂಜೂರಾದ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳಿಗೆ ಹಾಗೂ ಸಂಯೋಜನೆಯನ್ನು ಮಂಜೂರು ಮಾಡಿ ಹುದ್ದೆ ಮಂಜೂರಾಗದ ವಿಷಯಗಳಿಗೆ ಮಾತ್ರ ಅತಿಥಿ ಉಪನ್ಯಾಸಕರ ಸೇವೆಯನ್ನು ಉಪಯೋಗಿಸಿಕೊಳ್ಳತಕ್ಕದ್ದು.
5. ಪ್ರತಿ ಅತಿಥಿ ಉಪನ್ಯಾಸಕರಿಗೆ ವಾರದಲ್ಲಿ ಗರಿಷ್ಠ 10 ಗಂಟೆಗಳ ಕಾರ್ಯಭಾರವನ್ನು ಮಾತ್ರ ನಿರ್ವಹಿಸಲು ಅನುಮತಿ
ನೀಡಬಹುದು.
6. ಯಾವುದೇ ಕಾಲೇಜಿನಲ್ಲಿ ಪ್ರತಿ ವಿಷಯದಲ್ಲಿ ವಾರದಲ್ಲಿ 10/12 ಗಂಟೆಗಳಿಗಿಂತ ಹೆಚ್ಚು ಕಾರ್ಯಭಾರವಿದ್ದಲ್ಲಿ ಇಬ್ಬರು ಅತಿಥಿ ಉಪನ್ಯಾಸಕರನ್ನು ಉಪಯೋಗಿಸಿಕೊಳ್ಳಬಹುದು.
7. ಈ ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂ ಉಪನ್ಯಾಸಕರ ನೇಮಕಾತಿ ಆಗುವವರೆಗೆ ಅಥವಾ 2024-25 ನೇ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಮಾತ್ರ ಬಳಸಿಕೊಳ್ಳತಕ್ಕದ್ದು.
8. ಸರ್ಕಾರದ ನಿಯಮಗಳಲ್ಲಿ ಈ ಅವಧಿಯಲ್ಲಿ ಖಾಯಂ ಉಪನ್ಯಾಸಕರು ನೇಮಕಾತಿ ಹೊಂದಿ ಕರ್ತವ್ಯಕ್ಕೆ ಹಾಜರಾದ ತಕ್ಷಣದಿಂದ ಅತಿಥಿ ಉಪನ್ಯಾಸಕರ ಕಾರ್ಯನಿರ್ವಹಣೆಯು ತಂತಾನೆ ರದ್ದಾಗುತ್ತದೆ.
9. ಪ್ರಾಚಾರ್ಯರ ಬೋಧನಾ ವಿಷಯವೇ ಇರುವ ಹುದ್ದೆ ಖಾಲಿ ಇದ್ದಲ್ಲಿ, ಅಂತಹ ಹುದ್ದೆಯ ಕಾರ್ಯಭಾರವು ವಾರದಲ್ಲಿ 10 ಗಂಟೆಗೆ ಮೀರದಿದ್ದಲ್ಲಿ ಅತಿಥಿ ಉಪನ್ಯಾಸಕರ ಸೇವೆಯನ್ನು ಬಳಸುವಂತಿಲ್ಲ.
10. ಆಯಾ ವಿಷಯದಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಲು ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳು ಮುಂದೆ ಬಂದಲ್ಲಿ ಅಂತಹವರ ಪೈಕಿ ಸ್ನಾತಕೋತ್ತರ ಪದವಿಯಲ್ಲಿ ಹೆಚ್ಚಿನ ಅಂಕ ಪಡೆದವರನ್ನು ಆಯಾ ಕಾಲೇಜಿನ ಪ್ರಾಚಾರ್ಯರು ಹಾಗೂ ಕಾಲೇಜಿನ ಹಿರಿಯ ಉಪನ್ಯಾಸಕರು ಇರುವ ಸಮಿತಿಯ ಮೂಲಕ ಆಯ್ಕೆ ಮಾಡತಕ್ಕದ್ದು.
11. ಅತಿಥಿ ಉಪನ್ಯಾಸಕರಿಗೆ ನೀಡುವ ಗೌರವ ಧನವನ್ನು ವೇತನ ಲೆಕ್ಕ ಶೀರ್ಷಿಕೆ “2202-02-109-0-13-324 (ಗೌರವಧನ)” ಇದರಡಿ ಭರಿಸುವುದು.
