ಬೆಂಗಳೂರು: ನೇಹಾ ಹಿರೇಮಠ ಅವರು ಬೆಂಗಳೂರಿನ ಬೇಗೂರು ರೋಡ್, ಹೊಂಗಸಂದ್ರದ ವಾರ್ಡ್ ನಂಬರ್ 135ರಲ್ಲಿ ವಾಸವಿರುವುದಾಗಿ ವಿಳಾಸ ನೀಡಿ, ಬೇಡ ಜಂಗಮ ಜಾತಿ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮಕ್ಕೆ ದಲಿತ ಪರ ಸಂಘಟನೆಗಳು ಆಗ್ರಹಿಸಿದ್ದಾವೆ.
ನೇಹಾ ಹಿರೇಮಠ ಅವರು ಬೆಂಗಳೂರಿನ ಬೇಗೂರು ರೋಡ್, ಹೊಂಗಸಂದ್ರದ ವಾರ್ಡ್ ನಂಬರ್ 135ರಲ್ಲಿ ವಾಸವಿರುವುದಾಗಿ ವಿಳಾಸ ನೀಡಿ, ಬೇಡ ಜಂಗಮ ಜಾತಿ ಪ್ರಮಾಣಪತ್ರ ಪಡೆದಿರುವುದು ಈಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಹುಬ್ಬಳ್ಳಿ ನಿವಾಸಿಯಾದ ನೇಹಾ ಹಿರೇಮಠ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ. ಅಲ್ಲದೆ, ಅವರು ಬೆಂಗಳೂರು ವಿಳಾಸ ನೀಡಿ ಬೇಡ ಜಂಗಮ ಜಾತಿ ಪ್ರಮಾಣಪತ್ರ ಪಡೆದಿದ್ದಾರೆ. ಇದು ಪರಿಶಿಷ್ಟರ ಹಕ್ಕುಗಳನ್ನು ಕಸಿಯುವ ಹುನ್ನಾರವಾಗಿದೆ ಅಂಥ ಆಕ್ರೋಶ ವ್ಯಕ್ತಪಡಿಸಲಾಗಿದೆ.