*ಅವಿನಾಶ್ ಆರ್ ಭೀಮಸಂದ್ರ
ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿದೇಶಕ್ಕೆ ಪರಾರಿಯಾಗಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಒಂದು ತಿಂಗಳ ಬಳಿಕ ಕೊನೆಗೂ ಕೆಲವೇ ನಿಮಿಷಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದು, ಸದ್ಯ ಅವರನ್ನು ಎಸ್‌ಐಟಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. Prajwal revanna arrest
ಪ್ರಜ್ವಲ್ ರೇವಣ್ಣ ಆಗಮನದ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೋಲಿಸ್ ಇಲಾಖೆಯಿಂದ ಎಲ್ಲಾ ಸಿದ್ಧತೆಯನ್ನು ಮಾಡಿಕೊಳ್ಳ ಲಾಗಿತ್ತು. ತಮ್ಮ ಮೇಲಿರುವ ಆರೋಪಕ್ಕೆ ಸಂಬಂಧಸಿದಂತೆ ಪ್ರಜ್ವಲ್ ರೇವಣ್ಣ ಬಂಧನದ ಭೀತಿ ಎದುರಿಸುತ್ತಿದ್ಧರು. ಇದಲ್ಲದೆ ಅವರು ತಲೆ ಮರೆಸಿಕೊಂಡು ವಿದೇಶದಲ್ಲಿ ಇದ್ದುಕೊಂಡೇ ಭಾರತಕ್ಕೆ ಬರುವುದರ ಬಗ್ಗೆ ಕಳೆದ ಎರಡು ದಿನಗಳ ಹಿಂದೆ ವಿಡಿಯೋ ಸಂದೇಶವನ್ನು ರವಾನೆ ಮಾಡಿ ಇದ್ದಾರು.
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾಸ್ವಾಮಿ ಸ್ವಾಮಿ ಅವರು ಭಾರತಕ್ಕೆ ಬರುವಂತೆ ಖಡಕ್ ಸಂದೇಶ ರವಾನೆ ಮಾಡಿದ್ದರು, ಅದರೆ ಅವರು ಅದಕ್ಕೆ ಸೊಪ್ಪು ಹಾಕದೆ ತಮ್ಮ ಪಾಡಿಗೆ ತಾವು ವಿದೇಶದಲ್ಲಿ ಇದ್ದರು.
ಇತ್ತ ಆವರ ಪಾಸ್ ಪಾರ್ಟ್ ರದ್ದು ಮಾಡುವಂತೆ ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದು ಆಗ್ರಹಿಸಿದ್ದರು, ಇದ್ದಲ್ಲದೆ ಸಂಸದರಾಗಿ ಅವ್ರು ಮರು ಆಯ್ಕೆ ಆಗದೇ ಹೋದಲ್ಲಿ ಆವರ ರಾಜತಾಂತ್ರಿಕ ಪಾಸ್ ಪೋರ್ಟ್ ಕೂಡಾ ರದ್ದು ಮಾಡಿ ಪ್ರಜ್ವಲ್ ರೇವಣ್ಣನವರು ಯಾವುದೇ ಕ್ಷಣದಲ್ಲಿ ವಿದೇಶದಿಂದ ಅವರನ್ನು ಬಂಧಿಸಿ ಕರೆ ತರುವ ಸಾಧ್ಯತೆಯನ್ನು ತಳ್ಳಿ ಹಾಕುವಂತೆ ಇರಲಿಲ್ಲ ಇದಲ್ಲದೆ ರಾಜ್ಯ ಸರ್ಕಾರ ಕೂಡಾ ಕೇಂದ್ರದ ಮೇಲೆ ಪ್ರಜ್ವಲ್ ರೇವಣ್ಣ ನವರ ಪತ್ತೆ ಹಚ್ಚಲು ಒತ್ತಡ ಹೇರುತ್ತಲೇ ಬಂದಿತ್ತು.
