ಹಾಸನ: ಹಾಸನ ಪೆನ್ ಡ್ರೈವ್ ಹಂಚಿಕೆ ವೈರಲ್ ಮಾಡಿದಂತ ಪ್ರಕರಣ ಸಂಬಂಧ ಶಾಸಕ ಎ.ಮಂಜು ಅವರನ್ನು ಪೊಲೀಸರು ಸತತ 1 ಗಂಟೆಯಿಂದ ವಿಚಾರಣೆ ನಡೆಸುತ್ತಿದ್ದಾರೆ.
ಈಗಾಗಲೇ ಹಾಸನ ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಇಬ್ಬರು ಜೈಲು ಪಾಲಾಗಿದ್ದಾರೆ. ಅಶ್ಲೀಲ ವೀಡಿಯೋ ಕೇಸಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಎಸ್ಐಟಿ ವಶದಲ್ಲಿದ್ದಾರೆ. ಸಂತ್ರಸ್ತೆ ಕಿಡ್ನ್ಯಾಪ್ ಕೇಸಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ಭವಾನಿ ರೇವಣ್ಣ ಬಂಧನದ ಭೀತಿಯಲ್ಲಿದ್ದಾರೆ. ಹೆಚ್.ಡಿ ರೇವಣ್ಣ ಅಂತೂ ಜಾಮೀನು ಪಡೆದು ಹೊರಗಿದ್ದಾರೆ.
ಇದರ ನಡುವೆ ಅರಕಲಗೂಡು ಶಾಸಕ ಎ.ಮಂಜು ಅವರನ್ನು ಹಾಸನದ ಸೈಬರ್ ಕ್ರೈಂ ಠಾಣೆಯ ಪೊಲೀಸರು, ಹಾಸನ ಪೆನ್ ಡ್ರೈವ್ ಹಂಚಿಕೆ ಪ್ರಕರಣ ಸಂಬಂಧ ವಿಚಾರಣೆ ನಡೆಸುತ್ತಿದ್ದಾರೆ.
ಹಾಸನ ಸೈಬರ್ ಕ್ರೈಂ ಠಾಣೆಯ ಎಎಸ್ಪಿ ಎಂ.ಕೆ ತಮ್ಮಯ್ಯ ಅವರ ನೇತೃತ್ವದಲ್ಲಿ ಶಾಸಕ ಎ.ಮಂಜು ಅವರನ್ನು ಸತತ 1 ಗಂಟೆಯಿಂದ ವಿಚಾರಣೆ ನಡೆಸಲಾಗುತ್ತಿದೆ. ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.
Alert : ʻಮೊಬೈಲ್ʼ ಬಳಕೆದಾರೇ ಗಮನಿಸಿ : ಈ ಕರೆಗಳನ್ನು ಸ್ವೀಕರಿಸದಂತೆ ಸರ್ಕಾರ ಎಚ್ಚರಿಕೆ