12. ಅತಿಥಿ ಉಪನ್ಯಾಸಕರುಗಳ ಸೇವೆಯನ್ನು ಬಳಸಿಕೊಳ್ಳುವಾಗ ಅವರಿಗೆ ಸಕ್ಷಮ ಪ್ರಾಧಿಕಾರದ ಆದೇಶವಿಲ್ಲದೆ ಯಾವುದೇ ಆದೇಶವನ್ನು ನೀಡಬಾರದು. ಇವರ ಹೆಸರುಗಳನ್ನು ಖಾಯಂ ಸಿಬ್ಬಂದಿಯ ಹಾಜರಾತಿ ವಹಿಯಲ್ಲಿ ನಮೂದಿಸಬಾರದು. ಗೌರವಧನ ವಿತರಿಸಿದ್ದಕ್ಕೆ ಅವರಿಂದ ಸೂಕ್ತ ರಸೀದಿಯನ್ನು ಪಡೆದುಕೊಳ್ಳುವುದು.
13. ಈ ರೀತಿ ನೇಮಕ ಮಾಡಿಕೊಂಡ ಉಪನ್ಯಾಸಕರಿಗೆ ಯಾವುದೇ ರೀತಿಯ ಸೇವಾ ಪ್ರಮಾಣ ಪತ್ರ ನೀಡಬಾರದು ಹಾಗೂ ಸೇವಾ ಪುಸ್ತಕ ತೆರಯಬಾರದು. ಅಲ್ಲದೆ ಹಾಜರಾತಿಯನ್ನು ಪ್ರತ್ಯೇಕವಾಗಿ ಪ್ರಾಚಾರ್ಯರೇ ನಿರ್ವಹಿಸತಕ್ಕದ್ದು,
14. ಯಾವುದೇ ಸರ್ಕಾರಿ/ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ/ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರನ್ನು ಅತಿಥಿ ಉಪನ್ಯಾಸಕರಾಗಿ ನೇಮಿಸಿಕೊಳ್ಳತಕ್ಕದ್ದಲ್ಲ.
15. ಈ ರೀತಿ ಆಯ್ಕೆಯಾಗುವ ಅತಿಥಿ ಉಪನ್ಯಾಸಕರು, ಅತಿಥಿ ಉಪನ್ಯಾಸಕರಾಗಿ ಸಲ್ಲಿಸುವ ಸೇವೆಯು ಇತರೆ ಯಾವುದೇ ಸರ್ಕಾರಿ ಸೇವಾ ಸಕ್ರಮಾತಿಗೆ ಪರಿಗಣಿಸತಕ್ಕದ್ದಲ್ಲ.
16. ದೀರ್ಘಾವಧಿ ರಜೆಯಿಂದ ಉಂಟಾಗುವ ಖಾಲಿ ಹುದ್ದೆಗೆ ಅಥವಾ ಅನಧಿಕೃತ ಗೈರು ಹಾಜರಿಯಿಂದ ಉಂಟಾಗುವ ಖಾಲಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಬಾರದು.
17. ನೇಮಕ ಮಾಡಿಕೊಂಡ ಅತಿಥಿ ಉಪನ್ಯಾಸಕರ ವಿವರಗಳನ್ನು ಮಾತ್ರ ಕಡ್ಡಾಯವಾಗಿ ಜಿಲ್ಲಾ ಉಪನಿರ್ದೇಶಕರಿಗೆ ಕಳುಹಿಸತಕ್ಕದ್ದು. ಈ ಕಚೇರಿಗೆ ಯಾವುದೇ ಅಡಕಗಳನ್ನು ಕಳುಹಿಸಕೂಡದು.
18. ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಡಿಮೆ ಕಾರ್ಯಭಾರವಿರುವ ವಿಷಯಗಳ ಉಪನ್ಯಾಸಕರುಗಳನ್ನು ಜಿಲ್ಲೆಯ ಅವಶ್ಯಕ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯಭಾರ ಸರಿದೂಗಿಸಲು ತಿಳಿಸಿದೆ. ಸಂಬಂಧಿಸಿದ ಕಾಲೇಜಿನ ಪ್ರಾಂಶುಪಾಲರುಗಳು ಸದರಿ ಮಾಹಿತಿಯನ್ನು ಜಿಲ್ಲಾ ಉಪನಿರ್ದೇಶಕರುಗಳಿಗೆ ಒದಗಿಸತಕ್ಕದ್ದು.
