ಬೆಂಗಳೂರು: ಬೆಂಗಳೂರು: ಎಸ್ಐಟಿ ಬಂಧಿಸಲ್ಪಟ್ಟಿದ್ದಂತ ಪ್ರಜ್ವಲ್ ರೇವಣ್ಣಗೆ ಕೋರ್ಟ್ ಎಸ್ಐಟಿ ವಶಕ್ಕೆ ನೀಡಿ ಆದೇಶಿಸಿತ್ತು. ಪುತ್ರನ ಬೆನ್ನಲ್ಲೇ ಅಣ್ಣನಿಗೂ ಕೋರ್ಟ್ ಶಾಕ್ ನೀಡಿದೆ. ಅದೇ ಮಹಿಳೆ ಅಪಹರಣ ಕೇಸಲ್ಲಿ ಭವಾನಿ ರೇವಣ್ಣ ಸಲ್ಲಿಸಿದ್ದಂತ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಹೀಗಾಗಿ ಭವಾನಿ ರೇವಣ್ಣ ಅವರನ್ನು ಬಂಧನ ಸಾಧ್ಯತೆ ಇದೆ.
ನ್ಯಾಯಾಲಯವು ಅಂಥ ಹೇಳಿದೆ. ನಿರೀಕ್ಷಣಾ ಜಾಮೀನು ಕೋರಿದ್ದ ಭವಾನಿ ರೇವಣ್ಣ (Bhavani Revanna ) ಅರ್ಜಿಯ ಆದೇಶವನ್ನು ಕೋರ್ಟ್ ಕಾಯ್ದಿರಿಸಿದ್ದು ತೀರ್ಪನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ (Court) ಮೆ 31 ಕ್ಕೆ ಅಂದರೆ ಇಂದು ಮುಂದೂಡಿತು. ಕೆ.ಆರ್. ನಗರ ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ (Bhavani Revanna) ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಮತ್ತೊಂದು ನೋಟಿಸ್ ನೀಡಿತ್ತು.
‘ಶಾಸಕರು– ಸಂಸದರ ವಿರುದ್ಧದ ಕ್ರಿಮಿನಲ್ (Criminal) ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ (Court) (ಸಿಸಿಎಚ್–82) ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ಈ ಆದೇಶವನ್ನು ನೀಡಿದ್ದಾರೆ. ಭವಾನಿ ರೇವಣ್ಣ ಪರ ಹೈಕೋರ್ಟ್‌ನ ಹಿರಿಯ ವಕೀಲ ಸಂದೇಶ್ ಜೆ.ಚೌಟ ವಾದ ಮಂಡಿಸಿದರು. ಎಸ್‌ಐಟಿ ಪರ ಹಾಜರಿದ್ದ ವಿಶೇಷ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ವಾದ ಮಂಡಿಸಿದರು.
ಇಂದಿಗೆ ಕಾಯ್ದಿರಿಸ್ದದಂತ ಆದೇಶದ ತೀರ್ಪನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪ್ರಕಟಿಸಿದೆ. ಭವಾನಿ ರೇವಣ್ಣ ಸಲ್ಲಿಸಿದ್ದಂತ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಹೀಗಾಗಿ ಅವರನ್ನು ಎಸ್ಐಟಿ ಅಧಿಕಾರಿಗಳು ಶೀಘ್ರವೇ ಬಂಧಿಸೋ ಸಾಧ್ಯತೆ ಇದೆ. ಈ ಮೂಲಕ ಪುತ್ರ ಪ್ರಜ್ವಲ್ ರೇವಣ್ಣ ಬೆನ್ನಲ್ಲೇ, ಅಮ್ಮ ಭವಾನಿ ರೇವಣ್ಣಗೂ ಕೋರ್ಟ್ ಬಿಗ್ ಶಾಕ್ ನೀಡಿದೆ.
ಕಾಂಗ್ರೆಸ್ ಸರಕಾರ ಕರ್ನಾಟಕ ರಾಜ್ಯವನ್ನು ಮುಸ್ಲಿಂ ರಾಜ್ಯವೆಂದು ಘೋಷಣೆ ಮಾಡಲಿ: ಕೆ.ಎಸ್ ಈಶ್ವರಪ್ಪ ಸವಾಲು
ಉದ್ಯೋಗವಾರ್ತೆ: ಶೀಘ್ರವೇ ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಕ್ರಮ: ಸಿಎಂ ಸಿದ್ದರಾಮಯ್ಯ