ಬಾಗಲಕೋಟೆ: ಆಕೆಗೆ ನಾನು ಸ್ವಚ್ಚ ವಾಹಿನಿಯ ಸಾರಥಿಯಾಗಲೇ ಬೇಕು ಅನ್ನೋ ಛಲವಿತ್ತು. ಈ ಛಲವನ್ನು ಬಿಡದೇ ವಾಹನ ಚಾಲನೆ ಕಲಿತಂತ ಆಕೆ, ಕೊನೆಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸ್ವಚ್ಚ ವಾಹನದ ಸಾರಥಿಯಾಗಿದ್ದಾರೆ. ಯಾರು ಆಕೆ.? ಎಲ್ಲಿ ಅನ್ನೋ ಆಕೆಯ ಯಶೋಗಾಥೆಯನ್ನು ಮುಂದೆ ಓದಿ.
ಸ್ವಚ್ಛ ಭಾರತ ಮಿಷನ್ (ಗ್ರಾ)ಯೋಜನೆ ಕರ್ನಾಟಕದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಈ ಮೂಲಕ ಗ್ರಾಮದಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಸ್ವಚ್ಛ ಪರಿಸರ ನಿರ್ಮಾಣಕ್ಕಾಗಿ ಪ್ರತಿಯೊಬ್ಬ ಪ್ರಜೆಯೂ ಸ್ವಯಂ ಪ್ರೇರಣೆಯಿಂದ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಕೊಳ್ಳುವ ಮೂಲಕ ಸ್ವಚ್ಛ ಭಾರತ ಕನಸನ್ನು ಯಶಸ್ವಿಗೊಳಿಸುತ್ತಿದ್ದಾರೆ.
ಸ್ವ- ಸಹಾಯ ಸಂಘದ ಮಹಿಳೆಯರು ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿದ್ದಾರೆ. ಈ ಸಾಲಿನಲ್ಲಿ ಬಾಗಲಕೋಟೆ ಜಿಲ್ಲೆಯ ರಬಕವಿ- ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮ ಪಂಚಾಯಿತಿಯ ಸ್ವಚ್ಛ ವಾಹಿನಿ ಚಾಲಕಿ ಸರೋಜಾ ಕೂಡ ಪ್ರಮುಖರಾಗಿದ್ದಾರೆ. ಇವರು ಪ್ರತಿದಿನ ಬೆಳಿಗ್ಗೆ ಪ್ರತಿ ವಾರ್ಡ್ ಹಾಗೂ ಗ್ರಾಮದ ಪ್ರಮುಖ ರಸ್ತೆಯ ಮೂಲಕ ಸಂಚರಿಸಿ ಕಸ ಸಂಗ್ರಹಿಸಿ ವಿಲೇವಾರಿ ಮಾಡುವ ಮೂಲಕ ಸ್ವಚ್ಚತಾ ವಾಹನದ ಸಾರಥಿಯಾಗಿ ಸೈ ಎನಿಸಿಕೊಂಡಿದ್ದಾರೆ.
ಗ್ರಾಮಗಳು ಸ್ವಚ್ಛವಾಗಿದ್ದರೆ ದೇಶ ಸ್ವಚ್ಛವಾಗಿರುತ್ತದೆ ಎಂಬ ಹಿನ್ನೆಲೆಯಲ್ಲಿ ಸ್ವಚ್ಚ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಗ್ರಾಮ ಪಂಚಾಯಿತಿಗಳಿಗೆ ಮನೆ ಮನೆಯಿಂದ ಕಸ ಸಂಗ್ರಹಣೆಗೆ ನೆರವಾಗಲು ಸ್ವಚ್ಛವಾಹಿನಿ ವಾಹನವನ್ನು ನೀಡಲಾಗಿದೆ. ವಾರದಲ್ಲಿ ನಿಗದಿಪಡಿಸಿದ ದಿನದಂದು ಸ್ವಚ್ಛಾಗ್ರಹಿಗಳು ಮನೆ ಮನೆಯಿಂದ ಹಸಿ ಮತ್ತು ಒಣ ಕಸವನ್ನು ಸಂಗ್ರಹಿಸುತ್ತಾರೆ.
ಇದರಂತೆ ಚಿಮ್ಮಡ ಗ್ರಾಮದಲ್ಲಿ ವಾರದಲ್ಲಿ ಎರಡು ದಿನ ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಚತಾ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಬುಧವಾರ ಮತ್ತು ಶನಿವಾರ ಮನೆ ಮನೆಗೆ ತೆರಳಿ ಕಸ ಸಂಗ್ರಹ ಮಾಡಲಾಗುತ್ತದೆ. ಗ್ರಾಮದಲ್ಲಿ ಸ್ವಚ್ಚ ವಾಹಿನಿಗಳಲ್ಲಿ ಕಸ ಸಂಗ್ರಹಣೆಯ ತರಬೇತಿ ಪಡೆದ ಮಹಿಳಾ ವಾಹನ ಚಾಲಕಿಯರನ್ನು ನೇಮಕ ಮಾಡುವ ಮೂಲಕ ಜಿ.ಪಂ ದಿಟ್ಟ ಹೆಜ್ಜೆ ಇಟ್ಟಿದೆ.
