ಹಾಸನ : ಇತ್ತೀಚಿಗೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕದಾಳು ಸಮೀಪದ ಮುತ್ತಿಗೆ ಗ್ರಾಮದ ಕೆರೆಯಲ್ಲಿ ನಾಲ್ಕು ಜನ ಮಕ್ಕಳು ಮುಳುಗಿ ಸಾವನ್ನಪ್ಪಿದ್ದರು ಇದೀಗ, ಬೇಲೂರು ತಾಲೂಕಿನ ನರಸೀಪುರ ಗ್ರಾಮದಲ್ಲಿ ಕೆರೆಯಲ್ಲಿ ಮುಳುಗಿ ಮೂವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಹೌದು ಹಾಸನ ಜಿಲ್ಲೆಯೇ ಬೇಲೂರು ತಾಲೂಕಿನ ನರಸೀಪುರದ ಕೆರೆಯಲ್ಲಿ ಮುಳುಗಿ ಮೂರು ಮಕ್ಕಳು ಸಾವನ್ನಪ್ಪಿದ್ದರೆ. ದೀಕ್ಷಿತ್ (10) ನಿತ್ಯಶ್ರೀ (12) ಕುಸುಮ (6) ಮೃತ ಪಟ್ಟ ಮಕ್ಕಳು ಎಂದು ಹೇಳಲಾಗುತ್ತಿದೆ. ಹಸುಗಳನ್ನು ಕೆರೆ ಬಳಿ ಕಟ್ಟಿ ಆಟ ಆಡುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಘಟನಾ ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲುಮುಟ್ಟಿದ್ದು, ಹಳೇಬೀಡು ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.
ಅಲ್ಲದೆ ಕಳೆದ ಕೆಲವು ದಿನಗಳ ಹಿಂದೆ ಜಿಲ್ಲೆಯ ಆಲೂರು ತಾಲೂಕಿನ ಕದಾಳು ಸಮೀಪ ಮುತ್ತಿಗೆ ಗ್ರಾಮದಲ್ಲಿ ಮೇ.16 ರಂದು ಈಜಲು ತೆರಳಿದ್ದ ನಾಲ್ವರು ಮಕ್ಕಳಾದ ವಿಶ್ಚಾಸ್, ಪೃಥ್ಚಿ, ಜೀವನ್ ಹಾಗೂ ಬೇಲೂರು ತಾಲ್ಲೂಕು ಮೂಲದ ಸಾತ್ವಿಕ್ ನೀರುಪಾಲಾಗಿದ್ದರು. ಘಟನೆ ವಾಸುವ ಮುನ್ನವೇ ಇದೀಗ ಹಾಸನ ಜಿಲ್ಲೆಯಲ್ಲಿ ಮತ್ತೊಂದು ದುರ್ಘಟನೆ ಸಂಭವಿಸಿದೆ.