ಶಿವಮೊಗ್ಗ: ಜೂನ್.1ರ ನಾಳೆ ಸೊರಬದ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಗಿಸಲಾಗಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಸೊರಬ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಪ್ರಭು ಸಾಹುಕಾರ್ ಅವರು, ದಿನಾಂಕ 01-06-2024ರ ನಾಳೆ ಬೆಳಿಗ್ಗೆ 9 ಗಂಟೆಯಿಂದ 3 ಗಂಟೆಯವರೆಗೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಸೊರಬ ಇಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದಿದ್ದಾರೆ.
ಜಿಲ್ಲಾ ಆರೋಗ್ಯ ಕಲ್ಯಾಣಾಧಿಕಾರಿಗಳು ಶಿವಮೊಗ್ಗ, ರಕ್ತನಿಧಿ ಘಟ, ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆ ಶಿವಮೊಗ್ಗ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸೊರಬ, ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ, ಸೊರಬ ಹಾಗೂ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಸೊರಬ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಯಾರು ರಕ್ತದಾನ ಮಾಡಬಹುದು?
ಕನಿಷ್ಠ 45 ಕೆಜಿ ದೇಹ ತೂಕ ಇರುವಂತ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದಾಗಿದೆ. 18 ರಿಂದ 60 ವರ್ಷದ ಒಳಗಿನ ಪುರುಷರು ಮತ್ತು ಮಹಿಳೆಯರು, ಕನಿಷ್ಠ 12.5 ಗ್ರಾ ಹಿಮೋಗ್ಲೋಬಿನ್ ಪ್ರಮಾಣ ರಕ್ತದಲ್ಲಿ ಇರೋರು ರಕ್ತದಾನ ಮಾಡಬಹುದಾಗಿದೆ. ಆದ್ರೇ ರಕ್ತದಾನ ಮಾಡುವಾಗ ರಕ್ತದ ಒತ್ತಡ ಸಮವಾಗಿರಬೇಕು ಅಂತ ಮಾಹಿತಿ ನೀಡಿದ್ದಾರೆ.
ಯಾರು ರಕ್ತದಾನ ಮಾಡುವಂತಿಲ್ಲ?
ಒಂದು ವರ್ಷದಿಂದ ಈಚೆಗೆ ಮಲೇರಿಯಾ, ಟೈಪೈಡ್, ಜಾಂಡೀಸ್ ಆದವರು ರಕ್ತದಾನವನ್ನು ಮಾಡುವಂತಿಲ್ಲ. ಅಲ್ಲದೇ ಒಂದು ವರ್ಷದ ಈಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾದವರು ರಕ್ತದಾನ ಮಾಡಬಾರದು. ಗರ್ಭಿಣಿ ಸ್ತ್ರೀಯರು, ಹಾಲುಣಿಸುವಂತ ತಾಯಂದಿರು, ಋತುಸ್ರಾವದಲ್ಲಿರುವ ಸ್ತ್ರೀಯರು ರಕ್ತದಾನ ಮಾಡುವಂತಿಲ್ಲ ಅಂತ ತಿಳಿಸಿದ್ದಾರೆ.
ನಾಳೆ ತಪ್ಪದೇ ಸೊರಬ ತಾಲೂಕು ಆಸ್ಪತ್ರೆಯ ರಕ್ತದಾನದಲ್ಲಿ ಭಾಗಿಯಾಗಿ, ರಕ್ತದಾನ ಮಾಡಿ
ಜೂನ್.1ರ ನಾಳೆಯಂದು ಆರೋಗ್ಯವಂತ ಯುವಕ, ಯುವತಿಯರು ತಪ್ಪದೇ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಸೊರಬ ಇಲ್ಲಿಗೆ ಆಗಮಿಸಿ, ರಕ್ತದಾನ ಮಾಡಿ. ರಕ್ತದಾನದ ತುರ್ತು ಅವಶ್ಯಕತೆ ಇರುವಂತವರಿಗೆ ಇದರಿಂದ ಸಹಾಯವಾಗಲಿದೆ. ರಕ್ತದಾನ ಮಹಾದಾನ, ಬನ್ನಿ, ಭಾಗವಹಿಸಿ, ರಕ್ತದಾನ ಮಾಡಿ ಅಂತ ಡಾ.ಪ್ರಭು ಸಾಹುಕಾರ್ ಮನವಿ ಮಾಡಿದ್ದಾರೆ.
BREAKING: ರಾಜ್ಯದ ಮತ್ತೊಂದು ಹಗರಣ ‘SIT ತನಿಖೆ’ಗೆ ವಹಿಸಿ ಸರ್ಕಾರ ಆದೇಶ
ಕಾಂಗ್ರೆಸ್ ಸರಕಾರ ಕರ್ನಾಟಕ ರಾಜ್ಯವನ್ನು ಮುಸ್ಲಿಂ ರಾಜ್ಯವೆಂದು ಘೋಷಣೆ ಮಾಡಲಿ: ಕೆ.ಎಸ್ ಈಶ್ವರಪ್ಪ ಸವಾಲು