ಮುಂದೆ ಬರಬಹುದಾದ ಕಾನೂನು ಸಂಕಟ ದಿಂದ ಪಾರಾಗಲು ಪ್ರಜ್ವಲ್ ರೇವಣ್ಣ ಕೆಲವೇ ನಿಮಿಷಗಳ ಹಿಂದೆ ಬೆಂಗಳೂರಿನ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು, ಈ ನಡುವೆ ಮೊದಲು cifs ಪಡೆ ಅವರನ್ನು ತಮ್ಮ ವಶಕ್ಕೆ ತೆಗೆದು ಕೊಂಡು ಬಳಿಕ ಅವರನ್ನು ಇಮಿಗ್ರೇಷನ್ ಅಧಿಕಾರಿಗಳ ಬಳಿ ಕರೆದು ಕೊಂಡು ಹೋದರು, ಈ ವೇಳೆ ಕಾನೂನು ಪ್ರಕ್ರಿಯೆ ಮುಗಿದ ಕೂಡಲೇ ಎಸ್ ಐ ಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಸದ್ಯ ಪ್ರಜ್ವಲ್ ರನ್ನು ಎಸ್ ಐ ಟಿ ವಶಕ್ಕೆ ಪಡೆದುಕೊಂಡು ಸಿಐಡಿ ಕಚೇರಿಯತ್ತ ಕರೆದುಕೊಂಡು ಹೋಗುತ್ತಿದ್ದು, ಅವರನ್ನು ಶನಿವಾರ ಸಂಜೆ ನ್ಯಾಯಾಧೀಶರ (ಇಂದು) ಮುಂದೆ ಹಾಜರು ಪಡಿಸಿ ಅವರನ್ನು ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆ ಇದೇ ಎನ್ನಲಾಗಿದೆ. ಶನಿವಾರ ಬೆಳಗ್ಗೆ ಅವರನ್ನು ಬೌರಿಂಗ್ ಆಸ್ಪತ್ರೆ ಅಥವಾ ವಿಕ್ಟೋರಿಯಾ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಕರೆದುಕೊಂಡು ಹೋಗಲಿದ್ದಾರೆ ಎನ್ನಲಾಗಿದೆ.
ಈ ನಡುವೆ ಲೈಂಗಿಕ ದೌರ್ಜನ್ಯ, ಸಂತ್ರಸ್ತೆಯ ಅಪಹರಣ ಸೇರಿ ಎಫ್‌ಐಆರ್ ದಾಖಲಾಗಿರುವ ಮೂರು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ನೀಡಬೇಕು ಎಂಬುದಾಗಿ ಪ್ರಜ್ವಲ್ ರೇವಣ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಇಂದು ಅಂದರೆ ಶನಿವಾರ ಅದರ ಅರ್ಜಿ ವಿಚಾರಣೆ ನಡೆಯಲಿದೆ.
ಲೋಕಸಭಾ ಚುನಾವಣೆ ಮತದಾನಕ್ಕೂ ಮುನ್ನ ಹಾಸನದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದೆ ಎನ್ನಲಾದ ಅಶ್ಲೀಲ ವಿಡಿಯೋಗಳಿರುವ ಪೆನ್‌ಡ್ರೈವ್ ಭಾರಿ ಸಂಚಲನ ಮೂಡಿಸಿತ್ತು. ಈ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಈಗಾಗಲೇ ಎಸ್‌ಐಟಿ ಅಧಿಕಾರಿಗಳು ಎಲ್ಲಾ ರೀತಿಯ ಸಿದ್ದತೆಯನ್ನು ಮಾಡಿಕೊಂಡಿದೆ. ಪ್ರಜ್ವಲ್ ವಿಚಾರಣೆ ವೇಳೆ ಮಹತ್ವದ ದಾಖಲೆ ಸಂಗ್ರಹಿಸಲು ಮುಂದಾದ ಎಸ್‌ಐಟಿ ತಂಡ ನಗರದ ಆರ್.ಸಿ.ರಸ್ತೆಯಲ್ಲಿರುವ ಸಂಸದರ ನಿವಾಸದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಮಲಗುತ್ತಿದ್ದ ಕೊಠಡಿಯಲ್ಲಿದ್ದ ಹಾಸಿಗೆ, ದಿಂಬು, ಹೊದಿಕೆ ಹಾಗೂ ಇತರೆ ವಸ್ತುಗಳನ್ನು ತಂಡ ವಶಕ್ಕೆ ಪಡೆದುಕೊಂಡಿದೆ.