19. ಕಡಿಮೆ ಕಾರ್ಯಭಾರವಿರುವ ವಿಷಯಗಳ ಉಪನ್ಯಾಸಕರುಗಳನ್ನು ಬೇರೆ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸರಿದೂಗಿಸಲು ಲಭ್ಯವಿಲ್ಲದ ಪಕ್ಷದಲ್ಲಿ ಅಂತಹ ಉಪನ್ಯಾಸಕರುಗಳ ಮಾಹಿತಿಯನ್ನು ಇಲಾಖೆಗೆ ತಪ್ಪದೇ ಸಲ್ಲಿಸತಕ್ಕದ್ದು. 20. ಕಡಿಮೆ ಕಾರ್ಯಭಾರವಿರುವ ವಿಷಯಗಳ ಉಪನ್ಯಾಸಕರುಗಳನ್ನು ಜಿಲ್ಲೆಯ ಅವಶ್ಯಕ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯಭಾರ ಸರಿದೂರಿಸಲು ಸಂಬಂಧಿಸಿದ ಕಾಲೇಜಿನ ಪ್ರಾಂಶುಪಾಲರುಗಳು ಮಾಹಿತಿಯನ್ನು ಜಿಲ್ಲಾ ಉಪನಿರ್ದೇಶಕರುಗಳಿಗೆ ಒದಗಿಸದಿದ್ದಲ್ಲಿ ಅಥವಾ ಅಂತಹ ವಿಷಯಗಳ ಉಪನ್ಯಾಸಕರನ್ನು ಜಿಲ್ಲಾ ಉಪನಿರ್ದೇಶಕರು ಕಾರ್ಯಭಾರ ಸರಿದೂಗಿಸಲು ಬಳಸಿಕೊಳ್ಳದೇ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು, ಅತಿಥಿ ಉಪನ್ಯಾಸಕರ ಗೌರವಧನವನ್ನು ದುರುಪಯೋಗ ಪಡಿಸಿಕೊಳ್ಳುವುದು ಕಂಡುಬಂದಲ್ಲಿ, ಅಂತಹ ಅಧಿಕಾರಿಗಳ ಮೇಲೆ ನಿಯಮಾನುಸಾರ ಶಿಸ್ತುಕ್ರಮ ಜರುಗಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು.
21. ಈ ಹಿಂದಿನ ಶೈಕ್ಷಣಿಕ ಸಾಲಿನಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳುವಾಗ ಸರ್ಕಾರದ ನಿಯಮಗಳನ್ನು ಹಾಗೂ ಇಲಾಖೆಯ ನಿರ್ದೇಶನವನ್ನು ಪಾಲಿಸದೇ, ಅಂದರೆ, ಕಾರ್ಯಭಾರವನ್ನು ಸರಿದೂಗಿಸದೇ ಅಥವಾ ಅವಶ್ಯಕತೆ ಇಲ್ಲದೇ ಇರುವ ಕಾಲೇಜುಗಳಿಗೂ ಸಹ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿ ಗೌರವಧನವನ್ನು ವಿತರಿಸಿರುವುದಾಗಿ ಗುರುತರವಾದ ಆಪಾದನೆಗಳನ್ನು/ದೂರುಗಳನ್ನು ಅನೇಕ ಜಿಲ್ಲಾ ಉಪನಿರ್ದೇಶಕರ ಮೇಲೆ ಇಲಾಖೆಯಲ್ಲಿ ಸ್ವೀಕೃತಗೊಂಡಿರುತ್ತದೆ. ಈ ಹಿನ್ನೆಲೆಯಲ್ಲಿ, ಸದರಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ನಿಯಮ ಹಾಗೂ ಇಲಾಖೆಯ ನಿರ್ದೇಶನಗಳನ್ನು ಪಾಲಿಸಲು ಆದೇಶಿಸಿದೆ. ತಪ್ಪಿದಲ್ಲಿ, ಅಂತಹ ಜಿಲ್ಲಾ ಉಪನಿರ್ದೇಶಕರು/ಪ್ರಾಂಶುಪಾಲರ ಮೇಲೆ ನಿಯಮಾನುಸಾರ ಸರ್ಕಾರಕ್ಕೆ ಶಿಸ್ತುಕ್ರಮ ಜರುಗಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು.

