ಹಾಸನ : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದು ಎನ್ನಲಾದ ಅಶ್ಲೀಲ ವಿಡಿಯೋ ಪೆನ್ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 18 ದಿನಗಳಿಂದ ಜೈಲಲ್ಲಿ ವಾಸವಿದ್ದ ಪ್ರೀತಂಗೌಡ ಆಪ್ತರಾಗಿರುವ ಆರೋಪಿಗಳಾದ ಲಿಖಿತ್ಗೌಡ ಹಾಗೂ ಚೇತನ್ ಇದೀಗ ಜೈಲಿಂದ ಬಿಡುಗಡೆಯಾಗಿದ್ದಾರೆ.
ಹೌದು ಹಾಸನ ಜೈಲಿನಿಂದ ಲಿಖಿತ್ ಗೌಡ, ಯಲಗೊಂದ ಚೇತನ್ ಬಿಡುಗಡೆಯಾಗಿದ್ದಾರೆ. ಹಾಸನದ ಮೂರನೇ ಹೆಚ್ಚುವರಿ ಸೇಷನ್ಸ್ ಕೋರ್ಟ್ ಪ್ರಕರಣದ ವಿಚಾರಣೆ ನಡೆಸಿ, ದೇಶ ಬಿಟ್ಟು ಹೋಗಬಾರದು ತನಿಖಾಧಿಕಾರಿ ಎದುರು ಹಾಜರಾಗಬೇಕು. ವಾರಕ್ಕೊಮ್ಮೆ ಹಾಜರಾಗಬೇಕೆಂದು ಶರತ್ತು ವಿಧಿಸಿ ಕೋರ್ಟ್ ಜಾಮೀನು ನೀಡಿದೆ. ಬಿಜೆಪಿಯ ಮಾಜಿ ಶಾಸಕ ಪ್ರೀತಮ್ ಗೌಡ ಆಪ್ತ ಲಿಖಿತ್ ಗೌಡ ಹಾಗೂ ಕಚೇರಿ ಸಹಾಯಕ ಯಲಗುಂದ ಚೇತನ್ ಇದೀಗ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಮೇ 12ರಂದು ಎಸ್ಐಟಿ ಪೊಲೀಸರು ಲಿಖಿತ್ ಗೌಡ ಹಾಗೂ ಚೇತನ್ ನನ್ನು ಬಂಧಿಸಿದ್ದರು. 18 ದಿನಗಳ ನಂತರ ಲಿಖಿತ್ ಗೌಡ ಚೇತನ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಮೇ 12 ರಂದು ಎಸ್ ಐ ಟಿ ಅಧಿಕಾರಿಗಳು ಈ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು ಇದೀಗ 18 ದಿನಗಳ ಜೈಲುವಾಸ ಅನುಭವಿಸಿ ಇಬ್ಬರು ಜೈಲಿನಿಂದ ಬಿಡುಗಡೆಯಾಗಿದ್ದಾರೆ.