ಈ ಬಗ್ಗೆ ಮಾತನಾಡಿರುವಂತ ರಬಕವಿ- ಬನಹಟ್ಟಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಪ್ಪಾ ಪಟ್ಟಿಹಾಳ ಅವರು, “ರಬಕವಿ ಬನಹಟ್ಟಿ ತಾಲೂಕಿನಲ್ಲಿ 17 ಜನ ಮಹಿಳೆಯರು ಚಾಲನಾ ತರಬೇತಿ ಪಡೆದು ಈಗ ಸ್ವಚ್ಚತಾ ವಾಹನದ ಸಾರಥಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 58 ಜನ ಮಹಿಳೆಯರು ಸ್ವಚ್ಚವಾಹಿನಿಗಳಾಗಲು ತರಬೇತಿ ಪಡೆದಿದ್ದು, ಹಂತ ಹಂತವಾಗಿ ಪ್ರತಿ ತರಬೇತಿದಾರರಿಗೆ ಪೂರ್ಣ ಪ್ರಯಾಣದಲ್ಲಿ ಈ ಸೇವೆಗೆ ನಿಯುಕ್ತಿಗೊಳಿಸಲಾಗುವುದು ಎಂದಿದ್ದಾರೆ.
ಮಹಿಳೆಯರಿಗೆ ವಾಹನ ಚಾಲನೆ ತರಬೇತಿ
ಮಹಿಳೆಯರ ಆರ್ಥಿಕ ಭದ್ರತೆ, ಸ್ವಾವಲಂಬಿ ಬದುಕು, ಸಬಲೀಕರಣಕ್ಕಾಗಿ ಸ್ವ ಸಹಾಯ ಸಂಘದ ಆಸಕ್ತ ಮಹಿಳೆಯರಿಗೆ ವಾಹನ ಚಾಲನೆ ತರಬೇತಿ ನೀಡುವ ಮೂಲಕ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಈ ಮಹಿಳೆಯರು ವಾಹನ ಚಾಲನೆಯ ಪರವಾನಿಗೆ ಪಡೆದ ಮೇಲೆ ಗ್ರಾಮ ಪಂಚಾಯಿತಿಗಳು ಅಗತ್ಯಕ್ಕೆ ಅನುಗುಣವಾಗಿ ನೇಮಕಾತಿ ಮಾಡಿಕೊಳ್ಳುತ್ತವೆ.
ಸ್ವಚ್ಛವಾಹಿನಿ ಚಾಲಕಿಯ ಮಾತುಗಳು
ಬೀದಿ ವ್ಯಾಪಾರ ಮಾಡುತ್ತಿದ್ದ ನಾನು ತರಬೇತಿ ಪಡೆದು ಈಗ ಸಂತೋಷದಿಂದ ಸ್ವಚ್ಚ ವಾಹಿನಿಯ ವಾಹನ ಚಲಾಯಿಸುತ್ತಿದ್ದೇನೆ. ಇದರಿಂದ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಿದೆ ಸ್ವಚ್ಛ ವಾಹನ ಚಾಲಕಿ ಸರೋಜಾ ಮ್ಯಾದಾರ ತಿಳಿಸಿದ್ದಾರೆ.
ಮನೆ ಬಾಗಿಲುಗಳಿಗೆ ಸ್ವಚ್ಚ ವಾಹಿನಿ ವಾಹನ
ಚಿಮ್ಮಡ ಗ್ರಾಮದಲ್ಲಿ ವಾರದಲ್ಲಿ ಎರಡು ದಿನ ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಚತಾ ಕಾರ್ಯ ನಡೆಯುತ್ತಿದ್ದು, ಬುಧವಾರ ಮತ್ತು ಶನಿವಾರ ಸ್ವಚ್ಛವಾಹಿನಿಯ ಮೂಲಕ ಮನೆ ಮನೆಗೆ ತೆರಳಿ ಕಸ ಸಂಗ್ರಹ ಮಾಡಲಾಗುತ್ತಿದೆ.
BREAKING : ಕೊನೆಗೂ ‘ಲುಫ್ತಾನ್ಸ’ ಫ್ಲೈಟ್ ಏರಿದ ಪ್ರಜ್ವಲ್ : ಮ್ಯೂನಿಕ್ ಏರ್ಪೋರ್ಟ್ ನಿಂದ ವಿಮಾನ ಟೇಕ್ ಆಫ್!
ರೈಲ್ವೆ ಪ್ರಯಾಣಿಕರೇ ಗಮನಿಸಿ: ಹುಬ್ಬಳ್ಳಿಗೆ ಆಗಮಿಸುವ ರೈಲುಗಳ ಸಮಯ ಬದಲಾವಣೆ