ಬೆಂಗಳೂರು : ಇತ್ತೀಚಿಗೆ ಸಣ್ಣಪುಟ್ಟ ವಿಷಯಗಳಿಗೆ ಕೆಲವರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಅಂತಹದ್ದೇ ಘಟನೆ ಇದೀಗ ಬೆಂಗಳೂರಿನಲ್ಲಿ ನಡೆದಿದ್ದು, ಮೊಟ್ಟೆ ತಿನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿಗಳ ನಡುವೆ ಗಲಾಟೆ ಶುರುವಾಗಿದೆ. ಈ ವೇಳೆ ಪತ್ನಿ ಮನನೊಂದು ಮನೆಯ ಮೇಲಿಂದ ಹಾರಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿಯಲ್ಲಿ ನಡೆದಿದೆ
ಹೌದು ಉತ್ತರ ಪ್ರದೇಶದ ಮೂಲದ ಪೂಜಾ (31) ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪತಿ ಅನಿಲ್ ಕುಮಾರ್ (35) ನನ್ನು ಪೊಲೀಸರು ವಶಕ್ಕೆ ಪಡೆಡಿದ್ದಾರೆ. ಎರಡು ವರ್ಷಗಳ ಹಿಂದೆ ದಂಪತಿ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದರು ಎನ್ನಲಾಗುತ್ತಿದೆ. ಊಟದ ವೇಳೆ ಮೊಟ್ಟೆ ತಿನ್ನುವ ವಿಚಾರಕ್ಕೆ ದಂಪತಿ ನಡುವೆ ಜಗಳ ಶುರುವಾಗಿದೆ.
ನಾನು ಮನೆ ಯಜಮಾನ ನನಗೆ ಒಂದು ಮೊಟ್ಟೆ ಹೆಚ್ಚು ಬೇಕೆಂದು ಪತಿ-ಪತ್ನಿಯ ಜೊತೆ ಜಗಳವಾಡಿದ್ದಾನೆ.ಊಟಕ್ಕೆ ಕುಳಿತಿದ್ದಾಗ ಪತ್ನಿ ಪೂಜಾ ಮೇಲೆ ಅನಿಲ್ ಹಲ್ಲೆ ಮಾಡಿದ್ದಾನೆ. ಪತಿಯ ತಾರತಮ್ಯ ಭಾವನೆಗೆ ಬೇಸತ್ತು ಪೂಜಾ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತ ಪೂಜಾಳ ಮರಣೋತ್ತರ ಪರೀಕ್ಷೆ ನಡೆದಿದೆ. ನಂತರ ಕುಟುಂಬದ ಸದಸ್ಯರಿಗೆ ಪೂಜಾಳ ಮೃತದೇಹವನ್ನು ಹಸ್ತಾಂತರಿಸಲಾಗಿದೆ. ಪೂಜಾ ಆತ್ಮಹತ್ಯೆಗೆ ಕಾರಣವಾದ ಪತಿ ಅನಿಲ್ ಕುಮಾರ್ ಇದೀಗ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.