Job News: Applications invited for the post of Guest Lecturers in Government Pre-University Colleges in the State ಉದ್ಯೋಗವಾರ್ತೆ: ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
Share. Facebook Twitter LinkedIn WhatsApp Email

Related Posts

BREAKING : ಖಾಸಗಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿ ಸಾವು : ಹೊತ್ತಿ ಉರಿದ ಬಸ್, ಪ್ರಯಾಣಿಕರು ಪಾರು!

05/07/2025 7:29 AM1 Min Read

BREAKING : ಭಾರಿ ಮಳೆ ಹಿನ್ನೆಲೆ : ಈ ಜಿಲ್ಲೆಗಳಲ್ಲಿ ಇಂದು ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

05/07/2025 7:18 AM1 Min Read

BREAKING : ಮೈಸೂರಲ್ಲಿ ಹುಲಿ ದಾಳಿಗೆ ಒಂದು ಹಸು ಬಲಿ, ಎರಡು ಹಸುಗಳಿಗೆ ಗಂಭೀರ ಗಾಯ : ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ!

05/07/2025 7:13 AM1 Min Read
Recent News

ಶ್ವೇತಭವನದಲ್ಲಿ ‘ಒನ್ ಬಿಗ್ ಬ್ಯೂಟಿಫುಲ್ ಬಿಲ್’ಗೆ ಸಹಿ ಹಾಕಿದ ಟ್ರಂಪ್ | ‘One Big Beautiful Bill’

05/07/2025 7:51 AM

ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ವಿಮಾನದ ಪೈಲಟ್ ಟೇಕ್ ಆಫ್ ಆಗುವ ಮೊದಲೇ ಅಸ್ವಸ್ಥ : ಆಸ್ಪತ್ರೆಗೆ ದಾಖಲು

05/07/2025 7:40 AM

BREAKING : ಖಾಸಗಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿ ಸಾವು : ಹೊತ್ತಿ ಉರಿದ ಬಸ್, ಪ್ರಯಾಣಿಕರು ಪಾರು!

05/07/2025 7:29 AM

BREAKING : ಭಾರಿ ಮಳೆ ಹಿನ್ನೆಲೆ : ಈ ಜಿಲ್ಲೆಗಳಲ್ಲಿ ಇಂದು ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

05/07/2025 7:18 AM
State News
KARNATAKA

BREAKING : ಖಾಸಗಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿ ಸಾವು : ಹೊತ್ತಿ ಉರಿದ ಬಸ್, ಪ್ರಯಾಣಿಕರು ಪಾರು!

By kannadanewsnow0505/07/2025 7:29 AM KARNATAKA 1 Min Read

ಚಿತ್ರದುರ್ಗ : ಚಿತ್ರದುರ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರವಾದ ಅಪಘಾತ ಸಂಭವಿಸಿದ್ದು ಬೈಕಗೆ ಖಾಸಗಿ ಬಸ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ…

BREAKING : ಭಾರಿ ಮಳೆ ಹಿನ್ನೆಲೆ : ಈ ಜಿಲ್ಲೆಗಳಲ್ಲಿ ಇಂದು ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

05/07/2025 7:18 AM

BREAKING : ಮೈಸೂರಲ್ಲಿ ಹುಲಿ ದಾಳಿಗೆ ಒಂದು ಹಸು ಬಲಿ, ಎರಡು ಹಸುಗಳಿಗೆ ಗಂಭೀರ ಗಾಯ : ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ!

05/07/2025 7:13 AM

BIG NEWS : ಲಿಂಗಾಯಿತ ಧರ್ಮದಲ್ಲಿರುವ ಜಂಗಮರು ‘ಬೇಡ’ & ‘ಬುಡ್ಗ’ ಜಂಗಮರಲ್ಲ : ಹೈಕೋರ್ಟ್

05/07/2025 6:14 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.